Old Age Pension : ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಹಣಪಡೆದುಕೊಳ್ಳುತ್ತಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಮತ್ತು ವಿಧವೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಪರ್ ಗಿಫ್ಟ್ ನೀಡಿದೆ. ನಿಮ್ಮ ಮನೆಯಲ್ಲಿ ಯಾರಾದರೂ ಪ್ರತಿ ತಿಂಗಳು ಪಿಂಚಣಿ ಹಣ ಪಡೆದುಕೊಳ್ಳುತ್ತಿರುವ ಹಿರಿಯ ನಾಗರಿಕರು ಅಥವಾ ಅಂಗವಿಕಲರಿದ್ದರೆ ಅಥವಾ ವಿಧವೆಯರಿದ್ದರೆ ತಪ್ಪದೆ ಈ ಲೇಖನವನ್ನ ನೋಡಿ.
ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿದಂತೆ ಇನ್ನಿತರ ಮಾಸಾಶನಗಳನ್ನ ಅಂಚೆ ಇಲಾಖೆಯಿಂದ ನಿಗದಿತ ಸಮಯಕ್ಕೆ ತಲುಪಿಸಬೇಕೆಂದು ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಸಕಾಲದಲ್ಲಿ ತಲುಪದ ಕಾರಣ ವಯೋವೃದ್ಧರಿಗೆ ಜೀವನ ನಿರ್ವಹಣೆ ಹಾಗು ದಿನನಿತ್ಯದ ಖರ್ಚು ವೆಚ್ಚಗಳಿಗೆ ಸಮಸ್ಯೆಯಾಗಿದೆ ಎಂದು ಹಲವು ಮಾಸಾಶನ ಫಲಾನುಭವಿಗಳು ದೂರು ನೀಡಿದ್ದರು. ಅಂಚೆ ಇಲಾಖೆಯಿಂದ ಮಾಸಾಶನಗಳು ಸಕಾಲದಲ್ಲಿ ವಿತರಣೆಯಾಗಿದೆಯೇ.? ಇಲ್ಲವೊ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು.
ಇದನ್ನೂ ಕೂಡ ಓದಿ : PM Kisan Samman : 16ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಂದಿಲ್ಲ ಅಂದ್ರೆ – ಈ ಕೆಲಸ ಮಾಡಿದ ತಕ್ಷಣ ಹಣ ಜಮಾ ಆಗುತ್ತೆ
ಮಾಸಾಶನದ ಮಾಹಿತಿ ಕೇಳಲು ಬರುವವರಿಗೆ ಅಂಚೆ ಕಛೇರಿಯಲ್ಲಿ ಸೌಜನ್ಯತೆಯಿಂದ ವರ್ತನೆ ಮಾಡುವ ಜೊತೆಗೆ ಅವರ ಖಾತೆಯಲ್ಲಿ ಹಣ ಜಮಾ ಆಗಿರುವ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು. ಕೆಲವೊಂದು ವೇಳೆ ಅಂಚೆ ಇಲಾಖೆ ನೌಕರರು ವಿತರಣೆಯ ವೇಳೆ ವಿಳಂಬ ಮಾಡುವ ಸಂಭವವಿದ್ದು, ಇದನ್ನು ಪೋಸ್ಟ್ ಮಾಸ್ಟರ್ ಪ್ರತಿ ನಿತ್ಯ ಪರಿಶೀಲನೆ ಮಾಡಿಕೊಳ್ಳಬೇಕೆಂದು ತಿಳಿಸಿ. ಮುಂದಿನ ದಿನಗಳಲ್ಲಿ ಸರಕಾರದಿಂದ ಜಮಾ ಮಾಡಿದ್ದರೂ ಮಾಸಾಶನ ತಲುಪದಿದ್ದಲ್ಲಿ ಅಂತಹ ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಅಂಚೆ ಮೂಲಕ ಪಡೆಯುತ್ತಿರುವ ಸಾಮಾಜಿಕ ಭದ್ರತಾ ಮಾಸಾಶನವು, ಆಧಾರ್ ಬೇಸ್ಡ್ ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಇರುತ್ತದೆ. ಅಂಚೆ ಎಸ್ಬಿ ಖಾತೆಯಿಂದ ಮಾಸಾಶನ ಪಾವತಿಗೆ ಅವರ ಮನೆ ಬಾಗಿಲಲ್ಲಿ ಪಾವತಿಸಲು ಹಿಂಪಡೆಯುವ ನಮೂನೆಗೆ ಸಹಿ ಮತ್ತು ಇದಕ್ಕೆ ಗೆಜೆಟೆಡ್ ಅಧಿಕಾರಿಗಳ ಸಹಿ, ಸಾಕ್ಷಿಗಳ ಸಹಿ ಪಡೆದು ಮನೆ ಬಾಗಿಲಲ್ಲಿ ವಿತರಣೆ ಮಾಡಲಾಗುತ್ತದೆ. ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ವ್ಯವಸ್ಥೆಯಡಿ ಅಂಚೆ ಕಚೇರಿಯಲ್ಲಿ ಹಾಗೂ ಮನೆ ಬಾಗಿಲಲ್ಲಿ ಬಯೋಮೆಟ್ರಿಕ್ ಮೂಲಕ ಅಂಚೆಯನ್ನ ಪಾವತಿಸುವವರು ಮಾಸಾಶನವನ್ನ ಸರ್ಕಾರದಿಂದ ಅವರ ಖಾತೆಗೆ ಜಮೆಯಾದ ಬಗ್ಗೆ ಅವರು ನೀಡಿರುವ ಮೊಬೈಲ್ಗೆ ಮೆಸೇಜ್ ಹೋಗುತ್ತದೆ.
ಇದನ್ನೂ ಕೂಡ ಓದಿ : Free Electricity Scheme : ಜೀವನ ಪರ್ಯಂತ 300 ಯೂನಿಟ್ ಉಚಿತ ವಿದ್ಯುತ್ – ಕೇಂದ್ರದ ಮೋದಿ ಹೊಸ ಯೋಜನೆ ಜಾರಿ
ಫಲಾನುಭವಿಗಳು ಬಯೋಮೆಟ್ರಿಕ್ ನೀಡುವಾಗ ಮತ್ತು ವಿತ್‌ಡ್ರಾ ನಮೂನೆಗೆ ಸಹಿ ಮಾಡುವಾಗ ಖಾತರಿ ಮಾಡಿಕೊಳ್ಳಬೇಕಾಗುತ್ತದೆ. ಸಭೆಯಲ್ಲಿ ಅಂಚೆ ಅಧೀಕ್ಷಕರಾದ ಚಂದ್ರಶೇಖರ್, ಸಾಮಾಜಿಕ ಭದ್ರತಾ ಯೋಜನೆ ಸಹಾಯಕ ನಿರ್ದೇಶಕರಾದ ಪುಷ್ಪ ಹಾಗು ಅಂಚೆ ಇಲಾಖೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..