ನಮಸ್ಕಾರ ಸ್ನೇಹಿತರೇ, ರೈಲು ನಮ್ಮ ಜೀವನದ ಅವಿಭಾಜ್ಯ ಅಂಗ. ಜೀವನದಲ್ಲಿ ಒಮ್ಮೆಯಾದ್ರೂ ರೈಲು ಪ್ರಯಾಣವನ್ನ ಪ್ರತಿಯೊಬ್ಬರೂ ಮಾಡಿರುತ್ತಾರೆ. ರೈಲಿನ ಕೊನೆಯ ಬೋಗಿಯ ಮೇಲೆ (x) ಗುಣಿಸು ಚಿಹ್ನೆಯನ್ನ ಯಾಕೆ ಬರೆದಿರುತ್ತಾರೆ ಗೊತ್ತಾ.? ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಷ್ಟು ಜನ ಈ ರೈಲು ಪ್ರಯಾಣವನ್ನ ಮಾಡ್ತಾರೆ. ನಮ್ಮ ದೇಶದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ರೈಲು ಯಾವುದು? ಇನ್ನು ಹೆಚ್ಚಿನ ಕೂತುಹಲಕಾರಿ ವಿಷಯಗಳನ್ನ ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಕೂಡ ಓದಿ : ₹50,000/- ಫ್ರೀ ಸ್ಕಾಲರ್ ಶಿಪ್ ಎಲ್ಲಾ ವಿದ್ಯಾರ್ಥಿಗಳಿಗೆ ಬಂಪರ್ ಸುದ್ಧಿ! । SBI Asha Scholarship Apply 2023
ನಮ್ಮ ಭಾರತೀಯ ರೈಲ್ವೆಯಲ್ಲಿ ಜನರು ಓಡಾಡುವ ರೈಲಿನ ಕೊನೆಯ ಬೋಗಿಯ ಮೇಲೆ (x) ಗುಣಿಸು ಚಿಹ್ನೆಯನ್ನ ಬರೆದಿರುತ್ತಾರೆ. ಯಾಕೆಂದರೆ, ಅದು ಆ ರೈಲಿನ ಕೊನೆಯ ಬೋಗಿಯಾಗಿರುತ್ತದೆ. ಆ ನಂತರ ಯಾವುದೇ ಬೋಗಿಗಳು ಮುಂದಕ್ಕೆ ಇರುವುದಿಲ್ಲ. ಇದು ಹಗಲು ಹೊತ್ತಿನಲ್ಲಿ ಕಾಣುತ್ತೆ. ಇನ್ನು ರಾತ್ರಿ ಹೊತ್ತು ಈ (x) ಗುಣಿಸುಚಿಹ್ನೆ ಕಾಣಿಸುವುದಿಲ್ಲ. ಅದಕ್ಕಾಗಿ ಆ ಒಂದು ಕೊನೆಯ ಬೋಗಿಯ ಮೇಲೆ ರೆಡ್ ಲೈಟನ್ನ ಹಾಕಿರುತ್ತಾರೆ. ಒಂದು ವೇಳೆ ಆಕಸ್ಮಾತ್ ಏನಾದರೂ ದುರ್ಘಟನೆಗಳು ನಡೆದಾಗ ಇದು ರೈಲು ಬೋಗಿಯ ಕೊನೆಯ ಬೋಗಿ ಅಂತ ತಿಳಿಯಲು ಈ ರೀತಿ ಮಾಡಿರುತ್ತಾರೆ.
ಮತ್ತೊಂದು ಅಚ್ಚರಿಯ ವಿಷಯ ಏನಂದ್ರೆ, ನಮ್ಮ ಭಾರತೀಯ ರೈಲಿನಲ್ಲಿ ಪ್ರತಿದಿನ ಸುಮಾರು 2.5 ಕೋಟಿಗೂ ಅಧಿಕ ಜನರು ಪ್ರಯಾಣವನ್ನ ಮಾಡುತ್ತಾರೆ. ನಮ್ಮ ಭಾರತೀಯ ಇಲಾಖೆಯಲ್ಲಿ ಕೆಲಸ ಮಾಡುವವರ ಜನಸಂಖ್ಯೆ ಬೇರೆ ದೇಶಗಳಲ್ಲಿ ಯಾವುದೇ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವುದಿಲ್ಲ. ಅಷ್ಟು ಹೆಚ್ಚಿನ ಜನರು ಇಲ್ಲಿ ಕೆಲಸ ಮಾಡುತ್ತಾರೆ. ಯಾಕೆಂದರೆ, ನಮ್ಮ ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.4 ಮಿಲಿಯನ್ ಅಂದರೆ, 14 ಲಕ್ಷಕ್ಕೂ ಹೆಚ್ಚು ಜನ ಕೆಲಸ ಮಾಡ್ತಾರೆ.
ಇದನ್ನೂ ಕೂಡ ಓದಿ : ಕಿಸಾನ್ ರೈತರಿಗೆ ಸಾಲಮನ್ನಾ ಯೋಜನೆ 2023 // Karnataka Farmer’s Loan Waiver Scheme 2023
ಇಡೀ ವಿಶ್ವದಲ್ಲೇ ಉದ್ದವಾದ ರೈಲ್ವೆ ಫ್ಲಾಟ್ ಫಾರ್ಮ್ ಇರುವುದು ನಮ್ಮ ಭಾರತದಲ್ಲಿ. ಇದು ಗೋರಖ್ ಪುರ್ ಜಂಕ್ಷನ್ ರೈಲ್ವೆ ಫ್ಲಾಟ್ ಫಾರ್ಮ್ ಆಗಿದ್ದು, ಇದರ ಉದ್ದ ಬರೋಬ್ಬರಿ 1.36 ಕಿಲೋ ಮೀಟರ್ ಗಳು ಅಂದರೆ, ಒಂದು ಕಿಲೋ ಮೀಟರ್ ಗಿಂತಲೂ ಉದ್ದವಾದ ಫ್ಲಾಟ್ ಫಾರ್ಮ್ ಇದಾಗಿದೆ. ನಮ್ಮ ಭಾರತದಲ್ಲಿ ಅತೀ ನಿಧಾನವಾಗಿ ಓಡಾಡುವ ರೈಲು ಅಂದ್ರೆ, ಅದು ಮೆಟಾಪುಲಾಯಮ್ ಊಟಿ-ನೀಲಗಿರಿ ಪ್ಯಾಸೆಂಜರ್ ರೈಲು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..