‘ದರ್ಶನ್’ ಪುನೀತ ಪರ್ವ ಕಾರ್ಯಕ್ರಮಕ್ಕೆ ಬರದಿರಲು ಕಾರಣ ಬಿಚ್ಚಿಟ್ಟ ಅಪ್ಪು ಪತ್ನಿ ಅಶ್ವಿನಿ ಮೇಡಂ ! ಎಲ್ಲರೂ ಶಾಕ್.!

ಕಳೆದ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆದ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸುಮಾರು ಮೂವತ್ತರಿಂದ ನಲವತ್ತು ಸಾವಿರ ಅಭಿಮಾನಿಗಳು ಹಾಜರಿದ್ದರು. ಇದರ ಜೊತೆಗೆ ಚೆನ್ನೈ, ಹೈದರಾಬಾದ್, ಸೇರಿದಂತೆ ವಿವಿಧ ರಾಜ್ಯದಿಂದ ಸ್ಟಾರ್ ನಟರು ಭಾಗಿಯಾಗಿದ್ದರು. ‘ಪುನೀತ ಪರ್ವಕ್ಕೆ’ ಭಾಗಿಯಾಗಿ ಪುನೀತರಾಗಲು ಸ್ವಂತ ಖರ್ಚಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು ಬೆಂಗಳೂರಿನ ಅರಮನೆ ಮೈದಾನಕ್ಕೆ ಬಂದಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಸಚಿವರು ಕೂಡ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ತಮಿಳಿನ ಖ್ಯಾತ ನಟ ಸೂರ್ಯ, ಬಾಹುಬಲಿ ಖ್ಯಾತಿಯ ತೆಲುಗಿನ ರಾಣ ದಗ್ಗುಬಾಟಿ, ಬಹುಭಾಷ ನಟ ಪ್ರಕಾಶ್ ರಾಜ್, ಅಖಿಲ್ ಅಕ್ಕಿನೇನಿ, ಸಾಯಿ ಕುಮಾರ್, ಸಿದ್ದಾರ್ಥ್, ಹೀಗೆ ಸಾಕಷ್ಟು ಜನರು ಭಾಗಿಯಾಗಿದ್ದರು. ಅರ್ಥಪೂರ್ಣವಾಗಿ ಜರುಗಿದ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪುನೀತ್ ಕುರಿತು ವಿಶೇಷ ವಿಡಿಯೋ ಸಂದೇಶ ರವಾನಿಸಿದ್ದರು. ಆದ್ರೆ, ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದರ್ಶನ್ ಕಾರ್ಯಕ್ರಮಕ್ಕೆ ಬಾರದೇ ಇರಲು ಕಾರಣವೇನು ಎಂದು ತಿಳಿಸಿದ್ದಾರೆ.

‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು ಎಂದೇ ಗುರುತಿಸಿಕೊಳ್ಳುವ ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರ ಸುಳಿವೂ ಇರಲಿಲ್ಲ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ರಾಜ್ ಕುಟುಂಬಸ್ಥರು ಆಹ್ವಾನ ನೀಡಿದ್ದರೂ ಕನ್ನಡ ಚಿತ್ರರಂಗದ ಸುದೀಪ್, ದರ್ಶನ್, ಜಗ್ಗೇಶ್ ಮುಂತಾದವರು ಗೈರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿ ರವಿಚಂದ್ರನ್, ರಮೇಶ್ ಅರವಿಂದ್, ಯಶ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ಸಾಧು ಕೋಕಿಲ, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ, ಸತೀಶ್ ನಿನಾಸಂ, ನೆನಪಿರಲಿ ಪ್ರೇಮ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ರಮ್ಯ, ಸುಮಲತಾ ಅಂಬರೀಶ್, ಸುಧಾರಾಣಿ, ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಅಮೃತಾ ಅಯ್ಯಂಗಾ‌ರ್ ಸೇರಿದಂತೆ ಹಲವು ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಕ್ಟೋಬರ್ 18 ರಂದು ಸುದೀಪ್ ಅವರ ವಿವಾಹ ವಾರ್ಷಿಕೋತ್ಸವ ಇದ್ದಿದ್ದರಿಂದ ಕುಟುಂಬದ ಜೊತೆ ಅವರು ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆ, ಹಾಗಾಗಿ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರಲಾಗಿಲ್ಲ ಎಂದು ಅಭಿಮಾನಿಗಳು ಸಮಜಾಯಿಷಿ ನೀಡಿದ್ದಾರೆ.

ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಯಾಕೆ ಬಂದಿರಲಿಲ್ಲ ಎನ್ನುವುದರ ಕುರಿತು ಅಶ್ವಿನಿ ಮೇಡಂ ತಿಳಿಸಿದ್ದಾರೆ. ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಎಲ್ಲಾ ಅತಿಥಿಗಳನ್ನ ಸ್ವತಃ ಅಶ್ವಿನಿ ಮೇಡಂ ಅವರೇ ಖುದ್ದಾಗಿ ಕರೆ ಮಾಡಿ ಆಹ್ವಾನಿಸಿದರು. ಅದೂ ಅಲ್ಲದೆ ಮನೆಯವರಿಂದಲೇ ದರ್ಶನ್ ಮನೆಗೆ ಆಹ್ವಾನ ಪತ್ರಿಕೆ ಕೂಡ ಕಳುಹಿಸಿ ಕೊಡಲಾಗಿತ್ತು. ಹೀಗಿದ್ದರೂ ‘ದರ್ಶನ್’ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಈ ಕಾಂಟ್ರವರ್ಸಿ ಬಗ್ಗೆ ಮಾತನಾಡಿರುವ ಅಶ್ವಿನಿ ಮೇಡಂ, ತಾವು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಅವರು ಕಾರ್ಯಕ್ರಮಕ್ಕೆ ಮೊದಲೇ ಕರೆ ಮಾಡಿ ತಿಳಿಸಿದ್ದರು. ಈ ಮೊದಲೇ ಶೂಟಿಂಗ್ ಡೇಟ್ ಫಿಕ್ಸ್ ಆಗಿದ್ದರಿಂದ ಶೂಟಿಂಗ್ ಕ್ಯಾನ್ಸಲ್ ಮಾಡಲಾಗಲಿಲ್ಲ, ತಮ್ಮನ್ನೇ ನಂಬಿಕೊಂಡು ನಿರ್ಮಾಪಕರು ಬಂಡವಾಳ ಹಾಕಿರುತ್ತಾರೆ ಎಂದು ದರ್ಶನ್ ಹೇಳಿದ್ದಾರೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರಲಾಗಿಲ್ಲ ತಿಳಿದು ಬಂದಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply