Manaswini Scheme : ಗೃಹಲಕ್ಷ್ಮಿ ಮಹಿಳೆಯರಿಗೆ ಗುಡ್ ನ್ಯೂಸ್ | ಮನಸ್ವಿನಿ ಯೋಜನೆ ಪ್ರತಿ ತಿಂಗಳಿಗೆ 800 ರೂಪಾಯಿ | ಈಗಲೇ ಅರ್ಜಿ ಸಲ್ಲಿಸಿ!

Manaswini Scheme : ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ ಘೋಷಣೆ. ಮನಸ್ವಿನಿ ಯೋಜನೆ ಮೂಲಕ ಇನ್ನು ಮುಂದೆ ಪ್ರತಿ ತಿಂಗಳು 800 ರೂಪಾಯಿ ಹಣ ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಪರ್ ಗುಡ್ ನ್ಯೂಸ್ ನೀಡಲಾಗಿದ್ದು, ಈ ಯೋಜನೆ ಅಡಿಯಲ್ಲಿ ಇನ್ನು ಮುಂದೆ 800 ರೂಪಾಯಿ ಹಣ ದೊರೆಯುತ್ತದೆ. ಈ ಯೋಜನೆಯು ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ಮತ್ತು ಅರ್ಹ ಮಹಿಳೆಯರು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಮ್ಮ ಹತ್ತಿರದಲ್ಲಿರುವ ಗ್ರಾಮವನ್ನು ಕೇಂದ್ರದಲ್ಲಿ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಅಥವಾ ನಾಡ ಕಚೇರಿ ಅಥವಾ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನ ಖುದ್ದಾಗಿ ಮಹಿಳೆಯರು ಸಲ್ಲಿಸಬಹುದಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವು ಹೇಗೆ.? ಅಗತ್ಯವಾದ ದಾಖಲೆಗಳೇನು.? ಯಾವಾಗಿನಿಂದ ನಿಮ್ಮ ಖಾತೆಗಳಿಗೆ ಹಣ ಜಮಾ ಆಗುತ್ತೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರದಿಂದ ಮನಸ್ವಿನಿ ಯೋಜನೆ ವತಿಯಿಂದ 800 ರೂಪಾಯಿ ಪಿಂಚಣಿ ಸೌಲಭ್ಯವನ್ನ ನೀಡಲಾಗಿದೆ.

ಇದನ್ನೂ ಕೂಡ ಓದಿ : Drought Relief : ರೈತರಿಗೆ ಬರ ಪರಿಹಾರದ 2ನೇ ಕಂತಿನ ಹಣ ಬಿಡುಗಡೆ – ಇಂದು ಮಧ್ಯಾಹ್ನ 3 ಗಂಟೆಗೆ ರೈತರ ಖಾತೆಗಳಿಗೆ ಹಣ ಜಮಾ

ಮನಸ್ವಿನಿ ಯೋಜನೆಯು ಸರ್ಕಾರ ಜಾರಿಗೆ ತಂದಿರುವ ಒಂದು ಮಹತ್ವದ ಯೋಜನೆಯಾಗಿದೆ. ಈ ಯೋಜನೆಯು ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಮಾಸಿಕ ವೇತನ ನೀಡುವ ಯೋಜನೆಯಾಗಿದೆ. ಇದರಿಂದ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಜೀವನ ನಡೆಸಲು ಹಣಕಾಸಿನ ಸಹಾಯ ನೀಡುವಂತಹ ಯೋಜನೆ. ಬಡತನದಲ್ಲಿ ಇರುವಂತಹ ಮಹಿಳೆಯರಿಗೆ ಇದು ಸ್ವಲ್ಪ ಮಟ್ಟಿಗೆ ಆರ್ಥಿಕ ವ್ಯವಸ್ಥೆಯನ್ನು ಒದಗಿಸಿಕೊಡುತ್ತದೆ.ಹಾಗು ಅವರು ಉತ್ತಮ ಜೀವನ ನಡೆಸಲು ಸಹಾಯವಾಗುತ್ತದೆ.

ಈ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅವಿವಾಹಿತ ಮತ್ತು ವಿಚ್ಛೇದಿತ ಬಡ ಮಹಿಳೆಯರಿಗೆ ಪಿಂಚಣಿ ನೀಡುತ್ತದೆ. ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮನಸ್ವಿನಿ ಯೋಜನೆ ಜಾರಿಗೊಳಿಸಲಾಗಿದೆ.

ಇದನ್ನೂ ಕೂಡ ಓದಿ : Free Laptop Scheme : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಭಾಗ್ಯ.! ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ.?

ಅರ್ಹತೆಗಳೇನು.?

  • ಫಲಾನುಭವಿಯು 40 ರಿಂದ 60 ನಾಲ್ಕು ವರ್ಷದ ಒಳಗೆ ಇರಬೇಕು.
  • ವಾರ್ಷಿಕ ಆದಾಯವು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 35,000/- ಕಡಿಮೆ ಇರಬೇಕು.
  • ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ದೇವದಾಸಿ ವೇತನ ಅಥವಾ ಅಂಗವಿಕಲರ ವೇತನ ಅಥವಾ ಯಾವುದೇ ರೀತಿಯ ಮಾಸಾಶನವನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರುವ ವ್ಯಕ್ತಿಗಳು ಈ ಯೋಜನೆಯಲ್ಲಿ ಮಾಸಾಶನ ಪಡೆಯಲು ಅರ್ಹರಾಗಿರುವುದಿಲ್ಲ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು.?

  • ಬಿಪಿಎಲ್ ಪಡಿತರ ಚೀಟಿ
  • ಆದಾಯ ಪ್ರಮಾಣ ಪತ್ರ
  • ಚುನಾವಣಾ ಗುರುತಿನ ಚೀಟಿ
  • ವಿಳಾಸ ದೃಢೀಕರಣ ಪತ್ರ
  • ವಯಸ್ಸಿನ ಬಗ್ಗೆ ದೃಢೀಕರಣ ಪತ್ರ
  • ವಿವಾಹಿತ ವಿಚ್ಛೇದಿತರು, ವಿಚ್ಛೇದನದ ಸ್ವಯಂ ಘೋಷಿತ ಪ್ರಮಾಣ ಪತ್ರ,
  • ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು

ಇದನ್ನೂ ಕೂಡ ಓದಿ : Pan Card Updates : ನೀವು ಪಾನ್ ಕಾರ್ಡ್ ಹೊಂದಿದ್ದೀರಾ.? ಹೊಸ ನಿಯಮ ಜಾರಿಗೆ – ₹10,000/- ದಂಡ.!

ಆಧಾರ್ ಕಾರ್ಡ್ ಒಂದೇ ವ್ಯಕ್ತಿಯಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಇನ್ನು ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸಲ್ಲಿಕೆಯಾದ ಅರ್ಜಿಗಳನ್ನ ಅಟಲ್ ಜೀ ಜನಸ್ನೇಹಿ ಕೇಂದ್ರ ಅಥವಾ ನಾಡ ಕಚೇರಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಯು ಅರ್ಜಿದಾರರ ಹೆಸರು, ತಂದೆ ಅಥವಾ ಗಂಡನ ಹೆಸರು ವಿಳಾಸವನ್ನ ದಾಖಲಿಸಿಕೊಳ್ಳುತ್ತಾರೆ. ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಉಪ ತಹಶೀಲ್ದಾರರು ವಿಲೇವಾರಿ ಮಾಡಲಿದ್ದಾರೆ. ಅರ್ಜಿಯಲ್ಲಿ ದಾಖಲೆಗಳು ಸರಿಯಾಗಿಲ್ಲದಿದ್ದರೆ ಅರ್ಜಿಯನ್ನ ರದ್ದು ಮಾಡಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply