ಅಣ್ಣಾವ್ರ ಕುಟುಂಬಕ್ಕೆ ಅಪ್ಪು ನಂತರ ಮತ್ತೊಂದು ಹಾರ್ಟ್ ಅಟ್ಯಾಕ್ ದುರಂತ.!

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ತೀವ್ರ ಹೃದಯಾಘಾತದಿಂದ ಬ್ಯಾಂಕಾಕ್ ನಲ್ಲಿ ನಿಧನ ಹೊಂದಿರುವ ಸುದ್ಧಿಗೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿದೆ. ವರ್ಷದ ಹಿಂದಷ್ಟೇ, ಅದೇ ಅಣ್ಣಾವ್ರ ಕುಟುಂಬದ ಪವರ್ ಸ್ಟಾರ್ ಅಪ್ಪು ಹೃದಯಾಘಾತದಿಂದ ನಿಧನ ಹೊಂದಿದ್ದು, ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ಇದೀಗ ದೊಡ್ಮನೆ ಕುಟುಂಬದ ಮತ್ತೊಬ್ಬರು ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ಗೆ ಪ್ರವಾಸ ಹೋಗಿದ್ದ ವೇಳೆ ತೀವ್ರ ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಇಡೀ ಕನ್ನಡ ಚಿತ್ರ ರಂಗವನ್ನೇ ಬೆಚ್ಚಿ ಬೀಳಿಸಿದೆ.

ಇದನ್ನೂ ಕೂಡ ಓದಿ : Darshan Thoogudeepa : ಮೇಘಾ ಶೆಟ್ಟಿ ಬರ್ತ್ ಡೇಗೆ ‘ಡಿ ಬಾಸ್ ದರ್ಶನ್’ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತಾ.? ಶಾಕ್ ಆದ ನಟಿ.?

WhatsApp Group Join Now
Telegram Group Join Now

ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನ, 2007ರಲ್ಲಿ ವಿಜಯ ರಾಘವೇಂದ್ರ ಅವರೊಂದಿಗೆ ವಿವಾಹವಾಗಿತ್ತು. ಅನ್ಯೋನ್ಯವಾಗಿದ್ದಂತಹ ದಂಪತಿಗಳಿಗೆ ಶೌರ್ಯ ಅನ್ನುವಂತಹ ಪುತ್ರ ಕೂಡ ಇದ್ದಾರೆ. ಅಪೂರ್ವ ಸಿನಿಮಾದಲ್ಲಿ ನಟಿಸಿದ್ದರು ಸ್ಪಂದನ. ದೊಡ್ಮನೆ ಕುಟುಂಬದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ನಿರ್ಮಾಪಕ ಚಿನ್ನೇಗೌಡರ ಕುಟುಂಬದಲ್ಲಿ ಹಿರಿಯ ಸೊಸೆಯಾಗಿದ್ದ ಸ್ಪಂದನ, ತುಂಬಾ ಗೌರವದಿಂದ ಎಲ್ಲರ ಜೊತೆಗಿದ್ದರು. ಈ ರೀತಿಯ ದೊಡ್ಡ ಶಾಕ್ ಮತ್ತೊಮ್ಮೆ ಚಿತ್ರರಂಗಕ್ಕೆ ಬಂದೆರಗಿದೆ. ಇನ್ನು ನಾಳೆ ಅವರ ಪಾರ್ಥಿವ ಶರೀರವನ್ನ ಬೆಂಗಳೂರಿಗೆ ತರಲಾಗುತ್ತದೆ ಎಂದು ವಿಜಯ ರಾಘವೇಂದ್ರ ಅವರು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..