ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 29-03-2018 | ದಿನ ಭವಿಷ್ಯ

ಮೇಷ ರಾಶಿ : ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಉಗ್ರ ಮನಸ್ಥಿತಿ ಹಾಗೂ ಆಕ್ರಮಣಕಾರಿ ಮಾತುಗಾರಿಕೆ ನಿಮ್ಮಲ್ಲಿರುತ್ತದೆ. ಅದನ್ನು ನಿಯಂತ್ರಿಸಿಕೊಳ್ಳಿ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. ವೃಷಭ ರಾಶಿ : ಮನಸ್ಸಿನಲ್ಲಿ ಹತಾಶೆಯ ಭಾವನೆ ತುಂಬಿರುತ್ತದೆ, ಇದರಿಂದ ಖಿನ್ನತೆ ಆವರಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಕಲಹ, ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಅಹಂನಿಂದ ಇತರರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಿ. ಮಿಥುನ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಪ್ರತಿ ಕಾರ್ಯವನ್ನೂ ದೃಢ ನಿಶ್ಚಯದಿಂದ ಮಾಡಲಿದ್ದೀರಿ. … Read more

ಸಾಗರಿಕಾಗೆ ಕ್ಲೀನ್ ಬೋಲ್ಡ್ ಆಗಿದ್ದ ಜಹೀರ್ ಮದುವೆಗೆ ಒಪ್ಪಿಸಿದ್ಹೇಗೆ? – ಕ್ರಿಕೆಟ್ ನ್ಯೂಸ್

  ಜಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಗೆ ವಿವಾಹ ಕೂಡ ಸಾಕಷ್ಟು ಸುದ್ದಿಯಾಗಿತ್ತು. ಇತ್ತೀಚೆಗಷ್ಟೆ ತಮ್ಮ ಲವ್ ಸ್ಟೋರಿ ಬಗ್ಗೆ ಸಾಗರಿಕಾ ಹಾಗೂ ಜಹೀರ್ ಹೇಳಿಕೊಂಡಿದ್ದಾರೆ. ಮೊದಲು ಲವ್ವಲ್ಲಿ ಬಿದ್ದವರು ಜಹೀರ್ ಖಾನ್, ತಾವೇ ಸರಿಯಾದ ಜೋಡಿ ಅನ್ನೋದನ್ನು ಸಾಗರಿಕಾಗೆ ಮನವರಿಕೆ ಮಾಡಲು ಸಾಕಷ್ಟು ಕಸರತ್ತು ಕೂಡ ಮಾಡಿದ್ದಾರಂತೆ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಜಹೀರ್ ಖಾನ್, ಸಾಗರಿಕಾಗೆ ಪ್ರಪೋಸ್ ಮಾಡಿದ ಬಳಿಕ ಜಾಲತಾಣಗಳಲ್ಲಿ ಇವರ ಪ್ರೀತಿ ವಿಷಯ ಜಗಜ್ಜಾಹೀರಾಗಿತ್ತು. ಇಬ್ಬರ ಕುಟುಂಬದಲ್ಲೂ ಸಮ್ಮತಿ … Read more

ಲಂಡನ್ ನಲ್ಲಿ 3 ನೇ ಮದುವೆಯಾದ ವಿಜಯ್ ಮಲ್ಯ…? – Kannada news

ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಸಾಲದ ದೊರೆ ವಿಜಯ್ ಮಲ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ. ಲಂಡನ್ ನಲ್ಲಿಯೇ ವಿಜಯ್ ಮಲ್ಯ 3 ನೇ ಮದುವೆಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ, ಮಾಜಿ ಗಗನಸಖಿ ಪಿಂಕಿ ಲಾಲ್ವಾನಿ ಅವರನ್ನು ಮಲ್ಯ ಮದುವೆಯಾಗಿದ್ದಾರೆ. ಮಲ್ಯ ಅವರ 2 ನೇ ಪತ್ನಿ ರೇಖಾ ಮಲ್ಯ ಕರ್ನಾಟಕದವರು. ಮಲ್ಯ ಅವರೀಗ ಪಿಂಕಿ ಲಾಲ್ವಾನಿ ಅವರನ್ನು ವರಿಸಿದ್ದಾರೆ. ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದ ಪಿಂಕಿ … Read more

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಸೆಲೂನ್ ಮುಂದೆ ಸಿಕ್ಕಿಬಿದ್ದ ನಟಿ!

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ಎಲಿ ಅವ್ರಾಮ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿಯಿದೆ. ಮಾರ್ಚ್ 5ರಂದು ಹಾರ್ದಿಕ್ ಪಾಂಡ್ಯರನ್ನು ಎಲಿ ತಮ್ಮ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದರು. ಈಗ ಮತ್ತೆ ಇಬ್ಬರೂ ಸಲೂನ್ ಒಂದರ ಹೊರಗೆ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ. ಬಾಂದ್ರಾದ ಸಲೂನ್ ಒಂದರ ಮುಂದೆ ಪಾಂಡ್ಯ ಹಾಗೂ ಎಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕ್ಯಾಮರಾ ನೋಡ್ತಿದ್ದಂತೆ ಎಲಿ ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಡಿಸೆಂಬರ್ … Read more

ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಹಾಸ್ಟೆಲ್ ವಾರ್ಡನ್, ಕಾರಣ ಗೊತ್ತಾ?

ಹಾಸ್ಟೆಲ್ ಕಾರಿಡಾರ್ ನಲ್ಲಿ ಬಳಸಿ ಬಿಸಾಡಿದ ಸ್ಯಾನಿಟರಿ ನ್ಯಾಪ್ಕಿನ್ ಪತ್ತೆಯಾಗಿದ್ದಕ್ಕೆ ಹಾಸ್ಟೆಲ್  ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಲಾಗಿದೆ. ಸಾಗರ್ ನಲ್ಲಿರೋ ಡಾ.ಎಚ್.ಎಸ್.ಗೌರ್ ಸೆಂಟ್ರಲ್ ಯೂನಿವರ್ಸಿಟಿ ಹಾಸ್ಟೆಲ್ ನಲ್ಲಿ ಈ ಕೃತ್ಯ ನಡೆದಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಕಾರಿಡಾರ್ ನಲ್ಲಿ ನ್ಯಾಪ್ಕಿನ್ ಎಸೆದವರು ಯಾರು ಅನ್ನೋದನ್ನು ಪತ್ತೆ ಮಾಡಲು ಮುಂದಾದ ವಾರ್ಡನ್, ಯಾರಿಗೆ ಋತುಸ್ರಾವ ಆಗಿದೆ ಅಂತಾ ಪರಿಶೀಲಿಸಲು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ್ದಾರೆ. ಸುಮಾರು 50 ವಿದ್ಯಾರ್ಥಿನಿಯರು ಈ … Read more

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 27-03-2018

ಮೇಷ ರಾಶಿ : ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗುತ್ತವೆ. ಸರ್ಕಾರದಿಂದ್ಲೂ ನೆರವು ದೊರೆಯುವ ಸಾಧ್ಯತೆ ಇದೆ. ವೃಷಭ ರಾಶಿ : ಇವತ್ತು ನಿಮಗೆ ಮಿಶ್ರ ಫಲವಿದೆ. ವ್ಯಾಪಾರಿಗಳು ಹೆಚ್ಚಿನ ಹಣ ಹೂಡಿಕೆ ಮಾಡಿ ಹೊಸ ಕಾರ್ಯ ಆರಂಭಿಸಲಿದ್ದಾರೆ. ಭವಿಷ್ಯಕ್ಕಾಗಿಯೂ ಆರ್ಥಿಕ ಯೋಜನೆಗಳನ್ನು ರೂಪಿಸಬಹುದು. ಮಿಥುನ ರಾಶಿ : ಕೋಪ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಹಾಗಾಗಿ ಅತ್ಯಂತ ಸಮಾಧಾನ ಚಿತ್ತದಿಂದಿರಿ. ಯಾವುದೇ ವ್ಯಕ್ತಿಯಿಂದ ನಿಮಗೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಿ. … Read more

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 26-03-2018 | Daily Astrology

ಮೇಷ ರಾಶಿ : ಇವತ್ತು ನಿಮ್ಮಲ್ಲಿ ತಾಜಾತನ ಮತ್ತು ಸ್ಪೂರ್ತಿಯ ಅಭಾವವಿರುತ್ತದೆ. ಅದರ ಜೊತೆಗೆ ಕೋಪ ಕೂಡ ಹೆಚ್ಚಾಗಿರುತ್ತದೆ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆಯಾಗಬಹುದು. ವೃಷಭ ರಾಶಿ : ಅಧಿಕ ಕೆಲಸದ ಒತ್ತಡ ಮತ್ತು ಊಟ ತಿಂಡಿ ಕಡೆಗೆ ಗಮನ ಹರಿಸದೇ ಇರುವುದರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು ಹಾಗೂ ನಿದ್ದೆಯ ಅಭಾವದಿಂದ ಆಯಾಸದ ಅನುಭವವಾಗುತ್ತದೆ. ಮಿಥುನ ರಾಶಿ : ಮೋಜು ಮಸ್ತಿ ಮತ್ತು ಮನರಂಜನೆಯ ಬಗ್ಗೆ ವಿಶೇಷ ಆಸಕ್ತಿ … Read more

ಟ್ರಾಫಿಕ್ ಪೊಲೀಸರ ಜಾಹೀರಾತಿನಲ್ಲೂ ಕಣ್ಸನ್ನೆ ಬೆಡಗಿ | ಪ್ರಿಯಾ ವಾರಿಯರ್

ದಿನೇ ದಿನೇ ಹೆಚ್ಚುತ್ತಿರುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಟ್ರಾಫಿಕ್ ಪೊಲೀಸರು ಹೊಸ ಹೊಸ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದೀಗ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ್ದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಪೋಸ್ಟರ್ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಿಯಾ ಫೋಟೋ ಹಾಕಿ, ಅದರ ಕೆಳಗಡೆ ‘ಕಣ್ಮುಚ್ಚಿ ತೆರೆಯುವುದರಲ್ಲಿ ಅಪಘಾತ ಸಂಭವಿಸಬಹುದು, ಹಾಗಾಗಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ’ ಅಂತಾ ಬರೆದಿದ್ದಾರೆ. ವಡೋದರಾದಲ್ಲಿ ಹಾಕಿರೋ ಟ್ರಾಫಿಕ್ ಪೊಲೀಸರ ಈ ಜಾಹೀರಾತು ವಾಹನ ಸವಾರರ ಗಮನ … Read more

ಎಚ್ಚರ.! ಮೂತ್ರ ನೊರೆ ನೊರೆಯಿಂದ ಕೂಡಿದ್ದರೆ.! | ಆರೋಗ್ಯ ಮಾಹಿತಿ

ಮೂತ್ರ ವಿಸರ್ಜನೆ ಮಾಡುವಾಗ ಅದರ ಬಣ್ಣ ಹಾಗೂ ವಾಸನೆಯ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಮೂತ್ರದ ಬಣ್ಣ ಸ್ವಚ್ಛ ನೀರಿನಂತೆ ಇದ್ದರೆ, ನಿಮ್ಮ ಆರೋಗ್ಯವೂ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಅದೇ ಮೂತ್ರದ ಬಣ್ಣ ಗಾಢ, ವಾಸನೆ ಮತ್ತು ಗುಳ್ಳೆಗಳಿಂದ ಕೂಡಿದ್ದರೆ, ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುವುದು. ಮೂತ್ರವಿಸರ್ಜನೆ ಮಾಡುವಾಗ ನಾವು ಹೆಚ್ಚು ಶಕ್ತಿಯನ್ನು ಬಳಸಿ ವಿಸರ್ಜನೆ ಮಾಡಿದರೆ ನೊರೆಗಳು ಉಂಟಾಗುವುದು ಸಹಜ. ಮೂತ್ರ ವಿಸರ್ಜನೆ ಡಿಟಜೆಂಟ್‍ಗಳ ಮೇಲೆ ಮಾಡಿದರೆ ಅಥವಾ ಹೆಚ್ಚು ಶಕ್ತಿ ಉಪಯೋಗಿಸಿ ವಿಸರ್ಜಿಸುವುದರಿಂದ … Read more

ಹೆಚ್ಚು ಮಾರ್ಕ್ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ.!

ಮುಂಬೈನಲ್ಲಿ ಪ್ರಾಧ್ಯಾಪಕನೊಬ್ಬನ ಹೇಯ ಕೃತ್ಯ ಬಹಿರಂಗವಾಗಿದೆ. ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಮುತ್ತು ನೀಡುವಂತೆ ಕೇಳಿದ್ದಾನೆ. ಪೊಲೀಸರು 35 ವರ್ಷದ ಪ್ರಾಧ್ಯಾಪಕನನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ನೀಡಬೇಕಾದ್ರೆ ಮುತ್ತು ಕೊಡು ಎಂದು ಪ್ರಾಧ್ಯಾಪಕ 17 ವರ್ಷದ ವಿದ್ಯಾರ್ಥಿನಿಗೆ ಕೇಳಿದ್ದ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಹೆಚ್ಚು ಅಂಕ ಬೇಕಾದಲ್ಲಿ ಕಿಸ್ ಕೊಡು ಎಂದಿದ್ದನಂತೆ. ಇದ್ರಿಂದ ವಿದ್ಯಾರ್ಥಿನಿ ಒತ್ತಡಕ್ಕೊಳಗಾಗಿದ್ದಳಂತೆ. ಮಗಳ ವರ್ತನೆ ನೋಡಿ ಆತಂಕಕ್ಕೊಳಗಾದ ಕುಟುಂಬಸ್ಥರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ … Read more