ನಮಸ್ಕಾರ ಸ್ನೇಹಿತರೇ, ಮೋದಿ ಸರ್ಕಾರವು ಒಂದು ದೊಡ್ಡ ಯೋಜನೆಯನ್ನು ತಂದಿದೆ. ಈ ಯೋಜನೆಯಲ್ಲಿ ಗಂಡಸರಾಗಲಿ ಹೆಂಗಸರಾಗಲಿ, ಮನೆಯಲ್ಲಿ ಒಬ್ಬರಿಗೆ ತಿಂಗಳಿಗೆ ₹15,000 ಸಿಗಲಿದೆ. ನೀವು ಇಲ್ಲಿಯವರೆಗೂ ಕೂಡ ಬ್ಯಾಂಕ್ ಖಾತೆ ಓಪನ್ ಮಾಡಿಸಿಲ್ಲ ಅಂದ್ರೆ ಬೇಗ ಬ್ಯಾಂಕ್ ಅಕೌಂಟ್ ಮಾಡಿಸಿಕೊಳ್ಳಿ.
ಇನ್ನು ₹15,000 ಕೊಡಲು ಕಾರಣವಾದರೂ ಏನು? ಇದನ್ನ ಪಡೆಯುವುದಾದರೂ ಹೇಗೆ ಅನ್ನುವ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. ಇನ್ನು ಹಲವರು ಇದು ಮೋದಿ ಸರ್ಕಾರದ ಎಲೆಕ್ಷನ್ ಗಿಮಿಕ್ ಅಥವಾ ಜನರನ್ನ ದಿಕ್ಕು ತಪ್ಪಿಸುವ ಕಾರ್ಯಕ್ರಮ ಅಂತ ಅಂದುಕೊಂಡಿರಬಹುದು. ಆದರೆ ಖಂಡಿತ ಅಲ್ಲ. ಈ ಯೋಜನೆಯಲ್ಲಿ ಈಗಾಗಲೇ 5,90,000ಕ್ಕೂ ಅಧಿಕ ಜನರು ಲಾಭ ಪಡೆದಿದ್ದಾರೆ.
ಇನ್ನು ಈ ಯೋಜನೆಯನ್ನ ಪಡೆಯುವುದಕ್ಕೆ ಇರುವ ಕಂಡಿಷನ್ ಏನಂದ್ರೆ, ಮೊದಲಿಗೆ ನಿಮ್ಮ ವಯಸ್ಸು 18 ವರ್ಷಕ್ಕಿಂತ ಜಾಸ್ತಿ ಇರಬೇಕು ಮತ್ತು ಈ ಯೋಜನೆಯನ್ನ ಮನೆಯಲ್ಲಿ ಒಬ್ಬರಿಗೆ ಮಾತ್ರ ನೀಡಲಾಗುವುದು. ಅಂದರೆ, ಗಂಡ ಈ ಯೋಜನೆಯ ಲಾಭ ಪಡೆದರೆ ಹೆಂಡತಿಗೆ ನೀಡುವುದಿಲ್ಲ. ಹೆಂಡತಿ ಪಡೆದರೆ ಗಂಡನಿಗೆ ಸಿಗುವುದಿಲ್ಲ ಅಥವಾ ಅಣ್ಣ-ತಂಗಿ ಇದ್ದರೆ ಒಬ್ಬರಿಗೆ ಮಾತ್ರ ಅನ್ವಯವಾಗಲಿದೆ.
ಇದನ್ನೂ ಕೂಡ ಓದಿ : Annabhagya Scheme : ಜನವರಿ ಮತ್ತು ಫೆಬ್ರವರಿ ತಿಂಗಳ ಅಕ್ಕಿ ಹಣ ಬಂದಿಲ್ವಾ – ಈಗಲೇ ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ ನೋಡಿ
ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಯಾರೊಬ್ಬರಿಗೂ ಕೂಡ ಸರ್ಕಾರಿ ನೌಕರರಾಗಿರಬಾರದು. ಇನ್ನು ಈ ಯೋಜನೆ ಪಡೆಯುವುದಕ್ಕೆ ನಿಮ್ಮದೇ ಬ್ಯಾಂಕ್ ಅಕೌಂಟ್ ಇರಬೇಕು. ಆ ಅಕೌಂಟ್ಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರಬೇಕು. ಈ ಮೇಲಿನ ಎಲ್ಲ ನಿಯಮಗಳನ್ನ ಫಾಲೋ ಮಾಡಿದ್ರೆ ಈ ಯೋಜನೆಗೆ ಅಪ್ಲೈ ಮಾಡಬಹುದು.
ಇನ್ನು ಈ ಯೋಜನೆಯನ್ನ ನೀವು ಎಲ್ಲಿ ಅಪ್ಲೈ ಮಾಡಬಹುದು ಅಂದರೆ, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು. ಇನ್ನು ಈ ಯೋಜನೆಯನ್ನ ಕೇಂದ್ರ ಸರ್ಕಾರ ಯಾಕೆ ತಂದಿದ್ದಾರೆ ಅಂದರೆ, ಪ್ರತಿಯೊಬ್ಬರಿಗೂ ಸಹಾಯವಾಗಲಿ ಎಂದು. ಇನ್ನು ಈ ಯೋಜನೆಯಲ್ಲಿ ನಿಮಗೆ ಟ್ರೈನಿಂಗ್ ಕೊಡಲಾಗುತ್ತದೆ. ಟ್ರೈನಿಂಗ್ ಸುಮಾರು ಒಂದು ತಿಂಗಳ ಕಾಲ ಕೊಡ್ತಾರೆ.
ಟ್ರೈನಿಂಗ್ ಸಮಯದಲ್ಲಿ ನಿಮಗೆ ಪ್ರತಿದಿನ ₹500 ಸ್ಟೇ ಫಂಡ್ ಕೊಡುತ್ತಾರೆ ಮತ್ತು ಟ್ರೈನಿಂಗ್ ಮುಗಿಸಿದ ನಂತರ 15,000 ರೂಪಾಯಿಗಳವರೆಗಿನ ಟೂಲ್ ಕಿಟ್ ಕೂಡ ಕೊಡುತ್ತಾರೆ. ಇನ್ನು ನಿಮ್ಮ ಬಳಿ ಈಗಾಗಲೇ ಸಣ್ಣ ವ್ಯವಹಾರ ಇದ್ದರೆ, ಅದಕ್ಕೂ ಕೂಡ ಒಂದು ಲಕ್ಷದಿಂದ 2,00,000 ರೂಪಾಯಿವರೆಗಿನ ಲೋನ್ ಕೂಡ ಕೊಡುತ್ತಾರೆ. ಈ ಲೋನ್ ವಾಪಸ್ ಕೊಡಲು ನಿಮಗೆ 30 ತಿಂಗಳು ಇರುತ್ತೆ.
ಇದನ್ನೂ ಕೂಡ ಓದಿ : Solar Pumpset : ಉಚಿತ ಸೋಲಾರ್ ಪಂಪ್ ಸೆಟ್.! 1.5 ಲಕ್ಷ ಸಬ್ಸಿಡಿ : ಮೊಬೈಲ್ ನಲ್ಲಿಯೇ ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಸಲ್ಲಿಸಿ.!
ಈ ಯೋಜನೆ ಯಾವುದು ಅಂದ್ರೆ ಪಿಎಂ ವಿಶ್ವಕರ್ಮ ಯೋಜನೆ. ಇಲ್ಲಿಯವರೆಗೂ ಕೂಡ ಒಂದು ಕೋಟಿ ಮೂವತೈದು ಲಕ್ಷಕ್ಕೂ ಅಧಿಕ ಜನರು ಈ ಯೋಜನೆಗೆ ಅಪ್ಲೈ ಮಾಡಿದ್ದಾರೆ. ಈ ಯೋಜನೆಯಲ್ಲಿ ಈಗಾಗಲೇ 6,00,000 ಜನರಿಗೆ ಟ್ರೈನಿಂಗ್ ಮತ್ತು ಸ್ಟೇ ಫಂಡ್ ಹಣವನ್ನು ಕೂಡ ನೀಡಿದ್ದಾರೆ.
ನೇಕಾರರು, ಟೈಲರಿಂಗ್, ಬಾರ್ಬರ್, ಚಾಪೆ ತಯಾರಕ, ಪಾದರಕ್ಷೆ, ಕುಶಲಕರ್ಮಿ, ಕಲ್ಲು ಕೆತ್ತುವವರು, ಕಮ್ಮಾರ, ಬೋಟ್ ತಯಾರಕರು, ಬೊಂಬೆ ಮತ್ತು ಆಟಿಕೆ ತಯಾರಕರು. ಈ ರೀತಿ 18 ವಿವಿಧ ಕೆಲಸಗಳು ಬಲ್ಲವರು ಯೋಜನೆಯ ಅಪ್ಲೈ ಮಾಡಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..