Ration Card Apply : ಒಂದೇ ಮನೆಯಲ್ಲಿರುವ, ಆದರೆ ಬೇರೆ ಬೇರೆ ಪಡಿತರ ಚೀಟಿ ಹೊಂದಿರುವ ಅತ್ತೆ ಹಾಗು ಸೊಸೆಗೆ ಇದೀಗ ಸರ್ಕಾರದಿಂದ ಹೊಸ ನಿಯಮ ಜಾರಿಗೆ

ಒಂದೇ ಮನೆಯಲ್ಲಿರುವ, ಆದರೆ ಬೇರೆ ಬೇರೆ ಪಡಿತರ ಚೀಟಿ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ ಘೋಷಣೆ!

Ration Card Apply : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳಲ್ಲಿ, ಗೃಹಲಕ್ಷ್ಮಿ(Gruhalakshmi) ಹಾಗು ಅನ್ನಭಾಗ್ಯ(Annabhagya) ಯೋಜನೆಗೆ ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ರಾಜ್ಯ ಸರ್ಕಾರ ಒಂದೊಂದಾಗಿ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದ ನಂತರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

Whatsapp Group Join
Telegram channel Join
Ration Card Apply
Ration Card Apply

ಇದನ್ನೂ ಕೂಡ ಓದಿ : Traffic Fine : ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ.! ವಾಹನ ಸವಾರರಿಗೆ ಗುಡ್ ನ್ಯೂಸ್!

ರೇಷನ್ ಕಾರ್ಡ್ ನಲ್ಲಿ ಯಾರು ಮನೆಯ ಯಜಮಾನಿ ಆಗಿರುತ್ತಾರೋ, ಅಂತಹವರು ಮಾತ್ರ ಈ ಗೃಹಲಕ್ಷ್ಮಿ ಯೋಜನೆಯ ₹೨೦೦೦/- ರೂಪಾಯಿ ಹಣ ಪಡೆಯಲು ಅರ್ಹರು. ಆದರೆ ಇದೇ ವಿಚಾರಕ್ಕಾಗಿ ಒಂದೇ ಮನೆಯಲ್ಲಿರುವ ಅತ್ತೆ ಸೊಸೆ ಪ್ರತ್ಯೇಕ ಪಡಿತರ ಚೀಟಿಗಾಗಿ ಅರ್ಜಿಯನ್ನ ಸಲ್ಲಿಸುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಅಂತಹವರಿಗೆ ಬಿಗ್ ಶಾಕ್ ಕೊಟ್ಟಿದೆ.

Whatsapp Group Join
Telegram channel Join

ಪ್ರತೀ ಮನೆಯ ಯಜಮಾನಿ ಮಹಿಳೆಯರಿಗೆ ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯದಲ್ಲಿ ೧.೨೬ ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸುಮಾರು ೧.೧೦ ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ.

ರಾಜ್ಯ ಸರ್ಕಾಡಿಂದ ಪ್ರತೀ ತಿಂಗಳು ₹೨೦೦೦/ ರೂಪಾಯಿ ಹಣ ನೀಡಲಾಗುತ್ತಿದ್ದು, ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಹ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದರೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಮೂಲಕ ₹೨೦೦೦/- ರೂಪಾಯಿ ಹಣವನ್ನ ಅರ್ಹ ಮಹಿಳೆಯರ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮೀ ಎರಡನೇ ಕಂತಿನ ₹೪,೦೦೦/- ರೂಪಾಯಿ ಹಣ ಬಿಡುಗಡೆ.? ನೀವು ಈ ಕೆಲಸ ಮಾಡುವುದು ಕಡ್ಡಾಯ.!

ಒಂದೇ ಮನೆಯಲ್ಲಿ ವಾಸಿಸುತ್ತಿರುವ ಅತ್ತೆ-ಸೊಸೆಗೆ ಶಾಕ್ ನೀಡಿದ ರಾಜ್ಯ ಸರಕಾರ

ಪ್ರತೀ ಮನೆಯ ರೇಷನ್ ಕಾರ್ಡ್ ನಲ್ಲಿ ಯಾರು ಮನೆಯ ಯಜಮಾನಿ ಆಗಿರುತ್ತಾರೋ, ಅಂತಹವರು ಮಾತ್ರ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಬಹುದು. ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥೆಯಾಗಿ ಅತ್ತೆ ಇರಬೇಕೋ ಅಥವಾ ಸೊಸೆ ಇರಬೇಕೋ ಅನ್ನುವುದನ್ನ ಪ್ರತಿ ಮನೆಯವರೇ ನಿರ್ಧರಿಸಬೇಕಾಗುತ್ತದೆ. ಒಂದು ರೇಷನ್ ಕಾರ್ಡ್ ಗೆ ಕೇವಲ ಒಬ್ಬರು ಮಾತ್ರ ಈ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗುತ್ತಾರೆ.

ಇದಕ್ಕೆ ಪರ್ಯಾಯ ಮಾರ್ಗ ಎನ್ನುವಂತೆ ಕೆಲವು ಒಂದೇ ಮನೆಯಲ್ಲಿ ವಾಸಿಸುವ ಅತ್ತೆ ಸೊಸೆಯರು ತಾವು ಪ್ರತ್ಯೇಕವಾಗಿದ್ದೇವೆ ಎಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನ ಸಲ್ಲಿಸುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯ ಆಹಾರ ಇಲಾಖೆಯು ಅಂತವರಿಗೆ ಪ್ರತ್ಯೇಕ ಪಡಿತರ ಚೀಟಿ ನೀಡದಂತೆ ಆದೇಶ ಹೊರಡಿಸಲು ಮುಂದಾಗಿದೆ. ₹೨೦೦೦/- ರೂಪಾಯಿ ಹಣ ಪಡೆಯಲು ಪ್ರತ್ಯೇಕ ಪಡಿತರ ಚೀಟಿಯ ನೀರಿಕ್ಷೆಯಲ್ಲಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರ ಭಾರೀ ಶಾಕ್ ನೀಡಿದೆ.

ಇದನ್ನೂ ಕೂಡ ಓದಿ : BPL AAY APL : ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಭರ್ಜರಿ ಗುಡ್ ನ್ಯೂಸ್.!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply