Loksabha Election 2024 : ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ 5 ಗ್ಯಾರಂಟಿ ಘೋಷಣೆ – ಮಹಿಳೆಯರಿಗೆ ಬಂಪರ್ ಗಿಫ್ಟ್

Loksabha Election 2024 : ಕೇಂದ್ರದಲ್ಲಿ ಲೋಕಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಹೂಡಿರುವ ತಂತ್ರಗಳನ್ನು ದೇಶದಾದ್ಯಂತ ಹೂಡಲು ಸಜ್ಜಾಗಿದೆ. ಆದರೆ ಕರ್ನಾಟಕದಲ್ಲಿ ನೀಡಿರುವ ಐದು ಗ್ಯಾರಂಟಿ ಯೋಜನೆಗಳಂತಹ ಯೋಜನೆಗಳನ್ನ ಇಡೀ ದೇಶಕ್ಕೆ ಮತ್ತೊಂದು ಐದು ಹೊಸ ಗ್ಯಾರಂಟಿ ಯೋಜನೆಗಳನ್ನ ನೀಡುವುದಕ್ಕೆ ಕಾಂಗ್ರೆಸ್ ತನ್ನ ಅಧಿಕೃತವಾಗಿ ಚುನಾವಣಾ ಪ್ರಣಾಳಿಕೆ ಜೊತೆಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಈಗಾಗಲೇ ನಮ್ಮ ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದು, ಈಗಾಗಲೇ ಕರ್ನಾಟಕದ ರಾಜ್ಯದ ವಿಧಾನಸಭಾ ಎಲೆಕ್ಷನ್ ನಲ್ಲಿ ಘೋಷಣೆ ಮಾಡಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಸಕ್ಸಸ್ ಕಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು, ಇದೇ ತಂತ್ರಜ್ಞಾನ ಲೋಕಸಭೆ ಚುನಾವಣೆಗೂ ಮುಂದುವರಿಸಿದೆ. ಆದರೆ, ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಗ್ಯಾರಂಟಿ ಯೋಜನೆಗಳು ಕರ್ನಾಟಕ ಗ್ಯಾರಂಟಿ ಯೋಜನೆಗಳಿಗಿಂತ ವಿಭಿನ್ನವಾಗಿದೆ.

ಇದನ್ನೂ ಕೂಡ ಓದಿ : Krushi Sinchayi Yojane : ಎಲ್ಲಾ ರೈತರಿಗೆ ಮೋದಿ ಮತ್ತೊಂದು ಬಂಪರ್ ಗಿಫ್…ಪಿಂಕ್ಲರ್, ಕೃಷಿ ಹೊಂಡ, ಪೈಪುಗಳು ರೈತರಿಗೆ ಉಚಿತ

ಮಹಿಳೆಯರಿಗಾಗಿ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಐದು ಗ್ಯಾರಂಟಿಗಳನ್ನ ಈಡೇರಿಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಯಲ್ಲಿ ಮೊದಲನೆಯದು ಮಹಾಲಕ್ಷ್ಮಿ ಯೋಜನೆ, ಎರಡನೇಯದು ಆಧಿ ಆಬಾದಿ, ಪೂರಾ ಹಕ್, ಮೂರನೇಯದು ಶಕ್ತಿ ಕಾ ಸಮ್ಮಾನ್, ನಾಲ್ಕನೇಯದು ಅಧಿಕಾರ ಮೈತ್ರಿ, ಐದನೇಯದು ಸಾವಿತ್ರಿಬಾಯಿ ಪುಲೆ ಹಾಸ್ಟೆಲ್.

ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಇಂದು ನಾರಿ ನ್ಯಾಯ ಗ್ಯಾರಂಟಿ ಘೋಷಿಸುತ್ತಿದೆ. ಇದರ ಅಡಿಯಲ್ಲಿ ಪಕ್ಷವು ದೇಶದಲ್ಲಿ ಮಹಿಳೆಯರಿಗಾಗಿ ಹೊಸ ಕಾರ್ಯಸೂಚಿಯನ್ನು ಹೊರಡಿಸಲಿದೆ. ನಾಳೆ ನ್ಯಾಯ ಗ್ಯಾರಂಟಿಯಲ್ಲಿ ಕಾಂಗ್ರೆಸ್ ಐದು ಘೋಷಣೆಗಳನ್ನ ಮಾಡ್ತಾ ಇದೆ.

ಇದನ್ನೂ ಕೂಡ ಓದಿ : Govt New Scheme : ಮೋದಿಯ ಹೊಸ ಗ್ಯಾರಂಟಿ ಸ್ಕೀಮ್.! ಹೇಗೆ ಅರ್ಜಿ ಸಲ್ಲಿಸುವುದು.? ಇಲ್ಲಿದೆ ಡೀಟೇಲ್ಸ್

1) ಮಹಾಲಕ್ಷ್ಮಿ ಗ್ಯಾರಂಟಿ :- ಇದರ ಅಡಿಯಲ್ಲಿ ಪ್ರತಿ ಬಡ ಕುಟುಂಬದಿಂದ ತಲಾ ಒಬ್ಬ ಮಹಿಳೆಗೆ ವರ್ಷಕ್ಕೆ 1,00,000 ರೂಪಾಯಿ.

2) ಆಧಿ ಅಬಾದಿ, ಪೂರಾ ಹಕ್ :- ಇದರ ಅಡಿಯಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರು ಹಕ್ಕುಗಳನ್ನು ಹೊಂದಿರುತ್ತಾರೆ.

3) ಶಕ್ತಿ ಕಾ ಸಮ್ಮಾನ್ :- ಇದರ ಅಡಿಯಲ್ಲಿ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರಿಗೆ ಮಾಸಿಕ ಆದಾಯಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನ ದ್ವಿಗುಣಗೊಳಿಸಲಾಗುವುದು.

4) ಅಧಿಕಾರ ಮೈತ್ರಿ :- ಇದರ ಅಡಿಯಲ್ಲಿ ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಸಹಾಯ ಮಾಡಲು. ಪ್ರತಿ ಪಂಚಾಯತ್ ನಲ್ಲಿ ಒಬ್ಬ ಅರೆ ನ್ಯಾಯಾಂಗ ಅಧಿಕಾರಿಯನ್ನ ನೇಮಿಸಲಾಗುವುದು.

5) ಸಾವಿತ್ರಿಬಾಯಿ ಪುಲೆ ಹಾಸ್ಟೆಲ್ :- ಭಾರತ ಸರ್ಕಾರವು ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ಕನಿಷ್ಠ ಒಂದು ಹಾಸ್ಟೆಲ್‌ನಲ್ಲಿ ನಿರ್ಮಿಸುತ್ತದೆ. ಈ ಹಾಸ್ಪಿಟಲ್ಗಳ ಸಂಖ್ಯೆಯನ್ನ ದೇಶದಾದ್ಯಂತ ದ್ವಿಗುಣಗೊಳಿಸಲಾಗುವುದು ಎಂದು ಘೋಷಿಸಿದ್ದರು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply