Gold Price Today : ಚಿನ್ನದ ಓಟಕ್ಕೆ ಬೀಳುತ್ತಿಲ್ಲ ಬ್ರೇಕ್! ಇಂದಿನ ಚಿನ್ನದ ಬೆಲೆ?

Gold Rate Today : ಚಿನ್ನದ ದರ(Gold Rate) ಯಾವತ್ತೂ ಕಡಿಮೆ ಆಗಲ್ಲ, ಅದು ಏರುತ್ತಲೇ ಇರುತ್ತೆ ಅನ್ನೋದು ಸಾಮಾನ್ಯ ನಂಬಿಕೆ.. ಇದು ನಿಜ ಕೂಡಾ.. ಚಿನ್ನದ ಬೆಲೆ ಆಗಾಗ ಸ್ವಲ್ಪ ಕಡಿಮೆ ಆದರೂ ಕೂಡಾ, ಏರಿಕೆಯಂತೂ ಇದ್ದೇ ಇರುತ್ತೆ.. ಚಿನ್ನದ ಬೆಲೆ ಕೂಡಾ ಪೆಟ್ರೋಲ್ ಬೆಲೆಯಂತೆ.. ಯಾವಾಗಲೂ ಏರುಮುಖವಾಗೇ ಇರುತ್ತೆ.

ಇದೇ ಕಾರಣಕ್ಕಾಗಿ ದೀರ್ಘಾವಧಿಗೆ ಇನ್ವೆಸ್ಟ್ ಮಾಡುವವರು ಚಿನ್ನದ ಮೇಲೆ ಹಣ ಹೂಡಿಕೆ ಮಾಡಿದ್ರೆ ಸೇಫ್ ಅಂತಾ ಭಾವಿಸ್ತಾರೆ.. ಹಣ ಇದ್ದಾಗ ಚಿನ್ನ ಖರೀದಿ ಮಾಡಿ ಆಪತ್ಕಾಲಕ್ಕೆ ಚಿನ್ನವನ್ನ ಮಾರಿ ತಮ್ಮ ಹಣಕಾಸಿನ ಅಗತ್ಯತೆಯನ್ನ ಪೂರೈಸಿಕೊಳ್ಳುವವರು ಇದ್ದಾರೆ.. ಎಂಥದ್ದೇ ಆರ್ಥಿಕ ಕುಸಿತ ಎದುರಾದ್ರೂ ಕೂಡಾ ಚಿನ್ನದ ದರ ಕುಸಿತ ಕಾಣೋದಿಲ್ಲ.. ಹಾಗೆ ನೋಡಿದ್ರೆ ಯಾವುದೇ ದೇಶದ ಆರ್ಥಿಕತೆ ಕುಸಿತ ಕಂಡರೆ, ಚಿನ್ನದ ಬೆಲೆ ಏರಿಕೆ ಆಗುತ್ತೆ.

ಇದನ್ನೂ ಕೂಡ ಓದಿ : ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!

ಹಾಗಾಗಿ ಭವಿಷ್ಯದ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಜನರು ಚಿನ್ನವನ್ನು ಖರೀದಿ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೇ, ದೇಶದ ಆರ್ಥಿಕತೆಯ ಮೇಲೂ ಚಿನ್ನ ಪ್ರಭಾವ ಬೀರುತ್ತದೆ ಮತ್ತು ಹಣದುಬ್ಬರದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತದೆ.

ಆದರೆ, ಚಿನ್ನದ ದರ ಎಂಬುದು ಸದಾ ಸ್ಥಿರವಾಗಿರುವಂಥದ್ದಲ್ಲ. ಅಂತಾರಾಷ್ಟ್ರೀಯವಾಗಿ ಹಲವಾರು ಕಾರಣಗಳಿಂದಾಗಿ ಅದರ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಬೆಲೆಯ ಪ್ರತಿನಿತ್ಯದ ಅಪ್ಡೇಟ್ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಾಕಷ್ಟು ಉಪಯುಕ್ತವಾಗಿರುತ್ತದೆ.

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ 22K ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 5,505/- ರೂ. ಆಗಿದ್ದು, ಇದೇ ರೀತಿ 10 ಗ್ರಾಂ ಗೆ 55,050/- ರೂಪಾಯಿಯಾಗಿದೆ,
ಹಾಗೆ, 24K ಕ್ಯಾರಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 6,005/- ರೂ. ಆಗಿದ್ದು, ಇದೇ ರೀತಿ 10 ಗ್ರಾಂ ಗೆ 60,050/- ರೂಪಾಯಿಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 22K ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,050/- ಆಗಿದ್ದರೆ ಚೆನ್ನೈನಲ್ಲಿ, 55,700/- ರೂ., ಮುಂಬೈ ನಲ್ಲಿ 55,000/- ರೂ., ಹಾಗೂ ಕೊಲ್ಕತ್ತಾ ನಗರದಲ್ಲಿ ಕ್ರಮವಾಗಿ 55,000/- ರೂಪಾಯಿ ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 55,150/- ರೂ. ಆಗಿದೆ.

ಇದನ್ನೂ ಕೂಡ ಓದಿ : ನಾಗಮಣಿ ಕದ್ದ ವ್ಯಕ್ತಿಗೆ ಹೆಣ್ಣು ನಾಗರಹಾವು ಮಾಡಿದ್ದೇನು ಗೊತ್ತಾ.? ಭಯ ಪಡ್ತೀರಾ.!

ಚಿನ್ನದಂತೆ ಬೆಳ್ಳಿಯೂ(Silver) ಸಹ ಸಾಕಷ್ಟು ಆಕರ್ಷಣೆಯುಳ್ಳ ವಸ್ತುವಾಗಿದ್ದು ಹೂಡಿಕೆದಾರರ ಹಾಗೂ ಆಭರಣಪ್ರಿಯರ ನೆಚ್ಚಿನ ಸಾಧನವಾಗಿದೆ. ಬೆಳ್ಳಿ ಚಿನ್ನದಷ್ಟು ಅಪರೂಪವಲ್ಲದೆ ಹೋದರೂ ಹೆಚ್ಚಿನ ಮಟ್ಟದಲ್ಲಿ ಬೆಳ್ಳಿಯಿಂದ ಮಾಡಲಾದ ಪೂಜಾ ಪರಿಕರಗಳಿಗೆ ಅಪಾರವಾದ ಬೇಡಿಕೆ ಇರುವುದರಿಂದ ಭಾರತದಲ್ಲಿ ಬೆಳ್ಳಿಗೆ ಸಾಕಷ್ಟು ಡಿಮ್ಯಾಂಡ್ ಇದೆ.

ಇನ್ನು ಬೆಳ್ಳಿಯು ಮಾರ್ಚ್ ಫ್ಯೂಚರ್ಸ್ ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿಗೆ 100/- ರೂಪಾಯಿಯಷ್ಟು ಜಾಸ್ತಿಯಾಗಿ 74,700/- ರೂಪಾಯಿಗೆ ವಹಿವಾಟು ನಡೆಸುತ್ತಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply