Katera : ನಟ ಕಿಚ್ಚ ಸುದೀಪ್ ಅವರು ದರ್ಶನ್ ಅವರ ಕಾಟೇರ ಸಿನಿಮಾವನ್ನ ನೋಡ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಸುದೀಪ್ ಅವರನ್ನ ಕೇಳಿದ್ದಕ್ಕೆ ಕಿಚ್ಚ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ಕೇಳಿದ್ರೆ ದರ್ಶನ್ ಫ್ಯಾನ್ಸ್ ಶಾಕ್ ಆಗ್ತೀರಾ?
ಇದನ್ನೂ ಕೂಡ ಓದಿ : ಅಂದು ಕ್ರಾಂತಿ ಸಿನಿಮಾ ಚಿತ್ರೀಕರಣ 15 ದಿನ ನಿಲ್ಲಿಸಿದ್ದರು ಏಕೆ ಗೊತ್ತೆ.? | Darshan Thoogudeepa
ಕಾಟೇರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಟೇರ ಚಿತ್ರತಂಡ ಸ್ಯಾಂಡಲ್ ವುಡ್ ನ ಕಲಾವಿದರಿಗೆ ವಿಶೇಷ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು. ಕಾಟೇರ ಸೆಲೆಬ್ರಿಟಿ ಶೋ ನೋಡಿದ ನಟ ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದರು ಈ ವೇಳೆ ನಟ ಕಿಚ್ಚ ಸುದೀಪ್ ಅವರಿಗೂ ಕೂಡ ಆಹ್ವಾನ ಹೋಗಿತ್ತಂತೆ. ಆದರೆ ಶೂಟಿಂಗ್ ನಲ್ಲಿ ಬಿಝಿ ಇದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಆದರೆ ಬೆಂಗಳೂರಿಗೆ ಬಂದ ಕೂಡಲೇ ಸಿನಿಮಾ ನೋಡ್ತೀನಿ ಅನ್ನುವ ಮಾತು ಹೇಳಿದ್ದರಂತೆ. ಆದರೆ ಸುದ್ದಿ ಬಂದಾಗ ದರ್ಶನ್ ಹಾಗೂ ಚಿತ್ರತಂಡದವರು ದುಬೈಗೆ ಹಾರಿದ್ದರು. ಇದೀಗ ದರ್ಶನ್ ಹಾಗೂ ಸ್ನೇಹಿತರು ದುಬೈನಿಂದ ವಾಪಸ್ ಆಗಿದ್ದಾರೆ.
ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan
ಕಾಟೇರ ಸಿನಿಮಾ ನೋಡಿದ್ರಾ ಅಂತ ಕಿಚ್ಚ ಸುದೀಪ್ ಅವರನ್ನ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಇನ್ನೂ ಇಲ್ಲ. ಶೂಟ್ ಕಾರಣ ನಿನ್ನೆ ತಾನೆ ಬೆಂಗಳೂರಿಗೆ ಬಂದೆ ನಿರ್ಮಾಪಕರು ಶೋ ನೋಡಲು ಕರೆದರೆ ಖಂಡಿತ ನೋಡ್ತೀನಿ ಅನ್ನುವ ಮಾತು ಹೇಳಿದ್ದಾರೆ. ಸದ್ಯದಲ್ಲೇ ಕಿಚ್ಚ ದಚ್ಚು, ಒಟ್ಟಿಗೆ ಕಾಟೇರ ಸಿನಿಮಾ ನೋಡಲಿದ್ದಾರೆ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ ಕಿಚ್ಚ ದಚ್ಚು ಮತ್ತೆ ಒಂದಾಗಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಸೆ. ಆಸೆ ಕಾಟೇರ ಸಿನಿಮಾದಿಂದ ಈಡೇರುತ್ತಾ ಕಾದು ನೋಡಬೇಕು.