ಅಂತೆ-ಕಂತೆಗೆಲ್ಲಾ ಬಿತ್ತು ಬ್ರೇಕ್! : ‘ಕಾಂತಾರ’ ಸಿನಿಮಾದ ನಿಜವಾದ ಗಳಿಕೆ ಇದು.!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ’ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

‘ಕಾಂತಾರ’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಎಷ್ಟು ಅನ್ನೋದು ಈಗ ಬಯಲಾಗಿದೆ. ಕೇವಲ 16 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಚಿತ್ರ ಈಗ ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 305 ಕೋಟಿ ರೂ. ಗಳಷ್ಟು ಕಲೆಕ್ಷನ್ ಮಾಡಿದೆ.

WhatsApp Group Join Now
Telegram Group Join Now

ಹಿಂದಿ ಭಾಷೆಯಲ್ಲಿ ಸ್ವಲ್ಪ ತಡವಾಗಿ ರಿಲೀಸ್ ಆದರೂ 51.65 ಕೋಟಿ ರೂ. ಗಳಷ್ಟು ಬಾಚಿದೆಯಂತೆ. ಹಿಂದಿ ಭಾಷೆಗೆ ಡಬ್ ಆಗಿದ್ದ ಪರಭಾಷೆ ಚಿತ್ರವೊಂದು ಗಳಿಸಿದ ಕಲೆಕ್ಷನ್ ಪಟ್ಟಿಯಲ್ಲಿ ‘ಕಾಂತಾರ’ ಸಿನಿಮಾ ಇವಾಗ 7 ನೇ ಸ್ಥಾನದಲ್ಲಿದೆ. ಕನ್ನಡದಲ್ಲಿ ಮಾತ್ರ ‘ಕಾಂತಾರ’ ಚಿತ್ರ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾವೊಂದು ಅತ್ಯಂತ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವುದು ಹೇಗೆ ಎಂದು ನಮ್ಮ ಕನ್ನಡದ ‘ಕಾಂತಾರ’ ಸಿನಿಮಾ ತೋರಿಸಿಕೊಟ್ಟಿದೆ.

‘ಕಾಂತಾರ’ ಚಿತ್ರ ನನ್ನದೇ: ರಿಷಬ್ ಚಿತ್ರದ ಕುರಿತು ಯಶ್ ಪ್ರತಿಕ್ರಿಯೆ

WhatsApp Group Join Now
Telegram Group Join Now

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ `ಕಾಂತಾರ’ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಚಿತ್ರ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಹೀಗಿರುವಾಗ ಪ್ಯಾನ್ ಇಂಡಿಯಾ ಸ್ಟಾರ್ ಯಶ್, ʻಕಾಂತಾರʼ ಚಿತ್ರ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದ ಕುರಿತು ಮಾತನಾಡಿದ್ದಾರೆ.

ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿ, ಸೈ ಎನಿಸಿಕೊಂಡಿದ್ದಾರೆ. ದೇಶಾದ್ಯಂತ ಮೂಲೆ ಮೂಲೆಯಲ್ಲೂ ‘ಕಾಂತಾರ’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗ ಪ್ಯಾನ್ ಇಂಡಿಯಾ ಸ್ಟಾರ್ ನಟ ‘ಯಶ್’, ಈಗ `ಕಾಂತಾರ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ‘ಯಶ್’ ನೀಡಿದ ಸಂದರ್ಶನದಲ್ಲಿ `ಕಾಂತಾರ’ ಚಿತ್ರ ನನ್ನದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

WhatsApp Group Join Now
Telegram Group Join Now

ಕಾಂತಾರ’ ಚಿತ್ರ ನನ್ನದೇ. ಕಾಂತಾರ ಕರ್ನಾಟಕದ ಸಿನಿಮಾ. ನಮ್ಮ ಚಿತ್ರಕ್ಕೆ ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ನಟ ‘ಯಶ್’ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. `ಗರುಡ ಗಮನ ವೃಷಭ ವಾಹನ’, `ಚಾರ್ಲಿ 777′ ಚಿತ್ರಗಳು ಗಡಿ ಮೀರಿ ಒಳ್ಳೆಯ ರೀಚ್ ಪಡೆದಿದೆ. ಇವಾಗ ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದು ನಟ ಯಶ್ ಮಾತನಾಡಿದ್ದಾರೆ. ಇನ್ನೂ ನಾನು ಪ್ಯಾನ್ ಇಂಡಿಯಾ ನಟನಾಗಿದ್ದರೂ, ನನಗೆ ಕನ್ನಡವೇ ಮೊದಲು ಎಂದು ನಟ ಯಶ್ ಈ ವೇಳೆ ಹೇಳಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply