ಬೇಕಾದಷ್ಟು ಪ್ರೀತಿ ಮಾಡಿ, ಆದರೆ ಸಲಿಂಗಿ ಮದುವೆ ಬೇಡ ಎಂದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್

ಸಲಿಂಗ ವಿವಾಹಗಳನ್ನು ಕಾನೂನುಬದ್ಧವಾಗಿ ಗುರುತಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಸಲಿಂಗಿ ವಿವಾಹಕ್ಕೆ ಕಾನೂನು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಅಗತ್ಯ ಕಾನೂನುಗಳನ್ನು ರೂಪಿಸುವ ಜವಾಬ್ದಾರಿಯನ್ನು ಸಂಸತ್ತಿನ ಮೇಲೆ ಹಾಕಿತು. ಹಾಗೂ ಸಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದಿರುವುದನ್ನು ವಿಶ್ವ ಹಿಂದೂ ಪರಿಷತ್ (ವಿಹೆಚ್ ಪಿ) ಸ್ವಾಗತಿಸಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿ ರೈತರ ಗಮನಕ್ಕೆ / ಕೇಂದ್ರ ಸರ್ಕಾರದಿಂದ ಹೊಸ ಬದಲಾವಣೆ ಜಾರಿಗೆ.!

ಇಂದು ಉಡುಪಿಯಲ್ಲಿ ಸುದ್ಧಿಗಾರರೊಂದಿಗೆ ಸಲಿಂಗಿ ವಿವಾಹದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುನ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು, ಸಲಿಂಗಿ ವಿವಾಹ ಸೃಷ್ಟಿಗೆ ವಿರುದ್ಧ ಎಂದಿದ್ದಾರೆ.ಸಲಿಂಗಿ ಮದುವೆಯನ್ನು ನಾನು ಒಪ್ಪಲ್ಲ. ಇದು ಅತ್ಯಂತ ಅಸಹ್ಯವಾದ ಪ್ರಕ್ರಿಯೆ, ಇದಕ್ಕೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ. ಸಲಿಂಗಿ ವಿವಾಹದ ವಿರುದ್ಧವಾಗಿ ಕೇಂದ್ರ ಸರ್ಕಾರ ವಾದವನ್ನು ಮಂಡಿಸಿದ್ದು, ಕೇಂದ್ರದ ನಿಲುವು ಸರಿಯಾಗಿದೆ. ಸೃಷ್ಟಿಯ ವಿರುದ್ಧ ಕ್ರಿಯೆಗೆ ಕಾನೂನು ಮುದ್ರೆ ಸರಿಯಲ್ಲ. ವಿವಾಹ ಎನ್ನುವುದು ಪವಿತ್ರವಾದ ಬಂಧನ, ಅದಕ್ಕೆ ಕಳಂಕ ತರುವುದು ಬೇಡ. ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ, ಆದರೆ ಸಲಿಂಗಿ ಮದುವೆ ಮಾತ್ರ ಬೇಡ ಎಂದರು.

Leave a Reply