ಎದೆಹಾಲು ಉಣಿಸುವುದು ತುಂಬಾನೇ ಸಹಜ ಹಾಗು ನೈಸರ್ಗಿಕ ಎನಿಸಬಹುದು. ಇದನ್ನ ಮಾನವ ಜಾತಿ ಇರುವಾಗಿನಿಂದಲೂ ಮಾಡಿಕೊಂಡು ಬಂದಿರುವುದರಿಂದ, ಇದರ ಬಗ್ಗೆ ನಿಮಗೆ ಸಲಹೆ ನೀಡಲು ಜನರ ಕೊರತೆ ಏನು ಇಲ್ಲ. ಹಾಗಿದ್ದರೂ, ನಿಮಗೆ ಈ ಪಟ್ಟಿಯಲ್ಲಿರುವ ಕೆಲವು ವಿಷಯಗಳು ಓದಿದಮೇಲೆ, ಇದನ್ನ ಏಕೆ ನಿಮ್ಮ ತಾಯಿ ಅಥವಾ ಸಂಬಂಧಿಕರು ಹೇಳೇ ಇರಲಿಲ್ಲ ಎಂದುಕೊಳ್ಳುವಿರಿ.
೧. ಮೊದಲ ಬಾರಿಗೆ ಬರುವುದು ಹಾಲಲ್ಲ :- ಹೆರಿಗೆಯ ನಂತರ ಕೆಲವು ದಿನಗಳವರೆಗೆ ನೀವು ನಿಮ್ಮ ಮಗುವನ್ನ ಸಲಹುವಾಗ, ನೀವು ಹೊರಸೂಸುವುದು ಹಾಲಲ್ಲ. ಅದು ಗಟ್ಟಿಯಾದ, ಹಳದಿ ಬಣ್ಣದ, ಜೀರ್ಣಿಸಿಕೊಳ್ಳಬಹುದಾದ ಕೊಲಸ್ಟ್ರುಮ್ ಎಂಬ ಪದಾರ್ಥ. ಅದರಲ್ಲಿ ನಿಮ್ಮ ಮಗುವಿಗೆ ಬೇಕಾದ ಎಲ್ಲಾ ಪ್ರತಿಕಾಯಗಳು, ಪೋಷಕಾಂಶಗಳು ಇರುತ್ತವೆ. ನೀವು ನಿಮ್ಮ ಮಗುವಿಗೆ ನಿಜಾವಗಿಯು ಹಾಲು ಕುಡಿಸುವುದು ಹೆರಿಗೆಯಾದ 2-5 ದಿನಗಳ ನಂತರ.
೨. ನಿಮ್ಮ ಮೊಲೆತೊಟ್ಟುಗಳು ರಕ್ತ ಸುರಿಸಬಹುದು :- ನೀವು ಕೆಲವೊಮ್ಮೆ ನಿಮ್ಮ ತೊಟ್ಟುಗಳು ಬಿರುಕು ಬಿಡುವುದು ಹಾಗು ರಕ್ತ ಸುರಿಸುವುದನ್ನ ಕಂಡಿರುತ್ತೀರ. ಇದು ಅಸಹಜ ಅಲ್ಲವೇ ಅಲ್ಲ. ನೀವು ಈ ಸಮಯದಲ್ಲಿ ನಿಮ್ಮ ವೈದ್ಯರ ಬಳಿ ಮಾತಾಡಬಹುದು ಹಾಗು ಅವರು ನಿಮ್ಮ ನೋವು ಶಮನಕ್ಕೆ ಯಾವುದಾದರು ಕ್ರೀಂ ಅಥವಾ ಆಯಿಂಟ್ಮೆಂಟ್ ಹೇಳುವರು. ನೀವು ನಿಮ್ಮ ತೊಟ್ಟುಗಳು ಕಪ್ಪಗಾಗಿರುವುದನ್ನು ನೀವು ಕಾಣಬಹುದು. ನಿಮ್ಮ ದೇಹದಲ್ಲಿನ ಹಾರ್ಮೋನ್ ಗಳ ಗತಿಯಲ್ಲಿ ಆಗುವ ಬದಲಾವಣೆಯೇ ಇದಕ್ಕೆ ಕಾರಣ.
೩. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ :- ನೀವು ಪ್ರತಿಸಲ ಎದೆಹಾಲು ಉಣಿಸಿದಾಗ 500-600 ಕ್ಯಾಲೊರಿ ಖರ್ಚು ಮಾಡುವಿರಿ. ಹಾಗಾಗಿ ಎದೆಹಾಲು ಕೇವಲ ಬಾಂಧವ್ಯ ಬೆಳಸದೆ, ಕೇವಲ ನಿಮ್ಮ ಮಗುವಿಗೆ ಪೋಷಕಾಂಶಗಳನ್ನು ನೀಡದೆ, ನಿಮ್ಮನ್ನು ಆರೋಗ್ಯಕರವಾಗಿ ಹಾಗು ಒಳ್ಳೆಯ ಆಕಾರದಲ್ಲಿ ಇರಲು ಸಹಾಯ ಮಾಡುತ್ತದೆ.
೪. ನಿಮ್ಮ ಪಿರಿಯಡ್ ಅನ್ನು ಮುಂದೂಡುತ್ತದೆ :- ನಿಮ್ಮ ಗರ್ಭಧಾರಣೆ ಸಮಯದ ೯ ತಿಂಗಳಲ್ಲಿ ನಿಮಗೆ ಋತುಸ್ರಾವ ಆಗಿರುವುದಿಲ್ಲ. ಈಗ ನೀವು ನಿಮ್ಮ ಮಗುವಿಗೆ ಎದೆಹಾಲು ನೀಡಲು ಶುರು ಮಾಡಿದಾಗ, ನಿಮ್ಮ ಋತುಸ್ರಾವವು ಪುನಃ ಎರೆಡು ಮೂರು ತಿಂಗಳುಗಳವರೆಗೆ ವಿಳಂಬವಾಗುತ್ತದೆ. ಈ ಸಮಯವು ನೀವು ಎಷ್ಟು ತಿಂಗಳುಗಳ ಕಾಲ ಎದೆಹಾಲು ನೀಡುವಿರಿ ಎಂಬುದರ ಮೇಲೆ ಬದಲಾಗುತ್ತದೆ.
೫. ಇದು ನೋವು ಉಂಟು ಮಾಡಬಹುದು :- ಎದೆಹಾಲು ಉಣಿಸುವುದು ಅಂದುಕೊಂಡಷ್ಟು ಹಿತಕರವಾಗಿ ಇರುವುದಿಲ್ಲ, ಅದರಲ್ಲೂ ನಿಮಗೆ ಮೊದಲೇ ಅನುಭವ ಇಲ್ಲದಿದ್ದರೆ. ನಿಮಗೆ ನೋವು ಉಂಟಾಗುತ್ತಿದ್ದರೆ ಅದಕ್ಕೆ ಕಾರಣ ಕಟ್ಟಿಕೊಂಡ ನಾಳ ಇರಬಹುದು ಅಥವಾ ಸೋಂಕು ಇರಬಹುದು. ಆದರೆ ಬಹುತೇಕ ಸಮಯ ಅದು ನಿಮ್ಮ ಮಗುವು ನಿಮ್ಮ ತೊತ್ತುಗಳಿಗೆ ಸರಿಯಾಗಿ ಕಚ್ಚಿಕೊಂಡಿದೆಯೇ ಎಂದು ನೋಡಿಕೊಳ್ಳದೆ ಇರುವುದು. ನೀವು ಭಂಗಿಗಳನ್ನ ಬದಲಾಯಿಸುತ್ತಾ ಯಾವುದು ಸೂಕ್ತ ಎಂದು ತಿಳಿದುಕೊಳ್ಳಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate : ಇಂದಿನ ಗೋಲ್ಡ್ ರೇಟ್ ಇಳಿಕೆ ಕಂಡಿದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ಬೆಲೆ.?
- MGNREGA : ರೈತರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ 2 ಲಕ್ಷ ಸಹಾಯಧನಕ್ಕಾಗಿ ಅರ್ಜಿ | ಗ್ರಾಮೀಣ ರೈತರಿಗೆ ಗುಡ್ ನ್ಯೂಸ್.!
- Electricity Meters : ಮನೆಯಲ್ಲಿರುವ ವಿದ್ಯುತ್ ಮೀಟರ್ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ಗುಡ್ ನ್ಯೂಸ್.!
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ