ಚೇತನ್ ಹೇಳಿಕೆಗೆಲ್ಲಾ ಯಾಕೆ ಮಹತ್ವ ಕೊಡ್ತೀರಾ.? ದೈವಾರಾಧನೆ ನಮ್ಮ ಸಂಪ್ರದಾಯ ಎಂದ ರಿಯಲ್ ಸ್ಟಾರ್ ಉಪೇಂದ್ರ

ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎನ್ನುವ ಹೇಳಿಕೆ ಕೊಟ್ಟ ನಟ ಚೇತನ್ ಬಗ್ಗೆ ರಿಯಲ್ ಸ್ಟಾರ್ ಉಪ್ಪಿ ಪ್ರತಿಕ್ರಿಯಿಸಿದ್ದಾರೆ.

ಚೇತನ್ ನಂತಹವರ ಹೇಳಿಕೆಗೆಲ್ಲಾ ಹೆಚ್ಚು ಮಹತ್ವ ಕೊಡಬಾರದು. ದೈವಾರಾಧನೆ ಎನ್ನೋದೆಲ್ಲಾ ನಮ್ಮ ಸಂಪ್ರದಾಯ. ಸುಮ್ ಸುಮ್ನೇ ಅದರ ಮೂಲ ಅದು, ಇದು ಅಂತೆಲ್ಲಾ ವಿವಾದ ಸೃಷ್ಟಿಸಲು ಹೋಗಬಾರದು. ರಿಷಬ್ ಶೆಟ್ಟಿ ಸಾಕಷ್ಟು ರಿಸರ್ಚ್ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಾವೆಲ್ಲಾ ಎಂಜಾಯ್ ಮಾಡೋಣ ಅಂದಿದ್ದಾರೆ ಉಪೇಂದ್ರ.

ಅಷ್ಟೇ ಅಲ್ಲದೇ ದೈವಾರಾಧನೆ, ನಾಗಾರಾಧನೆ ಎಲ್ಲಾ ನಮ್ಮದೇ ಸಂಪ್ರದಾಯ. ನಮ್ಮ ತಂದೆ ಈಗಲೂ ಕೂಡ ವರ್ಷಕೊಮ್ಮೆ ನಾಗನಿಗೆ ಪೂಜೆ ಮಾಡ್ತಾರೆ. ನಂಬಿಕೆಗಳ ಬಗ್ಗೆ ಎಲ್ಲಾ ನಾವು ಮಾತನಾಡಲು ಹೋಗ್ಬಾರ್ದು ಎಂದಿದ್ದಾರೆ.

‘ಭೂತಕೋಲ’ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ – ಮತ್ತೆ ನಾಲಿಗೆ ಹರಿಬಿಟ್ಟ ನಟ ಚೇತನ್

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ’ ಚಿತ್ರ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವ ನಡುವೆಯೇ ಸಿನಿಮಾದಲ್ಲಿನ ದೈವಾರಾಧನೆ, ಭೂತಕೋಲ ವಿಚಾರವು ಸಾಕಷ್ಟು ಜನಪ್ರಿಯತೆ ಪಡೆಯುತ್ತಿವೆ. ಇದೀಗ ಇದೇ ವಿಚಾರವಾಗಿ ಭೂತಕೋಲದ ಬಗ್ಗೆ ನಟ ಅಹಿಂಸಾ ಚೇತನ್ ನೀಡಿರುವ ಹೇಳಿಕೆ ಹೊಸದೊಂದು ವಿವಾದಕ್ಕೆ ಕಾರಣವಾಗಿದೆ.

‘ಭೂತಕೋಲ’ ಇದು  ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ಅದು ಹಿಂದೂ ಧರ್ಮಕ್ಕಿಂತ ಹಿಂದಿನದ್ದು ಎಂದು ನಟ ಚೇತನ್ ತಿಳಿಸಿದ್ದಾರೆ. ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾದಲ್ಲಿ ಬರುವ ಭೂತಕೋಲ ಹಿಂದೂ ಸಂಸ್ಕ್ರತಿಗೆ ಸೇರಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆದ್ರೆ ಭೂತಕೋಲ ಹಿಂದೂ ಸಂಸ್ಕ್ರತಿಗೆ ಸೇರಿದ್ದಲ್ಲ ಎನ್ನುವ ವಾದವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅದೂ ಅಲ್ಲದೇ ತಮ್ಮ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆಯನ್ನು ನೀಡಿರುವ ನಟ ಚೇತನ್ ಅವರು, ‘ಕಾಂತಾರ’ ಕನ್ನಡ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಸಂತೋಷದ ವಿಚಾರ. ಆದ್ರೆ ಭೂತಕೋಲ ಇದು ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ಇದು ನಮ್ಮ ಪಂಬದ, ಎಂಬ ಪುಸ್ತಕದಲ್ಲಿ ಇದರ ಬಗ್ಗೆ ಮಾಹಿತಿ ಇದೆ. ನಮ್ಮ ಪಂಬದ, ನಲಿಕೆ, ಪರವರ ಇವು ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣ್ಯ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು, ಹಿಂದೂ ಸಂಸ್ಕೃತಿಯಲ್ಲಿ ಭೂತಕೋಲ ಬರುತ್ತದೆ ಎಂದು ಹೇಳುವುದು ತಪ್ಪು, ಭೂತಕೋಲ ಎನ್ನುವುದು ಪಂಬದ ಸಮುದಾಯದ ಆಚರಣೆ. ಭೂತಕೋಲದಲ್ಲಿ ಬ್ರಾಹ್ಮಣ್ಯ ಎನ್ನುವುದು ಇಲ್ಲ. ಬ್ರಾಹ್ಮಣ್ಯವನ್ನು ಆದಿವಾಸಿ ಸಂಸ್ಕೃತಿ ಎನ್ನಲಾಗದು. ಕೊರಗ ಸಮುದಾಯಕ್ಕೆ ಅವರದ್ದೇ ಆದ ಸಂಪ್ರದಾಯವಿದೆ. ‘ಕೊರಗಜ್ಜ’ ಆದಿವಾಸಿ ಸಂಸ್ಕೃತಿಗೆ ಸೇರಿದ್ದಾನೆ, ಹಾಗೇ ಭೂತಕೋಲ ಎನ್ನುವುದು ಪಂಬದ ಸಂಪ್ರದಾಯ ಹಿಂದೂ ಎಂಬ ಪದವನ್ನು ಯಾವ ರೀತಿ ಬಳಸುತ್ತೇವೆ ಎನ್ನೋದು ಮುಖ್ಯವೆಂದು ವಿವರಿಸಿದ್ದಾರೆ.

ಆಕರ್ಷಕ ಗಡ್ಡ ಬೆಳೆಸಲು ಹೀಗೆ ಮಾಡಿ – ಪ್ಯಾಚ್ ಪ್ಯಾಚ್ ಇರುವ ಗಡ್ಡವನ್ನು ಫಿಲ್ ಮಾಡಲು ಬೆಸ್ಟ್ ಮನೆಮದ್ದು

ಈಗಿನ ಹೊಸ ಟ್ರೆಂಡ್ ಅಂದರೆ ಸಖತ್ ಸ್ಟೈಲಿಷ್ ಗಡ್ಡ. ಬಹಳಷ್ಟು ಜನ ತಮಗೆ ಇಷ್ಟ ಅಂತ ಗಡ್ಡ ಬಿಡ್ತಾರೆ. ಕೆಲವರು ಹುಡುಗಿಯರಿಗೆ ಗಡ್ಡ ಬಿಟ್ಟಿರೋ ಹುಡುಗರು ಇಷ್ಟ ಆಗ್ತಾರೆ ಅಂತ ಗಡ್ಡ ಬಿಡ್ತಾರೆ. ನಿಜವಾಗಲೂ ಗಡ್ಡ ಫುಲ್ ಸಖತ್ತಾಗಿ ಬಂದರೆ ಚೆನ್ನಾಗಿ ಕಾಣಿಸುತ್ತಾರೆ.

ಕೆಲವರಿಗೆ ಗಡ್ಡ ಸರಿಯಾಗಿ ಬರುವುದಿಲ್ಲ. ಪ್ಯಾಚ್.. ಪ್ಯಾಚ್ ಆಗಿ ಬರುತ್ತೆ ಇದು ಅಸಹ್ಯವಾಗಿಸುತ್ತೆ. ಪದೇ ಪದೇ ಶೇವ್ ಮಾಡಿ ಗ್ಯಾಪ್ ಗ್ಯಾಪ್ ಇರುವ ಗಡ್ಡ ಫಿಲ್ ಆಗುತ್ತೆ ಅಂತ ಹೇಳ್ತಾರೆ, ಆದರೆ ಅದು 100% ಸುಳ್ಳು. ಈ ಸರಳ ಮನೆಮದ್ದಿನಿಂದ ಆಕರ್ಷಕ ಗಡ್ಡವನ್ನು ಹೇಗೆ ಬೆಳೆಸಬಹುದು ಎಂದು ನೋಡಿ ಟ್ರೈ ಮಾಡಿ.

ಕೇವಲ 2-3 ದಿನ ಟ್ರೈ ಮಾಡಿ ವರ್ಕ್ ಆಗ್ತಿಲ್ಲ ಅಂತ ಬೇಜಾರಾಗಬೇಡಿ. ಕನಿಷ್ಟ ಪಕ್ಷ ಒಂದು ತಿಂಗಳಾದ್ರು ಇದನ್ನು ಟ್ರೈ ಮಾಡಬೇಕು. ಕೊಟ್ಟಿರುವ ಎಲ್ಲ ಟಿಪ್ಸ್ ಫಾಲೋ ಮಾಡಿ.

ದಿನಾಲು ಪ್ಯಾಚ್ ಪ್ಯಾಚ್ ಆಗಿರೋ ಜಾಗದಲ್ಲಿ ಹರಳೆಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಮುಖಕ್ಕೆ ಮಾಡುವ ಮಸಾಜ್ ನಿಮ್ಮ ಮುಖದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತೆ ಇದು ಗಡ್ಡವನ್ನು ಸರಿಯಾಗಿ ಬೆಳೆಯಲು ಸಹಾಯ ಮಾಡುತ್ತೆ. ಈಗಾಗಲೇ ಬೆಳೆದಿರುವ ಗಡ್ಡವನ್ನು ಕಟ್ ಮಾಡಬೇಡಿ ಬೆಳೆಯಲು ಬಿಡಿ.

ಪ್ರತಿ ದಿನ ಈರುಳ್ಳಿ ರಸವನ್ನು ಪ್ಯಾಚ್ ಪ್ಯಾಚ್ ಆಗಿರೋ ಜಾಗದಲ್ಲಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಕನಿಷ್ಠ 30 ನಿಮಿಷ ಇರಲು ಬಿಡಿ. ಇದು 100% ಪ್ಯಾಚ್ ಪ್ಯಾಚ್ ಆಗಿರೋ ಗಡ್ಡವನ್ನು ಫಿಲ್ ಮಾಡಿ ಆಕರ್ಷಕ ಗಡ್ಡ ಬೆಳೆಯಲು ಸಹಕರಿಸುತ್ತೆ. ಇದು ಆಕರ್ಷಕ ಗಡ್ಡ ಬೆಳೆಸಲು ಬೆಸ್ಟ್ ಮನೆಮದ್ದು.

ನಿಮ್ಮ ಆಹಾರದಲ್ಲಿ ವಿಟಮಿನ್ ಎ, ಬಿ, ಸಿ, ಮತ್ತು ಇ ಯನ್ನು ಸೇರಿಸಿ, ಈ ವಿಟಮಿನ್ ಗಳು ಕೂದಲು ಬೆಳೆಯಲು ಬಾದಾಮಿ, ಮೊಟ್ಟೆಯನ್ನು ತಿನ್ನಿ. ಪ್ರೊಟೀನ್ ಹೆಚ್ಚಾಗಿರುವ ಆಹಾರ ಸೇವಿಸುವುದರಿಂದ ನಿಮ್ಮ ಗಡ್ಡವನ್ನು ಬೇಗ ಬೆಳೆಸಬಹುದು. ಬಾದಾಮಿ, ಮೊಟ್ಟೆಯನ್ನು ತಿನ್ನಿ. ಪ್ರೊಟೀನ್ ಹೆಚ್ಚಾಗಿರುವ ಆಹಾರ ಸೇವಿಸುವುದರಿಂದ ನಿಮ್ಮ ಗಡ್ಡವನ್ನು ಬೇಗ ಬೆಳೆಸಬಹುದು.

ದಿನಾಲು ಬಾಚಣಿಕೆಯಿಂದ ಕೋಂಬ್ ಮಾಡ್ತಾ ಇರಿ, ಇದರಿಂದ ಗಡ್ಡ ಬೆಳೆಯಲು ಸಹಕಾರಿ. ನಿದ್ದೆಯನ್ನು ಚೆನ್ನಾಗಿ ಮಾಡಿ ಇದು ಬಹಳ ಮುಖ್ಯ.

Leave a Reply