Gruhalakshmi : ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಈಗಾಗಲೇ ಹಣ ನೀಡುತ್ತಿರುವ ಪ್ರತಿ ತಿಂಗಳ ₹2000 ಹಣ ಇನ್ನು ಮುಂದೆ ನಾಲ್ಕು ಸಾವಿರಕ್ಕೆ ಹೆಚ್ಚಳ. ಈ ಬಗ್ಗೆ ಸಂಸದ ಡಿ.ಕೆ ಸುರೇಶ್ ಮಾಹಿತಿ ನೀಡಿದ್ದು, ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದಂತಾಗಿದೆ. ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ₹2000 ಹಣವನ್ನ ಪಡೆದುಕೊಳ್ಳುತ್ತಿರುವ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳಿಗೆ ₹4000 ಹಣ ನೀಡಲು ಡಿ ಕೆ ಸುರೇಶ್ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಂಸದ ಡಿ ಕೆ ಸುರೇಶ್ ಅವರು ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳಿಗೆ ನೀಡುತ್ತಿರುವ ₹2000 ಹಣವನ್ನ ಇನ್ನು ಮುಂದೆ ನಾಲ್ಕು ಸಾವಿರಕ್ಕೆ ಏರಿಕೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಭೆಯಲ್ಲಿ ಹೇಳಿದ್ದಾರೆ. ಅಂದರೆ ಪ್ರತಿ ಮಹಿಳೆಯರಿಗೆ ₹4000 ಹಣ ಹೇಗೆ ನೀಡಲಾಗುತ್ತದೆ ಮತ್ತು ಯಾಕೆ ನೀಡಲಾಗುತ್ತದೆ? ಯಾವಾಗಿನಿಂದ ನೀಡಲಾಗುತ್ತದೆ.? ಪ್ರತಿ ತಿಂಗಳಿಗೆ ₹4000 ಹಣ ಪಡೆಯಲು ಏನನ್ನ ಮಾಡಬೇಕು? ಎನ್ನುವ ಬಗ್ಗೆ ಉತ್ತರಿಸಿದ್ದಾರೆ ಡಿ ಕೆ ಸುರೇಶ್.
ಇದನ್ನೂ ಕೂಡ ಓದಿ : ಮೋದಿ ಬಂಪರ್ ಗಿಫ್ಟ್ – ಪ್ರತಿಯೊಬ್ಬರಿಗೂ 15000 ಹಣ ಪಡೆದುಕೊಳ್ಳುವ ಸಂಪೂರ್ಣ ಮಾಹಿತಿ – ಬ್ಯಾಂಕ್ ಅಕೌಂಟ್ ಇದ್ದರೆ ಸಾಕು
ಗೃಹಲಕ್ಷ್ಮಿ ಸಹಾಯಧನ ನಾಲ್ಕು ಸಾವಿರಕ್ಕೆ ಹೆಚ್ಚಳ. ಗೃಹಲಕ್ಷ್ಮಿ ಸಹಾಯ ಧನ ಹೆಚ್ಚಿಸಲು ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು ನೀಡುತ್ತಿರುವ ರೂಪಾಯಿ 2000 ದುಪ್ಪಟ್ಟು ಮಾಡಲಿದೆ. ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಹೇಳುವ ಪ್ರಕಾರ ಅದು ಸಾಧ್ಯ. ಆದರೆ ತೆರಿಗೆಗಳ ರೂಪದಲ್ಲಿ ರಾಜ್ಯದಲ್ಲಿ ಸಂಗ್ರಹವಾಗುವ ಹಣ ಕೇಂದ್ರಕ್ಕೆ ಹೋಗುತ್ತೆ. ಆ ಮೊತ್ತದಲ್ಲಿ ಶೇಕಡಾ 60 ರಷ್ಟು ಹಣ ವಾಪಸ್ ಬಂದ್ರೆ, ಕರ್ನಾಟಕ ಸರ್ಕಾರ ನೀರಾವರಿ ಯೋಜನೆಗಳನ್ನ ಪೂರ್ತಿಗೊಳಿಸುತ್ತದೆ. ರಸ್ತೆಗಳನ್ನು ನಿರ್ಮಿಸಿದೆ ಮತ್ತು ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಡೆಗೆ ಹಣ ವ್ಯಯಿಸುತ್ತದೆ ಎಂದು ಸುರೇಶ್ ಹೇಳಿದರು.
ಅಷ್ಟು ಮಾತ್ರವಲ್ಲದೆ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೀಡಲಾಗುತ್ತಿರುವ ಮಾಸಿಕ ₹2000 ಸಹಾಯಧನವನ್ನು ನಾಲ್ಕು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಸುರೇಶ್ ಹೇಳಿದರು. ಜಾತಿ ಗಣತಿ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರದಿಯನ್ನು ಓದಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..