ಗೊರಕೆ ನಿವಾರಣೆಗೆ ಹೊಸ ಸಂಶೋಧನೆ ! ಯಾರು ಬೇಕಾದರೂ ಬಳಸಬಹುದು ಗೊರಕೆ ಮುಕ್ತರಾಗಬಹುದು

ಗೊರಕೆ ಹೊಡೆಯುವ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಇದು ಸುತ್ತಮುತ್ತಲಿನವರಿಗೂ ಕಿರಿಕಿರಿ. ಅತಿಯಾದ ಗೊರಕೆ ಹೊಡೆಯುವುದು ಆರೋಗ್ಯ ದೃಷ್ಟಿಯಿಂದ ಕೂಡ ಉತ್ತಮವಲ್ಲ. ಬಹುತೇಕರನ್ನು ಕಾಡುವ ಗೊರಕೆ ಸಮಸ್ಯೆಗೆ ಕಡಿಮೆ ವೆಚ್ಚದಲ್ಲಿ ಪರಿಹಾರವನ್ನು ಹುಡುಕಿದ್ದಾರೆ ಬನಾರಸ್​ ವಿಶ್ವವಿದ್ಯಾಲಯದ ಸಂಶೋಧಕರು.

ಗೊರಕೆ ಸದ್ದಿನಿಂದಾಗಿ ಉಂಟಾಗುವ ಕಿರಿಕಿರಿ ತಪ್ಪಿಸಲು ಬನರಾಸ್​ ವಿಶ್ವವಿದ್ಯಾಲಯ ಕಂಡು ಹಿಡಿದಿರುವ ಈ ಯಂತ್ರವನ್ನು ವಸಡಿನ ಬಳಿ ಇಟ್ಟು ರಾತ್ರಿ ಮಲಗಬೇಕು. ಇದರಿಂದ ಗೊರಕೆ ಸದ್ದು ನಿಲ್ಲುತ್ತದೆ. ಕಾಶಿ ಹಿಂದೂ ವಿಶ್ವವಿದ್ಯಾಲದಯದ ಐಎಮ್​ಎಸ್​ ಬಿಎಚ್​ಯು7 ವರ್ಷಗಳ ಕಠಿಣ ಶ್ರಮದಿಂದಾಗಿ ಈ ಯಂತ್ರವನ್ನು ತಯಾರಿಸಿದ್ದಾರೆ.

ದಂತವೈದ್ಯಕೀಯ ವಿಭಾಗ ಪ್ರೋ. ಟಿಪಿ ಚತುರ್ವೇದಿ ಈ ಸಾಧನವನ್ನು ತಯಾರಿಸಿದ್ದಾರೆ. 8 ವರ್ಷಗಳ ಸಂಶೋಧನೆಗೆ ಫಲವಾಗಿ ಈ ಯಂತ್ರ ಸೃಷ್ಟಿಯಾಗಿದೆ. ಇದನ್ನು ಎದೆರೋಗ ವಿಭಾಗದ ವೈದ್ಯರ ಸಹಕಾರದಿಂದಾಗಿ ಮಾಡಲಾಗಿದೆ.  ಆರು ತಿಂಗಳಲ್ಲಿ ಈ ಸಮಸ್ಯೆ ಸುಲಭವಾಗಿ ಪರಿಹಾರ ಆಗಲಿದೆ ಎನ್ನತ್ತಾರೆ

ಇದೀಗ ಈ ಸಂಶೋಧನೆ ಪೂರ್ಣಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಯಾರು ಬೇಕಾದರೂ ಈ ಯಂತ್ರವನ್ನು ಕೊಂಡು ಬಳಕೆ ಮಾಡಬಹುದಾಗಿದೆ. ಇದು ಗೊರಕೆಯ ಶಬ್ಧವನ್ನು ಶೇ 10ರಷ್ಟ ಪ್ರತಿಶತ ಕಡಿಮೆ ಮಾಡಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply