ಕೊರಗಜ್ಜನ ಸನ್ನಿಧಿಯಲ್ಲಿ ಮದುವೆಯ ಭಾಗ್ಯ ಕರುಣಿಸುವಂತೆ ನಟಿ ಪ್ರೇಮ ಪ್ರಾರ್ಥನೆ.!

ಜಸ್ಟ್ ಕನ್ನಡ : ಸ್ವಾಮಿ ಕೊರಗಜ್ಜನಲ್ಲಿ ಸಂಕಷ್ಟ ನಿವಾರಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸುತ್ತಿರುವವರ ಪ್ರಮಾಣ  ದಿನದಿಂದ ದಿನಕ್ಕೆ ಏರುತ್ತಿದೆ. ಕಳೆದ ತಿಂಗಳಷ್ಟೇ ಖ್ಯಾತ ನಟ ಶಿವರಾಜ್ ಕುಮಾರ್ – ಗೀತಾ ದಂಪತಿಗಳು ಕುಟುಂಬ ಸಮೇತರಾಗಿ ಸ್ವಾಮಿ ಕೊರಗಜ್ಜನ ಆದಿ ಸ್ಥಳ ಕುತ್ತಾರು ಪದವಿಗೆ ಭೇಟಿ ನೀಡಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದ್ದರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ ಕೂಡ ಇದೀಗ ಕಾಪುವಿನಲ್ಲಿರುವ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ :- ಈ ರೀತಿ ಮಾಡಿದ್ರೆ ನಿಮ್ಮ ಮೂಳೆಗಳ ಆರೋಗ್ಯವು 100% ಹೆಚ್ಚುವುದು ಖಂಡಿತ

WhatsApp Group Join Now
Telegram Group Join Now

ನಿನ್ನೆ ಬೆಳಿಗ್ಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಉಡುಪಿಗೆ ಭೇಟಿ ನೀಡಿದ್ದ ಪ್ರೇಮಾ ಅವರು, ಕಾಪುವಿನ ಕೊರಗಜ್ಜನ ಸನ್ನಿಧಿಗೆ ಬಂದಿದ್ದಾರೆ. ಸ್ವಾಮಿ ಕೊರಗಜ್ಜನಲ್ಲಿ ಪ್ರಾರ್ಥಿಸುತ್ತಾ, ಮದುವೆಯಾಗಲು ವರನನ್ನ ಈಗಾಗಲೇ ನೋಡಿದ್ದು, ಅದೇ  ವರನೊಂದಿಗೆ ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ನಟಿ ಪ್ರೇಮಾ ಕೇಳಿಕೊಂಡಿದ್ದಾರೆ.

ಸ್ವಾಮಿ ಕೊರಗಜ್ಜನಿಗೆ ಪೂಜೆ ಸಲ್ಲಿಸಿ, ಆದಷ್ಟು ಬೇಗ ಕಂಕಣ ಭಾಗ್ಯ ಕರುಣಿಸುವಂತೆ ನಟಿ ಪ್ರೇಮಾ ಪ್ರಾರ್ಥಿಸಿಕೊಂಡರು. ನಂತರ ಅಯ್ಯಪ್ಪ ದೇವಸ್ಥಾನ ಹಾಗೂ ಉಡುಪಿಯಲ್ಲಿರುವ ಇತರೆ ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply