Chandra Grahana : ಚಂದ್ರ ಗ್ರಹಣ 2024 ಇದೇ ಮಾರ್ಚ್ ಹೋಳಿ ಹಬ್ಬದ ದಿನ – ಕರ್ನಾಟಕದಲ್ಲಿ ಗ್ರಹಣದ ಸಮಯ ಸಂಪೂರ್ಣ ಮಾಹಿತಿ.!

Chandra Grahana : ನಮಸ್ಕಾರ ಸ್ನೇಹಿತರೇ, ಇದೇ ತಿಂಗಳು ಅಂದರೆ 2024 ಮಾರ್ಚ್ ಈ ತಿಂಗಳಿನಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣ ನಡೆಯುತ್ತಿದೆ. ಈ ತಿಂಗಳಿನಲ್ಲಿ ನಡೆಯುತ್ತಿರುವ ಈ ವರ್ಷದ ಮೊದಲ ಚಂದ್ರಗ್ರಹಣ ಇದಾಗಿದ್ದು, ಈ ಚಂದ್ರಗ್ರಹಣವು ನಮ್ಮ ಕರ್ನಾಟಕದಲ್ಲಿ ನಡೆಯುವ ಸಮಯ ಎಷ್ಟು.? ಈ ಚಂದ್ರಗ್ರಹಣದಿಂದಾಗಿ ಯಾವ ರಾಶಿಗೆ, ಯಾವ ರೀತಿ ಫಲಾಫಲಗಳು ದೊರೆಯಲಿವೆ.? ಕರ್ನಾಟಕದ ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೆ.? ಈ ವರ್ಷದ ಮೊದಲ ಚಂದ್ರಗ್ರಹಣದಿಂದ ಯಾವ ರೀತಿಯಾಗಿ ಪ್ರಭಾವ ಬೀರುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

ಮಾಘ ಮಾಸದ ಹುಣ್ಣಿಮೆಯ ರಾತ್ರಿ ಹೋಳಿ ದಹನ ಸಂಪ್ರದಾಯ ಆಚರಿಸಲಾಗುತ್ತದೆ. ಹೋಲಿಕಾ ಕಥೆ ನಿಮಗೆ ಗೊತ್ತಿರಬೇಕು. ಹಿರಣ್ಯ ಕಶಿಪು ಪ್ರಹ್ಲಾದನನ್ನ ಬೆಂಕಿಯಲ್ಲಿ ದಹನ ಮಾಡಲು ಹೋಲಿಕಾಳ ಬಳಿ ಹೇಳುತ್ತಾನೆ. ಹೋಲಿಕಾಗೆ ಬೆಂಕಿಯಿಂದ ಎದ್ದು ಬರುವ ಶಕ್ತಿ ಇರುತ್ತದೆ. ಆದರೆ ಪ್ರಹ್ಲಾದನನ್ನು ಹಿಡಿದುಕೊಂಡು ದಹನಕ್ಕೆ ಒಳಗಾದ ಹೋಲಿಕಾ ಮರಳಿ ಬರಲಿಲ್ಲ. ಪ್ರಹ್ಲಾದ ಮಾತ್ರ ಶ್ರೀಹರಿ ಎನ್ನುತ್ತಾ ಬೆಂಕಿಯಿಂದ ಎದ್ದು ಬಂದ. ಅವತ್ತು ಪಾಲ್ಗುಣ ಹುಣ್ಣಿಮೆ. ಪ್ರತಿ ವರ್ಷ ಆ ಕಥೆಗೆ ಪೂರಕವಾಗಿ ಹೋಲಿಕಾ ದಹನ ನಡೆಯುತ್ತದೆ.

ಇದನ್ನೂ ಕೂಡ ಓದಿ : Akrama Sakrama Scheme : ಸರ್ಕಾರಿ ಜಮೀನನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ – ಅಕ್ರಮ ಸಕ್ರಮ ಹಕ್ಕುಪತ್ರ ವಿತರಣೆ

ಈ ವರ್ಷ ಮಾರ್ಚ್ 24 ರಂದು ಹೋಲಿಕಾ ದಹನ ನಡೆಯುವುದು. ಅದರ ಮರುದಿನ ಅಂದರೆ ಮಾರ್ಚ್ ಇಪ್ಪತೈದರಂದು ಹೋಳಿಹಬ್ಬ. ಅವತ್ತೇ ಚಂದ್ರಗ್ರಹಣ. ಜೊತೆಗೆ ಮೀನ ರಾಶಿಯಲ್ಲಿ ರಾಹು ಸೂರ್ಯನ ಸಂಯೋಗ. ಇದರಿಂದಾಗಿ ಯಾವ ರಾಶಿಯವರಿಗೆ ಸಮಸ್ಯೆ ಹೆಚ್ಚಾಗಲಿದೆ ಎಂಬುದನ್ನ ನೋಡೋಣ.

ಹೋಳಿ ಹಬ್ಬಕ್ಕೆ ಒಂದು ವಾರ ಮುಂಚೆ ಅಂದರೆ ಮಾರ್ಚ್ ಹದಿನೆಂಟರಂದು ಶನಿಯ ಉದಯ ಆಗಲಿದೆ. ಸಾಮಾನ್ಯವಾಗಿ ಶನಿಯ ಉದಯವು ಎಲ್ಲ ರಾಶಿಗಳ ಮೇಲೆ ಒಂದಲ್ಲ ಒಂದು ಪರಿಣಾಮ ಉಂಟುಮಾಡುತ್ತದೆ. ಈ ಸಲವು ಪರಿಣಾಮ ಬೀಳಲಿದೆ. ಇದಲ್ಲದೇ ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹುವಿನ ಸಂಗಮವಾಗಲಿದೆ, ಸೂರ್ಯ ಅಥವಾ ಚಂದ್ರನ ಜೊತೆಗೆ ಉಂಟಾಗುವ ರಾಹು ಸಂಯೋಗದಿಂದ ಗ್ರಹಣ ಉಂಟಾಗುತ್ತದೆ. ಈ ಗ್ರಹಣವನ್ನ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಶುಭವೆಂದು ಕರೆಯಲಾಗುತ್ತದೆ. ಅಶುಭಯೋಗ ಹಲವು ರಾಶಿಗಳಿಗೆ ತೊಂದರೆ ಉಂಟುಮಾಡುತ್ತದೆ. ನಿಮ್ಮ ರಾಶಿಗೆ ಇದರ ಪ್ರಭಾವ ಎಷ್ಟಿರುತ್ತದೆ ಎಂಬುದನ್ನು ನೋಡಿ ನೀವು ಹುಷಾರಾಗಿ ಹೆಜ್ಜೆ ಇಡತಕ್ಕದ್ದು.

ಇದನ್ನೂ ಕೂಡ ಓದಿ : Pahani : ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ – ಎಲ್ಲಾ ರೈತರಿಗೆ ಇಲ್ಲ ಅಂದ್ರೆ ಸರ್ಕಾರಿ ಸೌಲಭ್ಯಗಳು ಸಿಗಲ್ಲ.!

ಚಂದ್ರಗ್ರಹಣ :- ಗ್ರಹಣ ಯೋಗದಿಂದ ಶುಭ. ಮಾರ್ಚ್ ಇಪ್ಪತ್ತೈದರಂದು ಹೋಳಿ ದಿನದಂದೇ ಚಂದ್ರ ಗ್ರಹಣ ಸಂಭವಿಸಲಿದೆ. ಮತ್ತು ಮೀನ ರಾಶಿಯಲ್ಲಿ ಗ್ರಹಣ ಯೋಗವಿದೆ. ಎರಡು ವಿದ್ಯಮಾನಗಳು ಕಿರಿಕಿರಿ ಉಂಟು ಮಾಡಲಿದೆ ಎಂಬಂತೆ ಜೊತೆಯಾಗಿದೆ.

ಚಂದ್ರ ಗ್ರಹಣವು ಮಾರ್ಚ್ ಇಪ್ಪತ್ತೈದರ ಬೆಳಗ್ಗೆ 10:24 ರಿಂದ ಮಧ್ಯಾಹ್ನ 3:01 ರ ವರೆಗೆ ಜರುಗಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಂತ ಪರಿಣಾಮ ಇಲ್ಲ ಅಂದುಕೊಳ್ಳಬೇಡಿ. ಭಾರತದ ಮಂದಿಗೆ ಇದರ ಪರಿಣಾಮವಿದೆ. ವಿಶೇಷವಾಗಿ ಕೆಲವು ರಾಶಿಯವರು ಜಾಗರೂಕರಾಗಿರುವುದು ಅವಶ್ಯಕ. ಆ ರಾಶಿಗಳು ಯಾವುವು ಎಂದು ನೋಡೋಣ.

ಸಿಂಹ ರಾಶಿ :- ಗ್ರಹಣವು ಸಿಂಹ ರಾಶಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಮನೆಯಲ್ಲಿ ಅಂತಃಕಲಹ ಹೆಚ್ಚಾಗಬಹುದು. ಗೌರವ ಮತ್ತು ಪ್ರಗತಿಗೆ ಧಕ್ಕೆ ಬರಬಹುದು. ಯಾವುದೇ ರೀತಿಯ ನೋವು ಸಾವಿನಂತೆ ಬರಬಹುದು. ಎಚ್ಚರವಾಗಿರಿ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ.

ಇದನ್ನೂ ಕೂಡ ಓದಿ : Annabhagya Scheme : ಜನವರಿ ಮತ್ತು ಫೆಬ್ರವರಿ ತಿಂಗಳ ಅಕ್ಕಿ ಹಣ ಬಂದಿಲ್ವಾ – ಈಗಲೇ ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ ನೋಡಿ

ವೃಶ್ಚಿಕ ರಾಶಿ :- ಗ್ರಹಣವು ವೃಶ್ಚಿಕ ರಾಶಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ. ಕೆಲವು ರೀತಿಯ ದುಃಖ ಇರಬಹುದು. ಕೆಲಸ ಪೂರ್ಣಗೊಳ್ಳುವ ಕಾರಣ ನೀವು ಚಿಂತಿತರಾಗಿರಬಹುದು, ಖರ್ಚು ಹೆಚ್ಚಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಕೆಲವು ವಿಷಯದ ಬಗ್ಗೆ ವಿವಾದ ಉಂಟಾಗಬಹುದು. ಹೆಚ್ಚು ಚರ್ಚೆಗೆ ಒಳಗಾಗಬೇಡಿ. ಗ್ರಹಣದ ದಿನ ನಿಮ್ಮ ಮನಸ್ಸನ್ನ ಶಾಂತವಾಗಿಡಲು ಪ್ರಯತ್ನಿಸಿ.

ಕುಂಭ ರಾಶಿ :- ಕುಂಭ ರಾಶಿಯ ವ್ಯಕ್ತಿಗಳು ನೀವು ಭಾರಿ ಜೋಪಾನವಾಗಿರಬೇಕಾದ ಸಂದರ್ಭವಿದು. ನಕ್ಷತ್ರಗಳು, ಗ್ರಹಗಳು ಎಲ್ಲರೂ ಒಟ್ಟು ಸೇರಿಕೊಂಡು ನಿಮಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಜಾಸ್ತಿಯಿದೆ. ಅನಿರೀಕ್ಷಿತವಾಗಿ ದೊಡ್ಡ ದೊಡ್ಡ ಸಮಸ್ಯೆಗಳು ಬಂದು ದಾರಿಗೆ ಅಡ್ಡವಾಗಿ ಸಿಲುಕಿಕೊಳ್ಳಬಹುದು. ಒಂದೊಮ್ಮೆ ನೀವು ಖಾಲಿಯಾಗಿ ಕೂತುಕೊಳ್ಳಬಹುದಾದ ಸಾಧ್ಯತೆ ಉಂಟಾಗಬಹುದು.

ಇದನ್ನೂ ಕೂಡ ಓದಿ : Solar Pumpset : ಉಚಿತ ಸೋಲಾರ್ ಪಂಪ್ ಸೆಟ್.! 1.5 ಲಕ್ಷ ಸಬ್ಸಿಡಿ : ಮೊಬೈಲ್ ನಲ್ಲಿಯೇ ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಸಲ್ಲಿಸಿ.!

ವಿಶೇಷವಾಗಿ ಉದ್ಯೋಗದಲ್ಲಿರುವವರು, ವ್ಯವಹಾರಸ್ಥರು ಕೊಂಚ ಜಾಸ್ತಿಯೇ ಎಚ್ಚರ ವಹಿಸಬೇಕು. ಹಣ ಬರುವುದು ನಿಲ್ಲಬಹುದು, ಆರ್ಥಿಕ ಸಂಕಷ್ಟಕ್ಕೆ ದಾರಿಯಾಗಬಹುದು. ಕೆಲಸಗಳು ಸೂಚನೆ ಇಲ್ಲದೆ ನಿಂತುಹೋಗಬಹುದು. ಅದೆಲ್ಲಕ್ಕಿಂತ ಹೆಚ್ಚಾಗಿ ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಸ್ವಲ್ಪ ಏರುಪೇರು ಕೂಡ ಕಷ್ಟ ಕೊಡುತ್ತದೆ. ಆದರೆ ಈ ಹಂತ ಸಣ್ಣದು. ಸಾವರಿಸಿಕೊಂಡು ನಿಲ್ಲುವ ಶಕ್ತಿ ಒದಗಿ ಬರಬೇಕಾಗಿದೆ. ಆಮೇಲೆ ನಿರಾಳತೆ ಆವರಿಸಲಿದೆ.

ಮಿಥುನ ರಾಶಿ :- ಮಿಥುನ ರಾಶಿಯ ಮೇಲೆ ಗ್ರಹಣದ ಪ್ರಭಾವವು ನಕಾರಾತ್ಮಕವಾಗಿರುತ್ತದೆ. ಗಾಯದ ಸಾಧ್ಯತೆ ಹೆಚ್ಚು. ಯಾವುದೇ ಅಗತ್ಯವಿಲ್ಲದ ಚರ್ಚೆಯಲ್ಲಿ ತೊಡಗಬೇಡಿ. ಮಾನಸಿಕ ಒತ್ತಡ ಹೆಚ್ಚಾಗಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply