Gruhalakshmi Scheme : ಗೃಹಲಕ್ಷ್ಮಿ ಹಣ ಇನ್ನೂ ಬರದೇ ಇದ್ದವರಿಗೆ / 2 ನೇ ಕಂತಿನ ಹಣ ನಾಳೆ ಜಮಾ.?

Gruhalakshmi Scheme : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯ ₹2000/- ರೂಪಾಯಿ ಹಣ ಜಮಾ ಆಗದೇ ಇರುವ ಎಲ್ಲಾ ಮಹಿಳೆಯರಿಗೆ ಕಡ್ಡಾಯವಾಗಿ ಈ ಕೆಲಸ ಮಾಡಿಸಿಕೊಳ್ಳಲು ಅಧೀಕೃತ ಆದೇಶ ಹೊರಡಿಸಿದ್ದಾರೆ.

Whatsapp Group Join
Telegram channel Join

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆ ಮಾಡಿ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದ್ದು, ಅದರಲ್ಲಿ 16 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ. ಆದರೆ ಈ ಯೋಜನೆಯು ಆಗಸ್ಟ್ ತಿಂಗಳಲ್ಲಿ ಜಾರಿಗೊಳಿಸಲಾಗಿದ್ದು, ಮಹಿಳೆಯರ ಬ್ಯಾಂಕ್ ಖಾತೆಗೆ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಹಣ ಜಮಾವಣೆಯಾಗಿದೆ. ಆದರೆ ಈಗಾಗಲೇ ಅಕ್ಟೋಬರ್ ತಿಂಗಳ ಮುಂದುವರೆದಿದ್ದು, ಇನ್ನೂ ಕೂಡ ಬಹಳಷ್ಟು ಮಹಿಳೆಯರ ಖಾತೆಗಳಿಗೆ ಹಣ ಬರುವುದು ಬಾಕಿ ಉಳಿದಿದೆ.

ಇದನ್ನೂ ಕೂಡ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ

Whatsapp Group Join
Telegram channel Join

ಹಾಗು ಎರಡನೇ ಕಂತಿನ ಹಣ ಬರುವ ಸಮಯವೂ ಕೂಡ ಆಗಿದ್ದು, ಯಾರಿಗೆ.? ಯಾವಾಗ.? ಯಾಕೆ ಖಾತೆಗೆ ಇನ್ನೂ ಹಣ ವರ್ಗಾವಣೆಯಾಗಿಲ್ಲ ಎನ್ನುವ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆಯನ್ನ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ, ಮನೆಯ ಒಡತಿಗೆ ಪ್ರತೀ ತಿಂಗಳು ₹2000/- ರೂಪಾಯಿಗಳ ಆರ್ಥಿಕ ನೆರವನ್ನ ನೀಡುವುದಾಗಿದೆ. ಆದರೆ ಫಲಾನುಭವಿಗಳಲ್ಲಿ ಅನೇಕರಿಗೆ ಇನ್ನೂ ಹಣ ಜಮೆಯಾಗಿಲ್ಲ. ಇದುವರೆಗೂ 9.44 ಲಕ್ಷ ಫಲಾನುಭವಿಗಳನ್ನ ಗುರುತಿಸಲಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿಲ್ಲ.

ಸದ್ಯ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. ಡೆಮೋ ಪರಿಶೀಲನೆ ವೇಳೆ ವಿಫಲತೆ, ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳಲ್ಲಿ ಅರ್ಜಿದಾರರ ಹೆಸರಿನಲ್ಲಿ ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯಡಿ 9.44 ಲಕ್ಷ ಅರ್ಜಿದಾರರು ಸರ್ಕಾರದ ಆರ್ಥಿಕ ನೆರವನ್ನ ಪಡೆಯಲು ಸಾಧ್ಯವಾಗಿಲ್ಲ.

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

ರಾಜ್ಯ ಸರ್ಕಾರ ಆಗಸ್ಟ್ ೩೦ ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ₹2000/- ರೂಪಾಯಿ ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಕೆಲವು ಅರ್ಜಿದಾರರು ಯೋಜನೆಯಡಿ ಹಣ ಪಡೆಯದಿರಲು ಕಾರಣ ತಿಳಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, 1,50,356 ಅರ್ಜಿದಾರರ ಡೆಮೋ ಪರಿಶೀಲನೆ ವಿಫಲವಾಗಿದೆ. 5,96,268 ಅರ್ಜಿದಾರರಿಂದ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಕಾರ್ಡ್ ಹೊಂದಾಣಿಕೆಯಾಗಿಲ್ಲ ಎಂದು ಹೇಳಿದರು.

ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳಲ್ಲಿನ ಅರ್ಜಿದಾರರ ಹೆಸರುಗಳಲ್ಲಿನ ವ್ಯತ್ಯಾಸಗಳು, ಮತ್ತು ಅರ್ಜಿದಾರರ ಹೆಸರು ಹಾಗು ವಿಳಾಸಗಳಲ್ಲಿ ಹೊಂದಾಣಿಕೆಯಾಗದಿರುವುದು ಕೆಲವು ಕಾರಣಗಳಾಗಿವೆ. ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅರ್ಹ ಅರ್ಜಿದಾರರಿಗೆ ಸರ್ಕಾರವು ಆಗಸ್ಟ್ ನಲ್ಲಿ ₹2169 ಕೋಟಿ ರೂ. ಗಳನ್ನ ಬಿಡುಗಡೆ ಮಾಡಿದೆ. ಅಕ್ಟೋಬರ್ 4 ರವರೆಗೆ 93 ಲಕ್ಷ ಫಲಾನುಭವಿಗಳಿಗೆ ₹2000/- ರೂ. ಗಳ ಆರ್ಥಿಕ ನೆರವು ವರ್ಗಾವಣೆ ಮಾಡಲಾಗಿದ್ದು, ಇನ್ನು 5.5 ಲಕ್ಷ ಫಲಾನುಭವಿಗಳ ವಿವರ ಸಂಗ್ರಹಿಸಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವೆ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply