Gold Rule : ಚಿನ್ನ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಏಪ್ರಿಲ್ 1 ರಿಂದ ಈ ಹೊಸ ನಿಯಮ

Gold Rule : ಇಡೀ ಪ್ರಪಂಚಕ್ಕೆ ಹೋಲಿಸಿದರೆ ಚಿನ್ನವನ್ನು ಅತ್ಯಂತ ಆಮದು ಮಾಡಿಕೊಳ್ಳುವಂತಹ ದೇಶ ಎಂದರೆ ಅದು ಭಾರತ. ಇಡೀ ವಿಶ್ವದ ಹನ್ನೊಂದು ಪ್ರತಿಶತಕ್ಕೂ ಅಧಿಕ ಚಿನ್ನ ಎನ್ನುವುದು ನಮ್ಮ ಭಾರತ ದೇಶದಲ್ಲಿದೆ. ಅಷ್ಟರ ಮಟ್ಟಿಗೆ ನಮ್ಮ ದೇಶದ ಹೆಣ್ಣು ಮಕ್ಕಳು ಸ್ವರ್ಣಪ್ರಿಯರಾಗಿದ್ದಾರೆ ಎಂದರೆ ತಪ್ಪಾಗಲಾರದು.

ಏಪ್ರಿಲ್ 1ರಿಂದ ಚಿನ್ನದ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಇಲ್ಲಿದೆ ನೋಡಿ ಹೊಸ ನಿಯಮ! ಏನದು ಇಂದೇ ತಿಳಿಯಿರಿ. ಇದೇ ಬರುವ ಏಪ್ರಿಲ್ ಒಂದರಿಂದ ಚಿನ್ನದ ಮಾರಾಟಗಾರರು ಹಾಗೂ ಖರೀದಿದಾರರಿಗೆ ಹೊಸ ನಿಯಮ ಒಂದು ಜಾರಿಗೆ ಬರಲಿದೆ ಎನ್ನುವುದಾಗಿ ಸರ್ಕಾರದಿಂದ ಅದಿನಿಯಮದ ಸೂಚನೆ ಹೊರ ಬಂದಿದೆ. ಅಷ್ಟಕ್ಕೂ ಆ ಅಧಿನಿಯಮಗಳು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಕೂಡ ಓದಿ : Gold Rate Today : ಅಲ್ಪ ಏರಿಕೆ ಕಂಡ ಚಿನ್ನ! ಇಂದಿನ ಚಿನ್ನ ಹಾಗು ಬೆಳ್ಳಿಯ ಬೆಲೆ!

ಪ್ರತಿ ಚಿನ್ನದ ಗುಣಮಟ್ಟ ಹಾಗೂ ಟ್ರೇಸ್ ಮಾಡಲು ಮತ್ತು ಅಕ್ರಮ ಚಿನ್ನದ ಮಾರಾಟವನ್ನು ತಡೆಯಲು ಸರ್ಕಾರ ಈ ಕಠಿಣ ನಿಯಮವನ್ನು ಜಾರಿಗೆ ತಂದಿದ್ದು ಇದರ ಮೂಲಕ ಚಿನ್ನದ ಮಾರುಕಟ್ಟೆಯನ್ನು ಸುವ್ಯವಸ್ಥೆಯಲ್ಲಿ ಇಡುವಂತಹ ಪ್ರಯತ್ನವನ್ನು ಮಾಡಲಾಗುತ್ತಿದೆ.

ಹಾಲ್ ಮಾರ್ಕ್ ಇಲ್ಲದ ಚಿನ್ನವನ್ನು ಖರೀದಿ ಮಾಡುವುದು ಅಥವಾ ಮಾರಾಟ ಮಾಡುವುದು ಅಪರಾಧ ಎನ್ನುವುದಾಗಿ ಸರ್ಕಾರ ಎರಡು ವರ್ಷಗಳ ಹಿಂದೇನೆ ಘೋಷಿಸಿತ್ತು. ಆದರೆ ಇದೇ ಏಪ್ರಿಲ್ ಒಂದರಿಂದ ಇದನ್ನು ಕಠಿಣವಾಗಿ ಜಾರಿಗೆ ತಂದಿದ್ದು ಕಡ್ಡಾಯವಾಗಿ ಈ ಕುರಿತಂತೆ ನಿಯಮವನ್ನು ಪಾಲಿಸಲೇಬೇಕು ಎನ್ನುವುದಾಗಿ ಎಲ್ಲರಿಗೂ ಕೂಡ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಇದು ಪ್ರತಿಯೊಬ್ಬ ಚಿನ್ನದ ಮಾರಾಟಗಾರ ಹಾಗೂ ಖರೀದಿದಾರರಿಗೆ ಪಾಲಿಸಲೇ ಬೇಕಾದಂತಹ ನಿಯಮವಾಗಿದೆ.

HUID ಸಂಖ್ಯೆಯು ಆರು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಆಗಿದೆ. ಹಾಲ್‌ಮಾರ್ಕಿಂಗ್ ಸಮಯದಲ್ಲಿ ಇದು ಪ್ರತಿ ಆಭರಣಕ್ಕೆ ನೀಡಲಾಗುತ್ತದೆ ಮತ್ತು ಪ್ರತಿ ಚಿನ್ನದ ಐಟಂಗೆ ವಿಶಿಷ್ಟವಾದ ಗುರುತಿಸುವಿಕೆಯಾಗಿದೆ. ಆಭರಣಗಳನ್ನು ಅಸ್ಸೇಯಿಂಗ್ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರದಲ್ಲಿ ಹಸ್ತಚಾಲಿತವಾಗಿ ಅನನ್ಯ ಸಂಖ್ಯೆಯೊಂದಿಗೆ ಸ್ಟ್ಯಾಂಪ್ ಮಾಡಲಾಗಿದೆ. ಇಲಾಖೆಯ ಪ್ರಕಾರ, HUID ವೈಯಕ್ತಿಕ ಆಭರಣವನ್ನು ಪತ್ತೆಹಚ್ಚಲು ಸುಲಭಗೊಳಿಸುತ್ತದೆ ಮತ್ತು ಗುಣಮಟ್ಟದ ಭರವಸೆಯಾಗಿದೆ.

ಇದನ್ನೂ ಕೂಡ ಓದಿ : ಕಬ್ಜ ಚಿತ್ರಕ್ಕೆ ಯಾವ ಸರ್ಟಿಫಿಕೇಟ್? ಚಿತ್ರದ ರನ್‌ಟೈಮ್ ಎಷ್ಟು? | Kabza | Upendra | Sudeep

ಗ್ರಾಹಕರನ್ನು ರಕ್ಷಿಸಲು, ಗುರುತಿಸುವಿಕೆ ಮತ್ತು ಗುಣಮಟ್ಟದ ಭರವಸೆಯೊಂದಿಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳ ಖರೀದಿಯಲ್ಲಿ ಅವರ ವಿಶ್ವಾಸವನ್ನು ಹೆಚ್ಚಿಸಲು ಇದನ್ನು ಮಾಡಲಾಗುತ್ತಿದೆ ಎಂದು ಗ್ರಾಹಕರ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply