ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿರುವ ಸಮಂತಾ, ರಕ್ಷಿತ್ ಶೆಟ್ಟಿ ಅವರ ನೇತೃತ್ವದಲ್ಲಿ! ಯಾವ ಚಿತ್ರದ ಮುಖಾಂತರ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ತಮ್ಮ ವೈಯುಕ್ತಿಕ ವಿಚಾರದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಸದ್ದು ಮಾಡುವ ಸೆಲೆಬ್ರಿಟಿಗಳ ಪೈಕಿ ಈವಾಗ ‘ಸಮಂತಾ’ ಅವರು ಮೊದಲ ಸ್ಥಾನದಲ್ಲಿ ಬಂದು ನಿಲ್ತಾರೆ. ಸಾಕಷ್ಟು ವಿಚಾರಗಳಲ್ಲಿ ‘ಸಮಂತಾ’ ಅವರ ಹೆಸರು ಕೇಳಿ ಬಂದಿದೆ. ಅದರಲ್ಲೂ ತಮ್ಮ ವಿಚ್ಛೇದನದ ಬಳಿಕ ಅವರಲ್ಲಿ ಆಗುತ್ತಿರುವ ಬದಲಾವಣೆ ಇದೆಲ್ಲದಕ್ಕೂ ದಾರಿ ಮಾಡಿಕೊಟ್ಟಿದೆ ಎಂದ್ರೆ ತಪ್ಪಾಗಲ್ಲಾ. ‘ಸಮಂತಾ’ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಹಾಗೂ ಸಹ ಕಲಾವಿದನ ಜೊತೆಗೆ 2 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ ತಮ್ಮಲ್ಲಿ ಮೂಡಿದ ವಿರಸವನ್ನು ಬಗೆಹರಿಸಿಕೊಳ್ಳಲು ಆಗದೇ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಆದ್ರೆ ಈ ಜೋಡಿಯ ವಿಚ್ಛೇದನಕ್ಕೆ ಕಾರಣ ಏನೆಂಬುದು ಇದುವರೆಗೂ ತಿಳಿದುಬಂದಿಲ್ಲ.

ಹೀಗಾಗಿ ಸೂಕ್ತ ಕಾರಣ ತಿಳಿಯದಿರುವ ಕಾರಣ ನಾನಾ ತರಹದ ಸುದ್ದಿಗಳು ಜಗತ್ತಿನ ಸುತ್ತಾ ಸುತ್ತುತ್ತಿದೆ. ಈ ಹಿಂದೆ ‘ಸಮಂತಾ’ ಬೇರೊಬ್ಬರ ಜೊತೆ ಸಂಬಂಧ ಇದೆ. ವಿಚ್ಚೇನದನದ ನಂತರ ತಮ್ಮ ಎರಡನೇ ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ, ಎರಡನೇ ಮದುವೆ ಇಷ್ಟವಿಲ್ಲದ ಕಾರಣದಿಂದ ‘ಸಮಂತಾ’ ಮಕ್ಕಳಾಗದಂತೆ ಚಿಕಿತ್ಸೆ ಪಡೆದಿದ್ದಾರೆ, ಆ ನಂತರ ‘ಸಮಂತಾ’ ಈಗಾಗಲೇ ಎರಡನೇ ಮದುವೆಯಾಗಿದ್ದು ಹೊಸದಾಗಿ ಖರೀದಿಸಿದಂತಹ ವಿಲ್ಲಾದಲ್ಲಿ ಇರಲಿದ್ದಾರೆ. ಹೀಗೆ ನಾನಾ ತರಹದ ವಿಚಾರಗಳಲ್ಲಿ ‘ಸಮಂತಾ’ ಸುದ್ದಿಯಾಗುತ್ತಿದ್ದಾರೆ. ಆದರೆ ಈ ಎಲ್ಲಾ ಸುದ್ದಿಗಳಿಗೂ ರೆಕ್ಕೆ ಪುಕ್ಕಾ ಯಾವುದು ಇಲ್ಲದಿದ್ದರೂ ವೈರಲ್ ಆಗೋದು ತಪ್ಪುತ್ತಿಲ್ಲ. ಇತ್ತೀಚೆಗೆ ಸುದ್ದಿ ಪಡೆದದ್ದು ಎಂದ್ರೆ ‘ಸಮಂತಾ’ ಅವರು ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ನಟಿ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಈ ಸುದ್ದಿಗೆ ಪುಷ್ಟಿ ಕೊಡುವಂತೆ ಕೆಲ ಸನ್ನಿವೇಶಗಳು ಕೂಡ ಇಂತಹ ಸುದ್ದಿ ನಂಬಿಸುವಂತೆ ಮಾಡುತ್ತಿದೆ.

WhatsApp Group Join Now
Telegram Group Join Now

ಆದ್ರೆ ‘ಸಮಂತಾ’ ಅವರು ತಮ್ಮ ಮ್ಯಾನೇಜರ್ ಅವರಿಂದ ಅವರು ಆರೋಗ್ಯವಾಗಿ ಇದ್ದಾರೆ ಎಂಬ ಮಾಹಿತಿ ತಿಳಿಸಿದ್ದರು. ಈಗಿನವರೆಗೂ ‘ಸಮಂತಾ’  ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿಲ್ಲದೆ ಇರೋದ್ರಿಂದ ಎಲ್ಲರಲ್ಲೂ ಭಯ ಮೂಡಿಸಿದೆ. ಈ ನಟಿ ನಟಿಸಿದ “ಯಶೋಧ” ಚಿತ್ರ ಕೂಡ ಕೆಲ ಕಾರಣಗಳಿಂದ ಮುಂದಕ್ಕೆ ಹೋಗಿತ್ತು, ಆದರೆ ಈ ಸಿನಿಮಾ ಮುಂದಿನ ತಿಂಗಳು ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಆದರೆ ಈ ಸಿನಿಮಾದ ಪ್ರಚಾರ ಇನ್ನು ಶುರುವಾಗಿಲ್ಲ. ‘ಸಮಂತಾ’ ಅವರು ಕೂಡ ಈ ವಿಚಾರವಾಗಿ ಯಾವುದರಲ್ಲೂ ತೊಡಗಿಸಿಕೊಂಡಿಲ್ಲ. ಆದರೆ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು. ಮೊದಲ ಬಾರಿಗೆ ‘ಸಮಂತಾ’ ಅವರ ಸಿನಿಮಾ ತೆಲಗು, ತಮಿಳು, ಹಿಂದಿ, ಮಲಯಾಳಂ ಅಲ್ಲದೇ ಕನ್ನಡದಲ್ಲೂ ಕೂಡ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಬಿಡುಗಡೆ ಪಡೆಯುವ ‘ಯಶೋಧ’ ಜವಾಬ್ದಾರಿಯನ್ನು ಸಿಂಪಲ್ ಸ್ಟಾರ್ “ರಕ್ಷಿತ್ ಶೆಟ್ಟಿ” ವಹಿಸಿಕೊಂಡಿದ್ದಾರೆ. ಇದರಿಂದ ಕನ್ನಡಿಗರು ಕೂಡ ಬಹಳ ಖುಷಿಯಾಗಿದ್ದು, ಕನ್ನಡದಲ್ಲಿ ಬಿಡುಗಡೆ ಪಡೆಯುವ ‘ಯಶೋಧ’ ವೀಕ್ಷಿಸಲು ಎಲ್ಲರೂ ಉತ್ಸುಕರಾಗಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now

Leave a Reply