ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ – ಯಾವುದೇ ಸ್ವಯಂ ಉದ್ಯೋಗ ಕೈಗೊಳ್ಳಲು ಬಡ್ಡಿ ಇಲ್ಲದೆ ಸಿಗುತ್ತೆ 5 ಲಕ್ಷ ಹಣ ಸಾಲ.!

ದೇಶದ ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನ ಜಾರಿಗೊಳಿಸುತ್ತಿದೆ. ಜೊತೆಗೆ ಮಹಿಳೆಯರನ್ನ ಆರ್ಥಿಕವಾಗಿ ಸದೃಢರನ್ನಾಗಿಸಲು ವಿವಿಧ ರೀತಿಯ ಸಹಾಯಧನ ಮತ್ತು ಸೌಲಭ್ಯವನ್ನ ಅನುಷ್ಠಾನಗೊಳಿಸುತ್ತಿದೆ. ಈಗ ಮಹಿಳೆಯರಿಗೆ ಯಾವುದೇ ರೀತಿಯ ಬಡ್ಡಿ ಇಲ್ಲದೇ ಐದು ಲಕ್ಷಗಳವರೆಗೆ ಸಾಲ ಸೌಲಭ್ಯ ನೀಡಲಾಗ್ತಾ ಇದೆ.

ನೀವು ಬ್ಯಾಂಕ್ ನಲ್ಲಿ ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಯಾವುದೇ ಉದ್ಯಮ ಆರಂಭಿಸುವುದಕ್ಕೆ ಅಥವಾ ತುರ್ತು ಪರಿಸ್ಥಿತಿ ಇದ್ದಾಗ ಸಾಲ ಮಾಡುವುದು ಸಹಜ. ಆದ್ರೆ ಬೇರೆ ಯಾವುದೇ ಬ್ಯಾಂಕ್‌ಗಳಲ್ಲಿ ನೀವು ಸಾಲ ಮಾಡಿದಾಗ ಅದಕ್ಕೆ ಅತೀ ಹೆಚ್ಚು ಬಡ್ಡಿಯನ್ನ ಪಾವತಿಸಬೇಕು. ಇದು ಎಷ್ಟೋ ಬಾರಿ ತೆಗೆದುಕೊಂಡ ಸಾಲಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತೆ. ಇದೇ ಕಾರಣಕ್ಕೆ ಸಾಕಷ್ಟು ಮಹಿಳೆಯರು ಸ್ವಂತ ಉದ್ಯಮ ಮಾಡುವ ಆಸೆಯನ್ನು ಕೈಬಿಟ್ಟಿದ್ದಾರೆ.

ಇದನ್ನೂ ಕೂಡ ಓದಿ : Poultry Farming Scheme : ಕೋಳಿ ಸಾಕಾಣಿಕೆ ಮಾಡಲು – 25 ಲಕ್ಷ ಸಹಾಯಧನ ರೈತರಿಗೆ, ನಿರುದ್ಯೋಗಿಗೆ, ಗೃಹಿಣಿಯರಿಗೆ.!

ಆದರೆ ಇನ್ನುಮುಂದೆ ಟೆನ್ಶನ್ ಬೇಡ. ಮಹಿಳೆಯರು ಕೂಡ ಸ್ವಂತ ಉದ್ಯಮ ಮಾಡಿ ಕೈ ತುಂಬಾ ಆದಾಯ ಗಳಿಸುವುದಕ್ಕೆ ಸರ್ಕಾರ ನೆರವು ನೀಡಲಿದೆ. ಒಂದೇ ಒಂದು ರೂಪಾಯಿಗಳ ಬಡ್ಡಿಯನ್ನ ಪಾವತಿ ಮಾಡದೇ ಒಂದರಿಂದ ಐದು ಲಕ್ಷಗಳವರೆಗೆ ಸಾಲವನ್ನ ಕೇಂದ್ರ ಸರ್ಕಾರ ನೀಡುತ್ತಿದೆ. ಆ ಯೋಜನೆಯ ಹೆಸರೇ ಲಕ್‌ಪತಿ ದೀದಿ ಯೋಜನೆ.

ಪ್ರಧಾನ ಮಂತ್ರಿ ಲಕ್‌ಪತಿ ದೀದಿ ಯೋಜನೆ

18 ವರ್ಷದಿಂದ 50 ವರ್ಷದ ಒಳಗಿನ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಸುಮಾರು 90 ಕೋಟಿ ಮಹಿಳೆಯರು ದೇಶದಲ್ಲಿ 83 ಲಕ್ಷ ಸ್ವಸಹಾಯ ಸಂಘದಲ್ಲಿ ಸದಸ್ಯರಾಗಿದ್ದಾರೆ. ಅಂತಹವರು ಅರ್ಜಿಯನ್ನು ಸಲ್ಲಿಸಬಹುದು. ಸ್ವಸಹಾಯ ಸಂಘದಲ್ಲಿ ಮಹಿಳೆಯರು ಯಾವುದೇ ವಸ್ತುವನ್ನ ತಯಾರಿಸಿ ದೇಶದ ಪ್ರತಿಷ್ಠಿತ ಎಕ್ಸಿಬಿಷನ್ ಗಳಲ್ಲಿ ಮತ್ತು ಮಾಲ್‌ಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಬಹುದು. ಒಂದರಿಂದ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲ ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು :-

  • ಸ್ವಸಹಾಯ ಸಂಘದ ಸದಸ್ಯತ್ವ ಪಡೆದುಕೊಂಡಿರಬೇಕು.
  • ಆಧಾರ್ ಕಾರ್ಡ್
  • ಬ್ಯಾಂಕಿನ ಖಾತೆಯ ವಿವರ,
  • ಪ್ಯಾನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗೆ – ರಾತ್ರೋರಾತ್ರಿ ಹೊಸ ರೂಲ್ಸ್ – ಎಲ್ಲರಿಗೂ ಈ ಕೆಲಸ ಕಡ್ಡಾಯ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಲಕ್‌ಪತಿ ದೀದಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿ ಒಪ್ಪಿಗೆ ಆದರೆ ಕೇಂದ್ರ ಸರ್ಕಾರ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ. ಮಹಿಳೆಯರ ಸ್ವಾವಲಂಬಿ ಬದುಕನ್ನ ಪ್ರೇರೇಪಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು. ಕೈತುಂಬಾ ಆದಾಯ ಗಳಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply