Drought Relief : ಬರ ಪರಿಹಾರ ಹಣ ಬಿಡುಗಡೆ – 2ನೇ ಕಂತಿನ ಹಣ ರೈತರ ಖಾತೆಗೆ – ಬರಪೀಡಿತ ಜಿಲ್ಲೆಗಳಿಗೆ ಗುಡ್ ನ್ಯೂಸ್.!

Drought Relief : ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರಗಾಲ ಉಂಟಾಗಿರುವ ಕಾರಣಕ್ಕಾಗಿ ಈಗಾಗಲೇ ಘೋಷಣೆ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್(NDRF) ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿವೆ ಹಾಗೂ ಇದೇ ರೀತಿಯಾಗಿ ನಮ್ಮ ಕರ್ನಾಟಕ ಸರ್ಕಾರದ ಎಸ್‌ಡಿಆರ್‌ಎಫ್(SDRF) ರಾಜ್ಯದಾದ್ಯಂತ ಸಮೀಕ್ಷೆ ಮಾಡಿ ವರದಿಯನ್ನು ಸಲ್ಲಿಸಿದೆ. ಇದರ ಪ್ರಕಾರ ಪ್ರತಿ ಹೆಕ್ಟೇರ್ ಭೂಮಿಗೆ ₹22,500 ಹಣ ರೈತರ ಖಾತೆಗಳಿಗೆ ನೀಡಬೇಕು ಎನ್ನುವುದು ವರದಿ ಸಲ್ಲಿಕೆ ಆಗಿವೆ.

ಈಗಾಗಲೇ ಕರ್ನಾಟಕ ಸರ್ಕಾರದಿಂದ ಮೊದಲನೆಯ ಕಂತಿನ ಹಣವನ್ನಾಗಿ ಕೇವಲ ₹2000 ಹಣ ಮಾತ್ರ ರೈತರ ಖಾತೆಗಳಿಗೆ ಜಮಾ ಆಗಿದೆ. ಇದೇ ರೀತಿಯಾಗಿ ಈಗ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ರಾಜ್ಯದಾದ್ಯಂತ ಇರುವ ಪರಪೀಡಿತ ಜಿಲ್ಲೆಗಳ ಮತ್ತು ತಾಲ್ಲೂಕುಗಳ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಮತ್ತೆ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದ್ದು, ಯಾವೆಲ್ಲ ರೈತರ ಖಾತೆಗಳಿಗೆ ಬರಗಾಲ ಪರಿಹಾರದ ಹಣ ಜಮಾ ಆಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಲು ಈ ಲೇಖನವನ್ನು ಕೊನೆವರೆಗೂ ನೋಡಿ.

ಇದನ್ನೂ ಕೂಡ ಓದಿ : ರೈತರಿಗೆ ಸಿಎಂ ಗುಡ್ ನ್ಯೂಸ್ – ಬಾವಿ ಅಥವಾ ಬೋರ್ವೆಲ್ ಇದ್ದವರಿಗೆ – 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.! – Sprinkler

Release of drought relief funds to farmers' accounts
Release of drought relief funds to farmers’ accounts

32 ಲಕ್ಷ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ

ರಾಜ್ಯ ಸರ್ಕಾರದಿಂದ 32 ಲಕ್ಷ ರೈತರಿಗೆ ₹575/- ಕೋಟಿ ರೂಪಾಯಿ ಹಣ ಜಮಾವಣೆ. ಬರ ಪರಿಹಾರ ನಿರೀಕ್ಷೆಯಲ್ಲಿದಂತಹ ರೈತರಿಗೆ ಸಿಗುವಂತೆ ಸರ್ಕಾರದಿಂದ 32 ಲಕ್ಷ ರೈತರಿಗೆ 575 ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತಹ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಾದ್ಯಂತ ಬರ ಪೀಡಿತ ಪ್ರದೇಶಗಳಲ್ಲಿ ಪ್ರತಿ ರೈತರಿಗೆ ತಲಾ ₹2000 ರೂಪಾಯಿಯಂತೆ 32 ಲಕ್ಷ ರೈತರಿಗೆ ಈವರೆಗೆ ₹575/- ಕೋಟಿ ರುಪಾಯಿ ಹಣವನ್ನು ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಕೂಡ ಓದಿ : LPG Gas Cylinder : ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸಿ!

ರಾಜ್ಯದಲ್ಲಿ ಈ ವರ್ಷ ಇತಿಹಾಸ ಕಾಣದ ಬರ ಎದುರಾಗಿದೆ. ಕೇಂದ್ರದಿಂದ ಬರ ಪರಿಹಾರ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಮೊದಲ ಕಂಟಿನ್ಯೂಬಳ್ಳಿ ರೈತರಿಗೆ ₹2000 ರೂಪಾಯಿ ನೀಡಲು ನಿರ್ಧರಿಸಿ ಈಗಾಗಲೇ 32 ಲಕ್ಷ ರೈತರಿಗೆ ಪರಿಹಾರದ ಹಣ ನೀಡಲಾಗಿದೆ. ಕೊಡಗಿನಲ್ಲಿಯೂ ಸಹ ೧೧,೦೦೦ ರೈತರಿಗೆ ೧.೫ ಕೋತಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ರೈತರ ಬರ ಪರಿಹಾರದ ಹಣ ದುರುಪಯೋಗ ತಡೆಗಟ್ಟಲು ಈ ಬಾರಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಫ್ರೂಟ್ಸ್ ತಂತ್ರಾಂಶದ ಮೂಲಕ ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ಪರಿಹಾರದ ಹಣವನ್ನ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾರದರ್ಶಕವಾಗಿ ಜಮಾ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply