Gold Rate : ಚಿನ್ನದ ಬೆಲೆ ಇಳಿಕೆ.? ಲೋಕಸಭೆ ಚುನಾವಣೆ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ.!

Gold Rate : ನಮಸ್ಕಾರ ಸ್ನೇಹಿತರೇ, ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಭಾರತೀಯ ಮಹಿಳೆಯರಿಗೆ ಪಂಚಪ್ರಾಣ. ನಮ್ಮ ಭಾರತೀಯ ಮಹಿಳೆಯರು ಆಭರಣ ಪ್ರಿಯರು. ಇದೇ ಕಾರಣಕ್ಕೆ ಏನೋ ಗೊತ್ತಿಲ್ಲ.? ಇತ್ತೀಚೆಗೆ ಎಲೆಕ್ಷನ್ ಘೋಷಣೆಗೂ ಮುನ್ನ ಇರುವ ಚಿನ್ನದ ಬೆಲೆ ದಿಢೀರನೆ ಐದರಿಂದ ಆರು ಸಾವಿರದವರೆಗೆ ಬೆಲೆ ಏರಿಕೆಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಸಭೆ, ಸಮಾರಂಭ, ಸಾಂಸ್ಕೃತಿಕ ಯಾವುದೇ ಆಚರಣೆಗಳು ಹಾಗು ಮದುವೆ ಸೇರಿದಂತೆ ಇತರ ಎಲ್ಲ ಫಂಕ್ಷನ್ ಗಳಿಗೂ ಕೂಡ ಅಗತ್ಯವಾಗಿ ಬಂಗಾರವನ್ನು ಬಳಕೆ ಮಾಡುತ್ತಾರೆ.

2024 ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಒಂದು ಲಕ್ಷಕ್ಕೆ ಹೋಗುತ್ತದೆ ಎಂದು ಸಾಕಷ್ಟು ವರದಿಗಳು ತಿಳಿಸಿವೆ. ಹಾಗು ಎಲೆಕ್ಷನ್ ಮುಗಿದ ಬಳಿಕ ಎಷ್ಟು ದಿನಗಳವರೆಗೆ ಎಷ್ಟು ಚಿನ್ನದ ಬೆಲೆ ಇಳಿಕೆಯಾಗುತ್ತೆ ಎನ್ನುವ ಕುರಿತು ಕೂಡ ಅನೇಕ ಸಂಶೋಧಕರು ಕೂಡ ತಿಳಿಸಿದ್ದಾರೆ. ಇಷ್ಟಕ್ಕೂ ಚಿನ್ನದ ಬೆಲೆ ಎಷ್ಟು ಇಳಿಕೆಯಾಗುತ್ತದೆ ಹಾಗು 2024 ರ ಅಂತ್ಯದ ವೇಳೆಗೆ ಬಂಗಾರದ ಬೆಲೆ ಎಷ್ಟಕ್ಕೆ ಹೋಗಿ ತಲುಪಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ಓದಿ : ಸ್ವಂತ ವಾಹನ ಇರುವ ಎಲ್ಲರಿಗೂ ಬಿಗ್ ಶಾಕ್ | ಈ ಹೊಸ ರೂಲ್ಸ್ ಎಲ್ಲರಿಗೂ ಕಡ್ಡಾಯ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ

ಪ್ರತಿನಿತ್ಯ ಚಿನ್ನ ಬೆಳ್ಳಿಯ ದರ ವಿಪರೀತ ಹೆಚ್ಚಳದಿಂದ ಚಿನ್ನ ಪ್ರಿಯರಿಗೆ ಬೇಸರ ತರಿಸುತ್ತಿದೆ. 1 ದಿನ ಇಳಿಕೆಯಾದರೆ ಮತ್ತೊಂದು ದಿನ ಅದಕ್ಕಿಂತ ದುಪ್ಪಟ್ಟು ಏರಿಕೆ ಆಗುತ್ತದೆ. ನಿನ್ನೆಯಷ್ಟೇ ಗೋಲ್ಡ್ ದಾಖಲೆ ಮಟ್ಟದಲ್ಲಿ ಏರಿಕೆ ಆಗಿತ್ತು. ಈಗಾಗಲೇ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಚಿನ್ನದ ಬೆಲೆ. ಇನ್ಮುಂದೆ ಬಾರಿ ಏರಿಕೆ ಆಗಲಿದೆ ಎಂದು ತಿಳಿದು ಬಂದಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಚಿನ್ನದ ಬೆಲೆ ಏರಿಕೆಯ ಮುನ್ಸೂಚನೆಯನ್ನು ನೀಡಿದೆ. ಅದೇನೇ ಇರಲಿ, ಜಗತ್ತಿನಲ್ಲಿ ಎರಡು ರಾಷ್ಟ್ರಗಳ ನಡುವೆ ಕಲಹ ಹೆಚ್ಚಾದಂತೆ ಚಿನ್ನವು ಗರಿಷ್ಠ ಹೊರೆಯನ್ನು ಹೊರಬೇಕಾಗಿ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದಂತೆ ಚಿನ್ನ ಮತ್ತು ಕಚ್ಚಾ ತೈಲದ ಬೆಲೆಗಳು ಏರಲು ಪ್ರಾರಂಭಿಸುತ್ತವೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ಪ್ರತಿ ಔನ್ಸ್‌ಗೆ 2,400 ಡಾಲರ್ ದಾಖಲೆಯನ್ನ ದಾಟಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಹೂಡಿಕೆದಾರರು ಚಿನ್ನದ ಕಡೆಗೆ ಮುಖ ಮಾಡಿದ್ದಾರೆ. ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತ ಸ್ವರ್ಗವೆಂದು ಪರಿಗಣಿಸಲಾಗಿದೆ. ಶುಕ್ರವಾರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಶೇಕಡಾ 22 ರಷ್ಟು ಏರಿಕೆಯಾಗಿದ್ದು, ಈ ವಾರ ಚಿನ್ನದ ಬೆಲೆಯಲ್ಲಿ ಶೇಕಡಾ ನಾಲ್ಕರಷ್ಟು ಏರಿಕೆಯಾಗಿದೆ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ ಯರಿಗೆ ಈ ಕೆಲಸ ಕಡ್ಡಾಯ | ಏಪ್ರಿಲ್ 20 ರ ಒಳಗಾಗಿ ಮಾಡಿ | ಇಲ್ಲ ಅಂದ್ರೆ ಮುಂದಿನ ಕಂತುಗಳ ಹಣ ಬರಲ್ಲ.!

ಭವಿಷ್ಯದಲ್ಲಿ ಚಿನ್ನದ ದರ ಇನ್ನೂ ಹೆಚ್ಚಾಗಲಿದ್ದು, ಅದೇ ರೀತಿ ಬೆಳ್ಳಿಯ ಬೆಲೆ ಕೂಡ ಶೇಕಡಾ ನಾಲ್ಕರಷ್ಟು ಏರಿಕೆಯಾಗಿದೆ. ಪ್ರತಿ ಔನ್ಸ್‌ಗೆ $29.60 ತಲುಪಿದೆ. ಈ ವರ್ಷ ಅಂದ್ರೆ ನವೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 72 ಸಾವಿರಕ್ಕೆ ತಲುಪಬಹುದು. ಆದರೆ ಇನ್ನು ಏಪ್ರಿಲ್ ಆಗಿದ್ದರೂ ಸಹ ಮುಂದಿನ ಕೆಲವೇ ದಿನಗಳಲ್ಲಿ, ಇನ್ನು ಈ ಅಂಕಿ ಅಂಶವನ್ನು ದಾಟುವ ಸಾಧ್ಯತೆ ಇದೆ. ಇದರ ಮೇಲೆ ಮಧ್ಯಪ್ರಾಚ್ಯದಿಂದ ಹೊಸ ಜಾಗತಿಕ ಬಿಕ್ಕಟ್ಟು ಹೂಡಿಕೆದಾರರನ್ನ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 2024 ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಸುಮಾರು ಒಂದು ಲಕ್ಷ ರೂಪಾಯಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಸಂಶೋಧನಾ ವಿಶ್ಲೇಷಕ ಸೌಮ್ಯ ಗಾಂಧಿ ಅವರು ಹೇಳುವ ಪ್ರಕಾರ ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿದ ಉದ್ವಿಗ್ನತೆ ಮತ್ತು ಸಿರಿಯಾದಲ್ಲಿನ ತನ್ನ ರಾಯಭಾರಿ ಕಚೇರಿಯ ಮೇಲೆ ಇರಾನ್ ನ ಪ್ರತಿಕಾರದ ಭಯದ ನಂತರ ಚಿನ್ನದ ಮೇಲೆ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ. ಇದರಿಂದ ಚಿನ್ನದ ಬೆಲೆಯು ವೇಗವಾಗಿ ಹೆಚ್ಚಲಿದೆ. ಆದಾಗ್ಯೂ, ವೇಗವಾಗಿ ಬದಲಾಗುತ್ತಿರುವ ಜಾಗತಿಕ ಮಾರುಕಟ್ಟೆಯಿಂದಾಗಿ ಈ ಸಮಯದಲ್ಲಿ ಅದರ ಬೆಲೆಗಳನ್ನು ಇಳಿಕೆಗೊಳಿಸಲು ಯಾವುದೇ ಅವಕಾಶವಿಲ್ಲ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply