PM Kisan Samman : 16ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಂದಿಲ್ಲ ಅಂದ್ರೆ – ಈ ಕೆಲಸ ಮಾಡಿದ ತಕ್ಷಣ ಹಣ ಜಮಾ ಆಗುತ್ತೆ

PM Kisan Samman : ಕೇಂದ್ರ ಸರ್ಕಾರದಿಂದಾಗಿ ಈಗಾಗಲೇ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರ ಖಾತೆಗಳಿಗೆ ಹದಿನಾರನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಅಂದರೆ ಕೇಂದ್ರದ ಮೋದಿ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM Kisan Samman) ಯೋಜನೆಯ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ರಾಜ್ಯದ ಸಾಕಷ್ಟು ರೈತರ ಖಾತೆಗಳಿಗೆ ಇನ್ನು ಕೂಡ ಹಣ ಬಂದು ತಲುಪಿಲ್ಲ. ಆದರೆ ಯಾರಿಗೆಲ್ಲ ಈ ಹಣ ಬಂದು ತಲುಪಿಲ್ಲವೋ.. ಅಂತಹ ರೈತರು ಮಾತ್ರ ಈ ಕೆಲಸ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ತಿಳಿಸಿದೆ.

ಇದನ್ನೂ ಕೂಡ ಓದಿ : Free Electricity Scheme : ಜೀವನ ಪರ್ಯಂತ 300 ಯೂನಿಟ್ ಉಚಿತ ವಿದ್ಯುತ್ – ಕೇಂದ್ರದ ಮೋದಿ ಹೊಸ ಯೋಜನೆ ಜಾರಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM Kisan Samman) ನಿಧಿ ಹದಿನಾರನೇ ಕಂತನ್ನ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆಗೊಳಿಸಿದರು. ಒಟ್ಟು 21,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿತ್ತು. ಒಂಬತ್ತು ಕೋಟಿಗೂ ಅಧಿಕ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಯೋಜನೆಯಲ್ಲಿ ಡಿಬಿಟಿ ಮೂಲಕ ಹಣವನ್ನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಆದರೆ ಈ ಬಾರಿ ಸುಮಾರು 40 ಲಕ್ಷ ರೈತರ ಖಾತೆಗಳಿಗೆ ಈ ಹಣ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂತಹ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಹಿಂದೆ ಈ 40 ಲಕ್ಷ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್(PM Kisan Samman) ಯೋಜನೆಯ ಹಣ ಸಿಕ್ಕಿದೆ. ಆದರೆ ಈ ಬಾರಿ ಸಿಗದಿರಲು ಪ್ರಮುಖ ಕಾರಣ ಈ-ಕೆವೈಸಿ ಮಾಡಿಸದಿರುವುದು ಅಥವಾ ಆಧಾರ್ ಲಿಂಕ್ ಮಾಡದಿರುವುದು ಎಂದು ಹೇಳಲಾಗಿದೆ. ಪಿಎಂ ಕಿಸಾನ್ ಸಮ್ಮಾನ್(PM Kisan Samman) ಯೋಜನೆಯನ್ನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019 ರಲ್ಲಿ ಪ್ರಾರಂಭಿಸಿತ್ತು. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅರ್ಹ ರೈತರಿಗೆ 2000 ರೂಪಾಯಿಯಂತೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ನೇರವಾಗಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತದೆ.

ಇದನ್ನೂ ಕೂಡ ಓದಿ : SBI Bank Customer : ಎಸ್ ಬಿಐ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಬಂಪರ್ ಗಿಫ್ಟ್ – ಮಾರ್ಚ್ 31ರವರೆಗೆ ಅವಕಾಶ

ಪಿಎಂ ಕಿಸಾನ್ ಯೋಜನೆಯ ಹದಿನಾರನೇ ಕಂತಿನ ಹಣವನ್ನ ಇನ್ನು ಪಡೆಯಲು ಸಾಧ್ಯವಾಗದ ರೈತರಿಗೆ ಕೇಂದ್ರ ಸರ್ಕಾರ ಒಂದು ಆಯ್ಕೆಯನ್ನು ನೀಡಿದೆ. ಅದನ್ನ ಮಾಡಿದರೆ ಕ್ಷಣ ಮಾತ್ರದಲ್ಲಿ ಹಣ ರೈತರ ಬ್ಯಾಂಕ್ ಖಾತೆಗೆ ಬರಲಿದೆ. ರೈತರು ತಮ್ಮ ಈ-ಕೆವೈಸಿ ಹಾಗು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಇದನ್ನ ಮಾಡಲು ಎರಡು ವಿಧಾನಗಳಿವೆ. ಒಂದು ರೈತ ಪಿಎಂ ಕಿಸಾನ್ ಅಪ್ಲಿಕೇಶನ್ ಅನ್ನು ತನ್ನ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ ಬಳಿಕ ಈ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಎರಡನೇ ವಿಧಾನದಲ್ಲಿ ಅವರು ಕಾಮನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ಈ-ಕೆವೈಸಿ ಅಥವಾ ಆಧಾರ್ ಅಪ್ಡೇಟ್ ಮಾಡಬಹುದು. ಇದು ರೈತರಿಗೆ ಯೋಜನೆ ಅಡಿಯಲ್ಲಿ ತಮ್ಮ ಹಣದ ಕಂತುಗಳನ್ನ ಮರಳಿ ಪಡೆಯಲು ನೆರವು ನೀಡುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply