Nithyananda: ಕೈಲಾಸ ದೇಶದ ಪೌರತ್ವ ಬೇಕಾ ? ನಿತ್ಯಾನಂದ ನೀಡಿದ್ದಾರೆ ಸುವರ್ಣಾವಕಾಶ ! ಇಲ್ಲಿದೆ ಕೊಡುಗೆಯ ವಿವರ । Kailasa

Nithyananda: ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಹೊತ್ತು ದೇಶದಿಂದ ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ (Godman Nithyananda) ಮತ್ತೆ ಸುದ್ದಿಗೆ ಬಂದಿದ್ದಾನೆ. ತಾನೇ ಸೃಷ್ಟಿಸಿರುವ ಕೈಲಾಸ (Kailasa) ದೇಶದಲ್ಲಿ ನೆಲೆಸಿರುವ ನಿತ್ಯಾನಂದ ಇದೀಗ ಕೈಲಾಸ ದೇಶದ ಇ-ಪೌರತ್ವ (E-Citizenship) ಹಾಗೂ ಇ-ವೀಸಾಗೆ ಅರ್ಜಿ ಆಹ್ವಾನಿಸಿದ್ದಾನೆ.

ಇದನ್ನೂ ಕೂಡ ಓದಿ : ನಟಿ ಲೀಲಾವತಿ ಪರಿಸ್ಥಿತಿ ಕಂಡು ಓಡೋಡಿ ಬಂದ ನಟ ಡಿ ಬಾಸ್ ದರ್ಶನ್ | D Boss Darshan | Leelavthi #Darshan

ಕೈಲಾಸವನ್ನು ಸರ್ವೋಚ್ಛ ಹಿಂದೂ ದೇಶ ಎಂದು ಕರೆದಿರುವ ನಿತ್ಯಾನಂದ, ಈ ಹಿಂದೆಯೇ ತನ್ನ ದೇಶಕ್ಕೆ ಬರುವ ಕುರಿತು ಮುಕ್ತ ಆಹ್ವಾನ ನೀಡಿದ್ದ, ಇದೀಗ ಮತ್ತೆ ತನ್ನ ದೇಶಕ್ಕೆ ಆಹ್ವಾನ ನೀಡಿದ್ದಾನೆ.

ನಿತ್ಯಾನಂದ ತನ್ನ ಕೈಲಾಸ ದೇಶಕ್ಕೆ ಆಗಮಿಸುವವರಿಗೆ ಪೌರತ್ವ, ವೀಸಾ ನೀಡುವುದರ ಜೊತೆಗೆ ಒಂದಷ್ಟು ವಿಶೇಷ ಸವಲತ್ತು ನೀಡುವುದಾಗಿ ಉಲ್ಲೇಖಿಸಿದ್ದಾನೆ. ಈ ಕುರಿತು ಟ್ವೀಟ್‌ ಮೂಲಕ ತಿಳಿಸಿದ್ದಾರೆ ನಿತ್ಯಾನಂದ ವೆಬ್‌ಸೈಟ್‌ (kailasa.org/e-citizen) ಅದರಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದ್ದಾನೆ ಎಂದು ವರದಿ ಯಾಗಿದೆ.

‘ಕೈಲಾಸ ದೇಶ’ದ ಇ-ಪೌರತ್ವ ಪಡೆದವರಿಗೆ ನಿತ್ಯಾನಂದ ವಿಶೇಷ ಸೌಲಭ್ಯ ಕಲ್ಪಿಸುವುದಾಗಿ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾನೆ. ಅದರ ವಿವರಗಳು ಹೀಗಿವೆ. ಕೈಲಾಸಕ್ಕೆ ಹೋಗಬಯಸುವ ಹೊಸ ಪ್ರಜೆಗಳಿಗೆ ವಿಶೇಷ ಹೋಮ ಮತ್ತು ಅಧ್ಯಾತ್ಮಿಕ ಸೇವೆ, ಸಂಸ್ಕೃತ ಮಂತ್ರಗಳ ಕಲಿಕಾ ಸೌಲಭ್ಯ ನಿತ್ಯಾನಂದನ ವಿಶೇಷ ದರ್ಶನ, ಆಶೀರ್ವಾದ, ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಳ್ಳಲು ಪೂರಕ ವಾತಾವರಣ ಸೇರಿದಂತೆ ಹಲವು ಸವಲತ್ತು ಕಲ್ಪಿಸುವುದಾಗಿ ತಿಳಿಸಿದ್ದಾನೆ.

ಇದನ್ನೂ ಕೂಡ ಓದಿ : ಪತ್ನಿ ವಿಜಯಲಕ್ಷ್ಮಿ ಜೊತೆ ಜಾಲಿ ಟ್ರಿಪ್ ಹೊರಟ ಡಿ ಬಾಸ್ ದರ್ಶನ್! ಎಲ್ಲಿಗೆ ಗೊತ್ತಾ.? | D Boss Darshan | Vijayalakshmi #Darshan

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply