ರಮ್ಯಾರನ್ನು ವಾಪಾಸ್ ನಟನೆಗೆ ಕರೆತಂದ ರಾಜ್ ಬಿ ಶೆಟ್ಟಿ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ದಸರಾ ಹಬ್ಬದ ದಿನದಂದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ಧಿಯೊಂದನ್ನು ನೀಡಿದ್ದಾರೆ. ರಮ್ಯಾ ಅವರ ಸ್ವಂತ ಬ್ಯಾನರ್ ಆಪಲ್ಬಾಕ್ಸ್ ಸ್ಟುಡಿಯೊಸ್ ನ ಮೊದಲ ಸಿನಿಮಾದ ಹೆಸರು ಘೋಷಣೆಯಾಗಿದೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಹೆಸರಿಟ್ಟಿರುವ ಪೋಸ್ಟರವೊಂದನ್ನು ಎಲ್ಲರಿಗೂ ಶುಭವ ತರಲಿ ವಿಜಯ ದಶಮಿ ಎನ್ನುವ ಕ್ಯಾಪ್ಶನ್ ನೊಂದಿಗೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್ ಅವರ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ.

Whatsapp Group Join
Telegram channel Join

ಈ ಸಿನಿಮಾದ ಮುಖ್ಯಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಹಾಗೂ ರಮ್ಯಾ ಅವರು ಕಾಣಿಸಿಕೊಳ್ಳಲಿದ್ದಾರೆ. ಕಥೆ ಮತ್ತು ನಿರ್ದೇಶನವನ್ನು ರಾಜ್ ಬಿ ಶೆಟ್ಟಿ ಮಾಡುತ್ತಿದ್ದಾರೆ. ಅದರೊಂದಿಗೆ ರಾಜ್ ಬಿ ಶೆಟ್ಟಿಯವರ ಗರುಡ ಗಮನ ವೃಷಭ ವಾಹನ ಚಿತ್ರ ತಂಡವೇ ಇಲ್ಲಿ ಕೆಲಸ ಮಾಡಲಿದೆ ಎನ್ನುವಂತಹ ಮಾಹಿತಿ ಜಸ್ಟ್ ಕನ್ನಡ ವೆಬ್ಸೈಟ್ ಗೆ ಲಭ್ಯವಾಗಿದೆ. ಮಿಥುನ್ ಮುಕುಂದನ್ ಅವರ ಸಂಗೀತದೊಂದಿಗೆ ಪ್ರವೀಣ್ ಶ್ರೀಯಾನ್ ಅವರ ಸಾಹಿತ್ಯವಿದೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಶ್ರೀಘ್ರದಲ್ಲೇ ಮಾಹಿತಿ ಕೊಡ್ತೀನಿ ಅಂತ ತಿಳಿಸಿದ್ದಾರೆ.

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು

Whatsapp Group Join
Telegram channel Join

Leave a Reply