Darshan Thoogudeepa : ಕಾಟೇರ ಚಿತ್ರ ಪ್ರಮೋಷನ್ ಮಾಡಲ್ಲ ಎಂದು ಡಿ ಬಾಸ್ ಗೆ ಸವಾಲೆಸೆದ ಮಾಧ್ಯಮಗಳು

Darshan Thoogudeepa : ಬಾಕ್ಸ್ ಆಫೀಸ್ ಸುಲ್ತಾನ್ ಅಂದರೆ ಡಿ ಬಾಸ್ ದರ್ಶನ್ ಅವರನ್ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆಯಲು ಕಾರಣ ಅವರು ನಟಿಸಿರುವ ಎಲ್ಲಾ ಚಿತ್ರಗಳು ಹಿಟ್ ಆಗುವಂತದ್ದು. ದರ್ಶನ್ ಅವರು ಅತಿ ಹೆಚ್ಚು ನಂಬಿಕೆಯನ್ನು ತಮ್ಮ ಅಭಿಮಾನಿಗಳ ಮೇಲೆ ಇಟ್ಟಿದ್ದಾರೆ. ಇತ್ತೀಚಿಗೆ ಟ್ಯಾಟೂ ಕೂಡ ತಮ್ಮ ಅಭಿಮಾನಿಗಳ ಹೆಸರಲ್ಲೇ ಹಾಕಿಸಿಕೊಂಡಿದ್ದಾರೆ. ಇವರ ಅಭಿಮಾನಿಗಳಿಗೆ ಇವರೆಂದರೆ ತುಂಬಾನೇ ಇಷ್ಟ ಅದರಿಂದ ಇವರನ್ನು ದೇವರಂತೆ ಪೂಜಿಸುತ್ತಾರೆ.

ಇದನ್ನೂ ಕೂಡ ಓದಿ : Kiccha Sudeep : ಹೊಸ ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್!

ಆದರೆ ಡಿ ಬಾಸ್ ಅವರ ನೇರ ನುಡಿಗಳು ಕೆಲವು ಜನರಿಗೆ ಇಷ್ಟ ಆಗುವುದಿಲ್ಲ. ದರ್ಶನ್ ಅವರು ಆಡುವ ಮಾತುಗಳನ್ನ ಕಾಂಟ್ರವರ್ಸಿ ಮಾಡುತ್ತಾರೆ. ಹಾಗೂ ಇವರದ್ದೇ ತಪ್ಪು ಅನ್ನುವ ರೀತಿಯಲ್ಲಿ ತೋರಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಡಿ ಬಾಸ್ ಅವರನ್ನ ಕನ್ನಡದ ನ್ಯೂಸ್ ಚಾನೆಲ್ ಅವರು ಬ್ಯಾನ್ ಮಾಡುತ್ತಾರೆ. ಹಾಗೂ ಅವರ ಸುದ್ದಿಯನ್ನ ಪ್ರಸಾರ ಮಾಡುವುದಿಲ್ಲ ಅಂತ ಹೇಳುತ್ತಾರೆ. ನೀವು ನೋಡಿರುವ ಹಾಗೇ ಕ್ರಾಂತಿ ಚಿತ್ರಕ್ಕೆ ನ್ಯೂಸ್ ಚಾನೆಲ್ಗಳು ಸಪ್ಪೋರ್ಟ್ ಮಾಡುವುದಿಲ್ಲ. ಆದರೆ ಡಿ ಬಾಸ್ ಗೆ ಸಪ್ಪೋರ್ಟ್ ಆಗಿ ನಿಂತಿದ್ದು ಕೇವಲ ಅವರ ಅಭಿಮಾನಿಗಳು ಮಾತ್ರ.

ಆದರೆ ಕೆಲವರು ಈ ಬಾರಿ ಕಾಟೇರ ಚಿತ್ರಕ್ಕೆ ಸಪ್ಪೋರ್ಟ್ ಮಾಡುವುದಕ್ಕೆ ನ್ಯೂಸ್ ಚಾನೆಲ್ ಅವರು ಬರಬಹುದು ಅಂತ ಹೇಳುತ್ತಿದ್ದಾರೆ. ಆದರೆ ಕನ್ನಡ ಮಾಧ್ಯಮಗಳು ಡಿ ಬಾಸ್ ಅವರ ಸುದ್ದಿಯನ್ನ ತಾವು ಹಾಕುವುದಿಲ್ಲ ಅಂತ ಡೈರೆಕ್ಟ್ ಆಗಿ ಹೇಳಿದೆ. ಕಾಟೇರ ಸಿನಿಮಾಕ್ಕೂ ಕೂಡ ತಮ್ಮ ಯಾವುದೇ ರೀತಿಯ ಸಪೋರ್ಟ್ ಇರುವುದಿಲ್ಲ ಅಂತ ಖಡಾ-ಖಂಡಿತವಾಗಿ ಮಾಧ್ಯಮದವರು ತಿಳಿಸಿದ್ದಾರೆ. ಆದರೆ ಇದು ಡಿ ಬಾಸ್ ಮತ್ತು ಅವರ ಅಭಿಮಾನಿಗಳಿಗೆ ಏನು ವಿಷಯಾವೇ ಅಲ್ಲಾ. ಯಾಕಂದರೆ ಡಿ ಬಾಸ್ ಅವರಿಗೆ ಅವರ ಅಭಿಮಾನಿಗಳೇ ಸಾಕು ಅವರ ಚಿತ್ರವನ್ನ ಗೆಲ್ಲಿಸುವುದಕ್ಕೆ ಅನ್ನುವುದು ಅಭಿಮಾನಿಗಳ ವಾದ. ಹಾಗೆಯೇ, ಡಿ ಬಾಸ್ ಪರ ಯೌಟ್ಯುಬರ್ಸ್ ಅಭಿಮಾನಿಗಳು ಕೂಡ ಇದ್ದಾರೆ.

ಇದನ್ನೂ ಕೂಡ ಓದಿ : Katera : KGF ಅನ್ನೂ ಮೀರಿಸುತ್ತಂತೆ ಕಾಟೇರ! ಪ್ರಶಾಂತ್ ನೀಲ್ ಗೆ ಠಕ್ಕರ್ ಕೊಡಲು ರೆಡಿ ಅಂದ್ರಾ ತರುಣ್ ಸುಧೀರ್!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

1 thought on “Darshan Thoogudeepa : ಕಾಟೇರ ಚಿತ್ರ ಪ್ರಮೋಷನ್ ಮಾಡಲ್ಲ ಎಂದು ಡಿ ಬಾಸ್ ಗೆ ಸವಾಲೆಸೆದ ಮಾಧ್ಯಮಗಳು”

  1. ಯಾವ ಬಕೆಟ್ ಟಿವಿ ಮಾಧ್ಯಮಗಳು ಬೇಕಾಗಿಲ್ಲ , ನಮ್ಮ ಕನ್ನಡ ಅಭಿಮಾನಿಗಳು ಮತ್ತು ಯೂಟ್ಯೂಬರ್ಗಳು ಸಾಕು ಪ್ರಮೋಷನ್ ಮಾಡೋದಕ್ಕೆ. ನೀವು ರಾಜಕೀಯದವರ ಹೇಸಿಗೆ ತಿನ್ನೋಕೆ ಲಾಯಕ್ಕು.

    Reply

Leave a Reply