Annabhagya Scheme : ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ಧಿ.! ನಿಮ್ಮ ಖಾತೆಗೆ ಹಣ ಜಮಾ ಡೇಟ್ ಫಿಕ್ಸ್

Annabhagya Scheme : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆ ಮೂಲಕ ಬಡವರಿಗೆ ಸಹಾಯ ಮಾಡುತ್ತಿದೆ. ಹೌದು, ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ 5 ಕೆಜಿ ಆಹಾರ ಧಾನ್ಯ. ಅಕ್ಕಿಗೆ ಬದಲಾಗಿ ನೇರ ನಗದು ವರ್ಗಾವಣೆಯನ್ನೂ ತಿಂಗಳಿಗೆ 170 ರೂ.ನಂತೆ ಜಮಾ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಮಂದಿ ಈ ಯೋಜನೆಯ ಅರ್ಹ ಫಲಾನುಭವಿಗಳಾಗಿದ್ದು, ಕ್ರಮೇಣ ಜನವರಿ, ಫೆಬ್ರವರಿ ತಿಂಗಳ ಅಕ್ಕಿ ಹಣ ಕೆಲ ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು, 31ರೊಳಗೆ ಪ್ರತಿ ಜಿಲ್ಲೆಯ ಫಲಾನುಭವಿಗಳಿಗೆ ಜಮಾ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಕೂಡ ಓದಿ : Gold Rate : ಇಂದಿನ ಚಿನ್ನದ ಬೆಲೆ.? 24 ಗಂಟೆಯಲ್ಲಿ ಎಷ್ಟಾಗಿದೆ ನೋಡಿ ಬಂಗಾರದ ಬೆಲೆ.?

ಅನ್ನ ಭಾಗ್ಯ(AnnaBhagya Scheme) ಹಣ ಬ್ಯಾಂಕ್ ಖಾತೆಗೆ ಜಮಾ?

ಚುನಾವಣೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದಕ್ಕೆ ಒಪ್ಪದ ಕಾರಣ ಅನ್ನ ಭಾಗ್ಯ ಯೋಜನೆಯಡಿ(AnnaBhagya Scheme) 5 ಕೆಜಿ ಅಕ್ಕಿ ಬದಲು 170 ರೂ.ನಂತೆ ಕುಟುಂಬ ಸದಸ್ಯರಿಗೆ 34 ರೂ.ನಂತೆ ನೀಡಲಾಗುತ್ತಿದೆ. . ಹಾಗಾಗಿ ಅಕ್ಕಿ ಕೊರತೆ ಆಗುವವರೆಗೆ ಹಣ ನೀಡುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ.

ಅನ್ನಭಾಗ್ಯ ಯೋಜನೆಯ ಸಿಹಿಸುದ್ಧಿ ಏನು ಗೊತ್ತಾ.?

ಜನವರಿ, ಫೆಬ್ರುವರಿ ತಿಂಗಳ ಅನ್ನ ಭಾಗ್ಯದ(AnnaBhagya Scheme) ಹಣ ಜಮಾ ಆಗಿಲ್ಲ ಎಂಬ ಮಾತು ಈಗಾಗಲೇ ಹಲವರಿಂದ ಕೇಳಿ ಬರುತ್ತಿದೆ. ಮಾಹಿತಿಯ ಪ್ರಕಾರ ಕೆಲ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಇದೇ 31ರೊಳಗೆ ಜನವರಿ ಮತ್ತು ಫೆಬ್ರುವರಿ ತಿಂಗಳ ಅಕ್ಕಿ ಹಣ ಈಗಾಗಲೇ ಜಮಾ ಆಗಿದ್ದು, ಮಾರ್ಚ್ ತಿಂಗಳ ಹಣ ಜಮಾ ಆಗಲಿದೆ ಎಂಬ ಸಂತಸದ ಮಾಹಿತಿ ಲಭ್ಯವಾಗಿದೆ.

ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಹಣ ಜಮೆ?

ಕೆಲವೊಂದು ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಎರಡನೇ ಮುಖ್ಯಸ್ಥರ ಖಾತೆಗೆ ಅನ್ನಭಾಗ್ಯ ಯೋಜನೆಯ(AnnaBhagya Scheme) ಹಣವನ್ನು ಜಮಾ ಮಾಡಬಹುದು. ಅಂದರೆ ಕುಟುಂಬದ ಎರಡನೇ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಕೂಡ ಓದಿ : ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ – ಯಾವುದೇ ಸ್ವಯಂ ಉದ್ಯೋಗ ಕೈಗೊಳ್ಳಲು ಬಡ್ಡಿ ಇಲ್ಲದೆ ಸಿಗುತ್ತೆ 5 ಲಕ್ಷ ಹಣ ಸಾಲ.!

ಅನ್ನಭಾಗ್ಯ ಯೋಜನೆಯ ಖಾತೆ ಹೇಗೆ ಪರಿಶೀಲಿಸುವುದು.?

ಹಣ ಠೇವಣಿಯಾಗದೇ ಇದ್ದಲ್ಲಿ ಅನ್ನಭಾಗ್ಯ ಫಲಾನುಭವಿಗಳು ಅಂಚೆ ಕಚೇರಿಯಲ್ಲಿ ಹೊಸ ಉಳಿತಾಯ ಖಾತೆ ತೆರೆದು ತಮ್ಮ ಆಧಾರ್ ಮತ್ತು ಪಡಿತರ ಚೀಟಿಯನ್ನು ನವೀಕರಿಸಿ ಮತ್ತೊಮ್ಮೆ ನೋಂದಾಯಿಸಿಕೊಳ್ಳಬಹುದು.

ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in ಗೆ ಭೇಟಿ ನೀಡಿ ಅನ್ನಭಾಗ್ಯ ಯೋಜನೆಯ(AnnaBhagya Scheme) ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.? ಇಲ್ಲವಾ.? ಎನ್ನುವುದನ್ನು ಪರಿಶೀಲಿಸಬಹುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply