ಮೆಟಾದ ‘ಫೇಸ್ಬುಕ್, ಇನ್ಸ್ಟಾಗ್ರಾಮ್’ ಸರ್ವರ್ ಡೌನ್ : ಭಾರತ ಸೇರಿ ವಿಶ್ವದ್ಯಾಂತ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಪರದಾಟ

ಸೋಶಿಯಲ್ ಮೀಡಿಯಾ ದೈತ್ಯ ಮೆಟಾದ ‘ಫೇಸ್ಬುಕ್, ಇನ್ಸ್ಟಾಗ್ರಾಮ್’ ಸರ್ವರ್ ಡೌನ್ ಆಗಿದ್ದು, ಭಾರತ ಸೇರಿ ವಿಶ್ವದ್ಯಾಂತ ಲಕ್ಷಾಂತರ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ

ವಿಶ್ವದಾದ್ಯಂತ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಫೇಸ್ಬುಕ್ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡಲು ಹಾಗು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್(Instagram) ಮತ್ತು ವಾಟ್ಸಾಪ್(Whatsapp) ಸೇರಿದಂತೆ ಸಾಮಾಜಿಕ ಮಾಧ್ಯಮದ ದೈತ್ಯ ಮೆಟಾದ ಕಂಪನಿಯ ಒಡೆತನದ ಇತರ ಸೇವೆಗಳಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ.

ಇದನ್ನೂ ಕೂಡ ಓದಿ : ಮೋದಿ ಬಂಪರ್ ಗಿಫ್ಟ್ – ಪ್ರತಿಯೊಬ್ಬರಿಗೂ 15000 ಹಣ ಪಡೆದುಕೊಳ್ಳುವ ಸಂಪೂರ್ಣ ಮಾಹಿತಿ – ಬ್ಯಾಂಕ್ ಅಕೌಂಟ್ ಇದ್ದರೆ ಸಾಕು

ಲಾಗಿನ್(Login) ಸಮಸ್ಯೆಗಳು ಮತ್ತು ಫೀಡ್ ರಿಫ್ರೆಶ್(ಫೀಡ್ Refresh) ಮಾಡಲು ತೊಂದರೆ.!

ಸೋಶಿಯಲ್ ಮೀಡಿಯಾ ಬಳಕೆದಾರರು ತಮ್ಮ ಫೇಸ್ಬುಕ್(Facebook) ಖಾತೆಗಳಿಂದ ಲಾಗ್ ಔಟ್ ಆಗುವುದು, ಹಾಗು ಲಾಗ್ ಇನ್ ಮಾಡಲು ಸೇರಿದಂತೆ ಅಸಾಧ್ಯವಾಗುವಂತಹ ಹಲವು ತೊಂದರೆಗಳನ್ನ ಅನುಭವಿಸಿರುವ ಬಗ್ಗೆ ಮಾಹಿತಿ ಬಂದಿದೆ. ಹಾಗೆಯೇ, ಇನ್ಸ್ಟಾಗ್ರಾಮ್(Instagram) ಬಳಕೆದಾರರು ತಮ್ಮ ಫೀಡ್ಗಳನ್ನ ರಿಫ್ರೆಶ್’ಗೊಳಿಸಲು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳಿಗೆ ಸ್ಟೋರಿ ಮತ್ತು ಕಾಮೆಂಟ್ಗಳು ಲೋಡ್ ಆಗಲು ವಿಫಲವಾಗಿವೆ.

ಮೆಟಾ ಹೊಸದಾಗಿ ಅಭಿವೃದ್ಧಿಪಡಿಸಿದ ಥ್ರೆಡ್ಸ್(Threads) ಎಂಬ ಅಪ್ಲಿಕೇಶನ್ ಸಹ ಸಂಪೂರ್ಣ ಸ್ಥಗಿತವನ್ನ ಅನುಭವಿಸುತ್ತಿದೆ, ಬಿಡುಗಡೆಯಾದ ನಂತರ ದೋಷ ಸಂದೇಶವನ್ನ ಪ್ರದರ್ಶಿಸುತ್ತದೆ. ವಿಶ್ವದಾದ್ಯಂತ ವ್ಯಾಪಕ ಬಳಕೆದಾರರ ಸಮಸ್ಯೆ ಹಾಗು ದೂರುಗಳ ಹೊರತಾಗಿಯೂ, ಮೆಟಾ ಇನ್ನೂ ಕೂಡ ಸಮಸ್ಯೆಯನ್ನ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply