ಡಿ ಬಾಸ್ ದರ್ಶನ್ ಅವರ 56ನೇ ಸಿನಿಮಾದ ವಿಲನ್ ಯಾರು ಗೊತ್ತಾ.? | Darshan Thoogudeepa | D56

ಡಿ ಬಾಸ್ ದರ್ಶನ್ ಅವರ 56ನೇ ಸಿನಿಮಾದ ವಿಲನ್ ಯಾರು ಗೊತ್ತಾ.? | Darshan Thoogudeepa | D56

ಡಿ ಬಾಸ್ ಖ್ಯಾತಿಯ, ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿರುವ ಬ್ಲಾಕ್ ಬಸ್ಟರ್ ‘ಕ್ರಾಂತಿ’ ಸಿನಿಮಾದ ನಂತರ ಡಿ ಬಾಸ್ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸಿನಿಮಾವೆಂದರೆ D56 ಚಿತ್ರ. ಈ ಚಿತ್ರದ ಟೈಟಲ್ ಹಾಗು ಇದಕ್ಕೆ ಸಂಬಂಧಿಸಿದಂತಹ ಪ್ರಮುಖ ವಿಚಾರಗಳು ಫೆಬ್ರವರಿ 16 ಅಂದ್ರೆ, ದರ್ಶನ್ ಅವರ ಜನ್ಮದಿನದಂದು ವಿಶೇಷವಾಗಿ ಮೂಡಿಬರಲಿದ್ದು, ಇದು ಡಿ ಬಾಸ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಕನ್ನಡ ಖ್ಯಾತ ನಟಿ ಮಾಲಾಶ್ರೀ ಅವರ ಮಗಳು ರಾಧಾನಾ ರಾಮ್, ದರ್ಶನ್ ಅವರ ಈ ಸಿನಿಮಾದ ಮೂಲಕ ಪಾದಾರ್ಪಣೆ ಮಾಡುತ್ತಿದ್ದು, ಈ ಚಿತ್ರವನ್ನು ರಾಬರ್ಟ್ ನ್ಯಾಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಅವರೇ ನಿರ್ದೇಶಿಸುತ್ತಿದ್ದಾರೆ. ಕನ್ನಡ ಸಿನಿಮಾರಂಗದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾಗಿರುವ ರಾಕ್ ಲೈನ್ ವೆಂಕಟೇಶ್ ಅವರು ಈ ಸಿನಿಮಾದ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ ಇದೊಂದು ಸತ್ಯ ಘಟನೆ ಆಧಾರಿತ ಸಿನಿಮಾ ಇನ್ನು ಸುದ್ಧಿ ಕೇಳಿಬರುತ್ತಿದೆ.

WhatsApp Group Join Now
Telegram Group Join Now
Do you know who is the villain of Darshan's 56th movie?

ಪರಭಾಷೆ ಚಿತ್ರರಂಗದ ಖ್ಯಾತ ಖಳನಾಯಕರೊಬ್ಬರು ದರ್ಶನ್ ರವರ ಈ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಲಿದ್ದಾರೆ ಎಂಬುದು ಈಗ ಅಧೀಕೃತವಾಗಿ ಕೇಳಿ ಬರುತ್ತಿದೆ. ಈಗಾಗಲೇ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಕೂಡ ಈ ಖ್ಯಾತ ಖಳನಾಯಕ ನಟಿಸಿದ್ದು, ಈ ಸಿನಿಮಾದಲ್ಲೂ ಕೂಡ ಅವರೇ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ.

ಹೌದು, ಈಗಾಗಲೇ ದಕ್ಷಿಣ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ತೆಲುಗು ಚಿತ್ರರಂಗದ ಖ್ಯಾತ ಖಳನಾಯಕ ಜಗಪತಿ ಬಾಬು ರವರು ದರ್ಶನ್ ರವರ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುವುದು ಅಧೀಕೃತವಾಗಿದೆ. ಇದು ಜಗಪತಿ ಬಾಬು ರವರ ಜನ್ಮ ದಿನದ ಅಂಗವಾಗಿ ಡಿ೫೬ ಚಿತ್ರತಂಡ ಈ ವಿಚಾರವನ್ನು ಹೊರಹಾಕಿದೆ. ಮತ್ತೊಮ್ಮೆ ದರ್ಶನ್ ಹಾಗು ಜಗಪತಿ ಬಾಬು ಕಾಂಬಿನೇಷನ್ ನಲ್ಲಿ ಈ ಚಿತ್ರ ಡಿ ಬಾಸ್ ಅಭಿಮಾನಿಗಳು ಹಾಗು ಪ್ರೇಕ್ಷಕರ ಮನಗೆಲ್ಲುವುದು ಖಂಡಿತ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : ರಿಲೀಸ್ ಗೂ ಮೊದಲೇ ಕಬ್ಜ ಸಿನಿಮಾಗೆ OTT ಯಿಂದ 100 ಕೋಟಿ ಆಫರ್! । Kabza

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply