ರೈತರಿಗೆ ಸಿಎಂ ಗುಡ್ ನ್ಯೂಸ್ – ಬಾವಿ ಅಥವಾ ಬೋರ್ವೆಲ್ ಇದ್ದವರಿಗೆ – 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.! – Sprinkler

Sprinkler : ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಭರ್ಜರಿ ಬಂಪರ್ ಗಿಫ್ಟ್. ಕೇಂದ್ರ ಹಾಗು ರಾಜ್ಯ ಸರ್ಕಾರವು ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನ ಈಗಾಗಲೇ ಜಾರಿಗೊಳಿಸಿದೆ. ಅದರಲ್ಲೂ ಮುಖ್ಯವಾಗಿ ಪ್ರಮುಖವಾಗಿ ನೀರಾವರಿಗಾಗಿ ಸಾಕಷ್ಟು ಅನೇಕ ಯೋಜನೆಗಳನ್ನ ಜಾರಿಗೆ ತರುತ್ತೇವೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಇಲಾಖೆಗೆ ಮಹತ್ವವನ್ನು ನೀಡಿದ್ದು, ರೈತರ ಜಮೀನುಗಳಿಗೆ ನೀರಾವರಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ.

ಇದನ್ನೂ ಕೂಡ ಓದಿ : Pension Scheme : 60 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಯರಿಗೆ ಬಿಗ್ ಶಾಕ್ – ಹೊಸ ರೂಲ್ಸ್ ಇಂತವರಿಗೆ ಸಿಗಲ್ಲ ಹಣ – ಈ ದಾಖಲೆ ಕಡ್ಡಾಯ..!

ಈಗ ಮತ್ತೆ ರಾಜ್ಯದ ಎಲ್ಲ ರೈತರಿಗೆ, ತಮ್ಮ ಜಮೀನುಗಳಿಗೆ ಸರಕಾರದಿಂದ ಉಚಿತವಾಗಿ ಸ್ಪ್ರಿಂಕ್ಲರ್ ಸೆಟ್ ಗಳನ್ನ ಪಡೆದುಕೊಳ್ಳಲು ಮತ್ತೊಮ್ಮೆ ಸುವರ್ಣ ಅವಕಾಶವನ್ನು ನೀಡಲಾಗಿದ್ದು, ಹೆಚ್ಚುವರಿಯಾಗಿ ನೀಡಲು ದೊಡ್ಡ ಕ್ರಮವನ್ನ ತೆಗೆದುಕೊಂಡಿದ್ದಾರೆ. ರೈತರು ಆರ್ಥಿಕವಾಗಿ ಸದೃಢರಾಗಬೇಕಾದರೆ ಕಡ್ಡಾಯವಾಗಿ ಅವರ ಜಮೀನಿನಲ್ಲಿ ನೀರಾವರಿ ಸೌಲಭ್ಯ ಇರಲೇಬೇಕು. ಅಂದಾಗ ಮಾತ್ರ ಎಲ್ಲ ಬೆಳೆಗಳು ಸಮೃದ್ಧವಾಗಿ ಬೆಳೆದು ರೈತರು ಆರ್ಥಿಕವಾಗಿ ಗಟ್ಟಿಯಾಗಿ ನಿಲ್ತಾರೆ. ಈಗ ಮತ್ತೊಮ್ಮೆ ರೈತರಿಗೆ ತಮ್ಮ ಜಮೀನುಗಳಲ್ಲಿ ಉಚಿತವಾಗಿ ಸ್ಪ್ರಿಂಕ್ಲರ್ ಅದನ್ನ ಅಳವಡಿಸಿಕೊಳ್ಳೋಕೆ ಹೊಸ ಅರ್ಜಿಯನ್ನ ಕರೆಯಲಾಗಿದೆ.

ಇದನ್ನೂ ಕೂಡ ಓದಿ : Loan Waiver : ರೈತರ ಸಾಲ ಮನ್ನಾ ಘೋಷಣೆ ಸಿಎಂ ಸಿದ್ದರಾಮಯ್ಯ – ಸುಸ್ತಿ ಸಾಲಗಳು ಮತ್ತು ಬಡ್ಡಿ ಮನ್ನಾ.!

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಅಟಲ್ ಭೂಜಲ್ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಅಡಿ 2023-24 ನೇ ಸಾಲಿಗೆ ಅರ್ಹ ರೈತ ಫಲಾನುಭವಿಗಳಿಗೆ ಈವರೆಗೆ ಒಂದು ಹೆಕ್ಟೇರ್‌ಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಯೋಜನೆಯ ಮಾರ್ಗಸೂಚಿ ಅನ್ವಯ ೨ ಹೆಕ್ಟೇರ್ ಗೂ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಒಂದು ಹೆಕ್ಟೇರ್ ಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ಪಡೆದ ಅರ್ಹ ಫಲಾನುಭವಿಗಳು ಹೆಚ್ಚುವರಿಯಾಗಿ ಇನ್ನು ಒಂದು ಹೆಕ್ಟೇರ್ ವರೆಗೂ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನ ಪಡೆಯುವುದಕ್ಕೆ ಅವಕಾಶವಿರುತ್ತದೆ. ಆದ್ದರಿಂದ ಅರ್ಹ ಫಲಾನುಭವಿ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ನಿರ್ದೇಶಕರ ಕಚೇರಿಯನ್ನ ಸಂಪರ್ಕಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply