‘ಪುಷ್ಪಾ’ ಅನ್ನು ಹೊಡೆದುರುಳಿಸಿದ ರಿಷಬ್ ಶೆಟ್ಟಿಯ ‘ಕಾಂತಾರ’! ಖುಷಿಯಲ್ಲಿ ಕರುನಾಡು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿ 41 ದಿನ ಕಳೆದರೂ ಗಳಿಕೆಯ ಓಟ ಮುಂದೂವರೆಸಿದೆ. ವಿಶ್ವದಾದ್ಯಂತ 355/- ಕೋಟಿ ರುಪಾಯಿ ಗಳಿಕೆ ಮಾಡಿದ್ದು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿದೆಯಂತೆ. ದಕ್ಷಿಣದಲ್ಲಿ ಯಶಸ್ವಿ ಓಟವನ್ನ ಮುಂದುವರೆಸಿದ ನಂತರ ಬಾಲಿವುಡ್ ನಲ್ಲಿ ಬಿಡುಗಡೆ ಕಂಡ ‘ಕಾಂತಾರ’ ಸಿನಿಮಾ ಸಿಂಗಲ್ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಸಂಚಲನವನ್ನು ಸೃಷ್ಟಿಸಿದೆ. ಹಿಂದಿಗೆ ಡಬ್ ಆಗಿರುವ ‘ಕಾಂತಾರ’ ಚಿತ್ರ ಈ ವಾರಾಂತ್ಯಕ್ಕೆ 75/- ಕೋಟಿ ರೂಪಾಯಿ ಗಳಿಸುವಂತಹ ನಿರೀಕ್ಷೆ ಇದೆ. ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿತ್ತು.

‘ಕಾಂತಾರ’ ಸಿನಿಮಾದ ಕಥಾಹಂದರ ಹಾಗು ಅದ್ಭುತ ದೃಶ್ಯಗಳಿಗಾಗಿ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ‘ಕಾಂತಾರ’ ಸಿನಿಮಾದ ಗಳಿಕೆ 355/- ಕೋಟಿ ರೂ. ಇದರೊಂದಿಗೆ, ‘ಕಾಂತಾರ’ ಚಿತ್ರ ‘ಪುಷ್ಪ: ದಿ ರೈಸ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಕೂಡ ಮೀರಿಸಿ ಮುನ್ನುಗ್ಗುತ್ತಿದೆ.

‘ಪುಷ್ಪ: ದಿ ರೈಸ್’ (PushpaTheRise) – 350.3 ಕೋಟಿ. ‘ಕಾಂತಾರ’ KantaraMovie – 355.19 ಕೋಟಿ. ‘ಕಾಂತಾರ’ ಸಿನಿಮಾ ಬಿಡುಗಡೆಯಾದ ಮೂರನೇ ವಾರದ ನಂತರ ಹಿಂದಿ(ಬಾಲಿವುಡ್) ಮಾರುಕಟ್ಟೆಯಲ್ಲಿ 50/- ಕೋಟಿ ರೂಪಾಯಿಗಳನ್ನು ಗಳಿಸಿ KGF ಖ್ಯಾತಿಯ ನಟ ‘ಯಶ್’ ಅಭಿನಯದ ‘ಕೆಜಿಎಫ್: ಚಾಪ್ಟರ್ 1’ ರ ಜೀವಿತಾವಧಿಯ ಸಂಗ್ರಹವನ್ನು ಕೂಡ ದಾಟಿದೆ. ‘ಕಾಂತಾರ’ ಸಿನಿಮಾ ಕನ್ನಡ ಹಾಗೂ ಹಿಂದಿ ಆವೃತ್ತಿಯಲ್ಲಿ ಕ್ರಮವಾಗಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 14 ರಂದು ಬಿಡುಗಡೆಯಾಗಿತ್ತು. ‘ಕಾಂತಾರ’ ಸಿನಿಮಾವನ್ನು ‘ರಿಷಬ್ ಶೆಟ್ಟಿ’ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿರುವ ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಹಾಗೂ ಕಿ   ಶೋರ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply