‘ಕಾಟೇರಾ’ಗೆ ಬಣ್ಣ ಹಚ್ಚಲು ದರ್ಶನ್ ಮನೆಗೆ ಎಂಟ್ರಿ ಕೊಟ್ಟ ಮಾಲಾಶ್ರೀ ಮಗಳು ರಾಧನಾ ರಾಮ್!

ಡಿ ಬಾಸ್ ದರ್ಶನ್ ಅವರ ಸಿನಿಮಾ ಅಂದರೆ ಅಭಿಮಾನಿಗಳಿಗೆ ಇಷ್ಟ ಆಗುವಂತಹ ಮಾಸ್ ಅಂಶಗಳು ಆ ಸಿನಿಮಾದಲ್ಲಿ ಇರಲೇಬೇಕು. ದರ್ಶನ್ ಅವರ ಕ್ರಾಂತಿ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿ 1೦೦ ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಕ್ರಾಂತಿ ಸಿನಿಮದಾ ನಂತರ ದರ್ಶನ್ ಅವರು ತರುಣ್ ಸುಧೀರ್ ಅವರೊಡನೆ ಮತ್ತೊಂದು ಸಿನಿಮಾ ಮಾಡುತ್ತಿದ್ದು, ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆವರು ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಹೊಸ ಅಪ್ ಡೇಟ್ ಗಾಗಿ ಕಾಯುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ದರ್ಶನ್ ಹುಟ್ಟುಹಬ್ಬದಂದು ಭರ್ಜರಿ ಅಪ್ ಡೇಟ್ ಸಿಕ್ಕಿತು.

ಇದನ್ನೂ ಕೂಡ ಓದಿ : ವಿಜಯಲಕ್ಷ್ಮಿ ಆಕ್ರೋಶಕ್ಕೆ ಈಗ ಮೇಘಾ ಶೆಟ್ಟಿ ಏನು ಮಾಡಿಕೊಂಡಿದ್ದಾರೆ ಗೊತ್ತಾ.?

ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟುಹಬ್ಬದ ದಿನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಎರಡು ಕೂಡ ಬಿಡುಗಡೆ ಆಯಿತು. ಈ ಸಿನಿಮಾಗೆ ‘ಕಾಟೇರ’ ಎಂದು ಹೆಸರಿಡಲಾಗಿದ್ದು 7೦ ರ ದಶಕದಲ್ಲಿನ ನೈಜ ಕತೆ ಆಗಿದೆ. ಫಸ್ಟ್ ಲುಕ್ ಟೀಸರ್ ನಲ್ಲಿ ಡಿ ಬಾಸ್ ಹೇಳಿರುವ ಡೈಲಾಗ್ ಸಿನಿಪ್ರಿಯರ ಮನ ಗೆದ್ದಿದೆ. ನಟ ದರ್ಶನ್ ಅವರ ಅಭಿಮಾನಿಗಳು ಈಗ ‘ಕಾಟೇರ’ಗಾಗಿ ಕಾಯುತ್ತ ಇದ್ದಾರೆ. ಈ ಸಿನಿಮಾದಲ್ಲಿ ಬಹಳಷ್ಟು ವಿಶೇಷತೆಗಳಿವೆ.

ಇನ್ನು ಎಲ್ಲರ ಆಕರ್ಷಣೆಗೆ ಒಳಗಾಗಿರುವುದು ಸಿನಿಮಾ ನಾಯಕಿ ರಾಧಾನ ರಾಮ್ ಅವರು. ಸ್ಯಾಂಡಲ್ ವುಡ್ ನ ಕನಸಿನ ರಾಣಿ ಮಾಲಾಶ್ರೀ ಹಾಗು ನಿರ್ಮಾಪಕ ದಿ|ರಾಮು ಅವರ ಮಗಳೇ ರಾಧಾನ ರಾಮ್. ಅವರು ಈ ಸಿನಿಮಾಗೆ ನಾಯಕಿ ಆಗಿ ನಟಿಸುತ್ತಿದ್ದಾರೆ. ಇದು ರಾಧಾನ ಅವರಿಗೆ ಮೊದಲ ಸಿನಿಮಾ. ಮೊದಲ ಅವಕಾಶದಲ್ಲೇ ದರ್ಶನ್ ಅವರಂತಹ ದೊಡ್ಡ ಸ್ಟಾರ್ ನಟ ಹಾಗೂ ರಾಕ್ ಲೈನ್ ವೆಂಕಟೇಶ್ ರಂತಹ ದೊಡ್ಡ ಬ್ಯಾನರ್ ಮೂಲಕ ಲಾಂಚ್ ಆಗುತ್ತಾ ಇರುವುದು ಆಕೆಯ ಅದೃಷ್ಟ ಅಂತ ಎಲ್ಲರು ಹೇಳುತ್ತಾ ಇದ್ದಾರೆ.

ಇದನ್ನೂ ಕೂಡ ಓದಿ : ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.?

ಇನ್ನೂ ಈ ಸಿನಿಮಾಗೆ ರಾಧಾನ ರಾಮ್ ಅವರಿಗೆ ಕೊಡುತ್ತಿರುವ ಸಂಭಾವನೆ ಎಷ್ಟು? ಎನ್ನುವುದರ ಬಗ್ಗೆ ಚರ್ಚೆ ಆಗುತ್ತಿದ್ದು ಮೊದಲ ಸಿನಿಮಾದಲ್ಲೇ ಇವರಿಗೆ ಬರೋಬ್ಬರಿ 4೦ ಲಕ್ಷ ಸಂಭಾವನೆ ಕೊಡಲಾಗುತ್ತಿದೆ. ಹೊಸ ನಾಯಕಿಗೆ ಇಷ್ಟು ಮೊತ್ತದ ಸಂಭಾವನೆ ಒಂದು ರೀತಿ ದಾಖಲೆ ಎನ್ನುತ್ತಿದೆ ಸ್ಯಾಂಡಲ್ ವುಡ್ ಮೂಲಗಳು. ಇದರ ಬಗ್ಗೆ ನೀವು ಏನು ಹೇಳುತ್ತೀರಾ ಕಾಮೆಂಟ್ ಮಾಡಿ ತಿಳಿಸಿ.

Leave a Reply