Duniya Vijay : ಅಪ್ಪುಗಾಗಿ ವಿಶೇಷ ಬೇಡಿಕೆಯಿಟ್ಟ ನಟ ದುನಿಯಾ ವಿಜಯ್! ಇದು ಅಲ್ಲವಾ ನಿಜವಾದ ಸ್ನೇಹ ಅಂದ್ರೆ.!

Duniya Vijay : ಪುನೀತ್ ಅಂದ್ರೇನೆ ಹಾಗೇನೇ ಅದೊಂದು ಮಿನುಗುವ ನಕ್ಷತ್ರ ಎಂದಿಗೂ ಅವರ ಪ್ರಜ್ವಲಿಸಿಕೆ ಕಡಿಮೆ ಆಗುವುದಿಲ್ಲ ಎನ್ನುವುದನ್ನ ಇಂದಿಗೂ ಸಹ ತೋರಿಸಿಕೊಟ್ಟಿದ್ದಾರೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಮತ್ತು ಚಿತ್ರೋದ್ಯಮ ಹುಟ್ಟುಹಬ್ಬವನ್ನ ಉತ್ತಮ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ಇದನ್ನೂ ಕೂಡ ಓದಿ : Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.?

ರಾಜ್ಯದ್ಯಾಂತ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನ ಮಾಡುವ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಅದೇ ರೀತಿ ಅನೇಕ ಕಲಾವಿದರು ತಂತ್ರಜ್ಞರು ತಮ್ಮದೇ ರೀತಿಯಲ್ಲಿ ಅಪ್ಪುವನ್ನ ಸ್ಮರಿಸಿದ್ದಾರೆ. ಅದರಲ್ಲೂ ವಿಭಿನ್ನವಾಗಿ ಗಮನಸೆಳೆದದ್ದು ದುನಿಯಾ ವಿಜಯ್ ಅವರ ಟ್ವೀಟ್. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿರುವ ಅವರು ಅಪ್ಪುಗಾಗಿ ವಿಶೇಷ ಬೇಡಿಕೆವೊಂದನ್ನ ಇಟ್ಟಿದ್ದಾರೆ.

ಇನ್ನು ಮುಂದೆ ಪಠ್ಯ ಪುಸ್ತಕದಲ್ಲಿ ಅಂದರೆ ಅಪ್ಪು ಎಂದು ಓದಿಸುವಂತಾಗಲಿ ಎಂದಿದ್ದಾರೆ. ಅ ಅಕ್ಷರವನ್ನ ಕಲಿಸುವಾಗ ಅಪ್ಪು ಎಂದು ನಮೂದಿಸುವಂತೆ ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಪುನೀತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. ದುನಿಯಾ ವಿಜಯ್ ಈ ರೀತಿಯಲ್ಲಿ ಟ್ವೀಟ್ ಮಾಡುತ್ತಿದ್ದಂತೆಯೇ ಅಸಂಖ್ಯಾತ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಪ್ರಾಥಮಿಕ ಪಠ್ಯದಲ್ಲಿ ಅಪ್ಪು ಅವರ ಜೀವನ ಕುರಿತು ಪ್ರಕಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೇವಲ ಒಂದು ವಿಶ್ವವಿದ್ಯಾಲಯಕ್ಕೆ ಅವರ ಬದುಕನ್ನ ಸೀಮಿತ ಮಾಡದೇ ಎಲ್ಲಾ ಪಠ್ಯದಲ್ಲೂ ಅವರ ಜೀವನ ಸಂದೇಶ ಪ್ರಕಟವಾಗಬೇಕು ಅಂತ ಆಗ್ರಹಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply