ಹತ್ತು ವರ್ಷಗಳ ಹಿಂದೆ ನಟಿ ಅಮೂಲ್ಯ ಮತ್ತು ವೈಷ್ಣವಿ ಹೀಗಿದ್ದರು

ಸ್ಯಾಂಡಲ್ ವುಡ್ ನ ಗೋಲ್ಡನ್ ಗರ್ಲ್ ಅಮೂಲ್ಯ ಸದ್ಯ ಮದುವೆಯಾಗಿ, ಅವಳಿ ಮಕ್ಕಳ ತಾಯಿಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮದುವೆ ನಂತರ ಅಮೂಲ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸದಾ ಒಂದಿಷ್ಟು ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ ಗೋಲ್ಡನ್ ಗರ್ಲ್.

ಅಂದ್ಹಾಗೆ ಅಮೂಲ್ಯ ಅವರ ಬೆಸ್ಟ್ ಫ್ರೆಂಡ್ ‘ಅಗ್ನಿಸಾಕ್ಷಿ’ ಸನ್ನಿಧಿ ಖ್ಯಾತಿಯ ನಟಿ ವೈಷ್ಣವಿ. ಇಬ್ಬರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದವರು. ಇವರ ಜೊತೆಗೆ ಇನ್ನಿಬ್ಬರು ಬೆಸ್ಟ್ ಫ್ರೆಂಡ್ಸ್ ಕೂಡ ಇದ್ದಾರೆ. ಈ ನಾಲ್ಕು ಜನ ಒಟ್ಟಿಗೆ ಓದಿದವರು. ಈ ನಾಲ್ವರು ಗೆಳೆತಿಯರು ಒಟ್ಟಿಗೆ ಇರುವ ಕಾಲೇಜು ದಿನಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಅಮೂಲ್ಯ.

ಅಂದ್ಹಾಗೆ ಇದು ಹದಿಮೂರು ವರ್ಷಗಳ ಹಿಂದಿನ ಫೋಟೋ.

ವೈಷ್ಣವಿ ಮತ್ತು ಅಮೂಲ್ಯ ಸೇರಿದಂತೆ ನಾಲ್ಕು ಜನ ಸ್ನೇಹಿತರು ಇರುವ ಈ ಹಳೆ ಫೋಟೋ ಹಾಗೆ, ಮತ್ತೆ ಈಗ ಈ ನಾಲ್ವರು ಒಟ್ಟಿಗೆ ಸೇರಿ ಫೋಟೋ ಕ್ಲಿಕ್ಕಿಸಿಕೊಂಡು ಅಪ್ ಲೋಡ್ ಮಾಡಿದ್ದಾರೆ. ಅಂದು ಕಾಲೇಜಿನಲ್ಲಿ ತೆಗಿಸಿಕೊಂಡಿರುವ ಫೋಟೋಗೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ ಈ ಫೋಟೋಗೆ ಒಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ.

2009 ರಿಂದ 2022 ವರೆಗೆ ನಮ್ಮ 10 ವರ್ಷದ ಗೆಳೆತನ ನಂಬಲಿಕ್ಕೆ ಆಗಲ್ಲ. ಈಗಲು ನಾವು ಅದೆ ಪ್ರೀತಿ ಮತ್ತು ಕಾಳಜಿಯಿಂದ ಭೇಟಿಯಾಗುತ್ತೇವೆ. ಇವರೆಲ್ಲ ನನ್ನ ಸೋಲ್ ಮೇಟ್. ಎಂದು ಅಮೂಲ್ಯ ಬರೆದುಕೊಂಡಿದ್ದಾರೆ”

ವೈಷ್ಣವಿ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದಾರೆ. ಅಮೂಲ್ಯ ಬೆಳ್ಳಿ ಪರದೆಯ ಮೇಲೆ ಮಿಂಚಿದವರು. ಇಬ್ಬರು ಸಹ ಬೆಸ್ಟ್ ಫ್ರೆಂಡ್ಸ್. ಈ ಗೆಳೆತಿಯರೆಲ್ಲ ಸೇರಿ ಆಗಾಗ ಪ್ರವಾಸಕ್ಕೆ ಹೋಗಿ ಮಸ್ತ್ ಎಂಜಾಯ್ ಮಾಡುತ್ತಾರೆ. ಉತ್ತಮವಾದ ಸ್ನೇಹಕ್ಕೆ ಎಂದು ಕೊನೆಯಿಲ್ಲ ಎನ್ನುವುದಕ್ಕೆ ಈ ಸ್ನೇಹಿತರೆ ಸಾಕ್ಷಿ.

Leave a Reply