Driving Licence : ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಇಲ್ಲದವರಿಗೂ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ

Driving Licence : ನಮಸ್ಕಾರ ಸ್ನೇಹಿತರೇ, ಡ್ರೈವಿಂಗ್ ಲೈಸನ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಸಚಿವಾಲಯ ಹೊಸ ಬದಲಾವಣೆ ಜಾರಿಗೊಳಿಸಿದೆ. ಮುಂದಿನ ಜೂನ್ ಒಂದರಿಂದ ಕರ್ನಾಟಕ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಪ್ರತಿಯೊಂದು ವಾಹನಗಳಿಗೂ ಪರವಾನಗಿ ಅನ್ನುವುದು ತುಂಬಾನೇ ಮುಖ್ಯ. ವಾಹನ ಪರವಾನಿಗೆ ಇಲ್ಲದೇ ವಾಹನ ಚಲಾಯಿಸಿದರೆ ನೀವು ಚಲಾಯಿಸಿದ ಸಮಯಕ್ಕೆ ಪೊಲೀಸ್ ಕೈಗೆ ಸಿಕ್ಕಿಹಾಕಿಕೊಂಡರೆ ನೀವು ದೊಡ್ಡ ಮಟ್ಟದಲ್ಲಿ ದಂಡವನ್ನ ಕೂಡ ಕಟ್ಟಬೇಕಾಗುತ್ತದೆ. ಅದೇ ರೀತಿ ಡ್ರೈವಿಂಗ್ ಲೈಸನ್ಸ್ ಪಡೆಯಬೇಕಾದರೂ ಕೆಲವೊಂದು ವಾಹನ ಓಡಿಸುವುದಕ್ಕೆ ಟೆಸ್ಟ್ ಇರುತ್ತದೆ. ಜೊತೆಗೆ ಪಾರ್ಕಿಂಗ್ ನಿಯಮದ ಕೆಲವು ಚಿಹ್ನೆಗಳನ್ನು ಗುರುತಿಸಲು ಪರೀಕ್ಷೆ ಕೂಡ ನೀಡಲಾಗುತ್ತದೆ.

ಇದನ್ನೂ ಕೂಡ ಓದಿ : Shrama Shakthi Scheme : ಕರ್ನಾಟಕ ಶ್ರಮ ಶಕ್ತಿ ಯೋಜನೆ ಮೂಲಕ ₹50,000/- ಹಣ ಸಿಗಲಿದೆ.! ಅರ್ಜಿ ಸಲ್ಲಿಸುವುದು ಹೇಗೆ.?

ವಾಹನ ಪರವಾನಗಿಯನ್ನು ಅಂದ್ರೆ ಡ್ರೈವಿಂಗ್ ಲೈಸನ್ಸ್ ನ್ನು ನೀವು ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿ ಆರ್‌ಟಿಒ ಕಚೇರಿ ಮೂಲಕ ಪಡೆಯಬಹುದು. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತು ಬಳಿಕ ಅಲ್ಲಿರುವ ಸಾಮಾನ್ಯ ಪರೀಕ್ಷೆ ಎದುರಿಸಬೇಕಿತ್ತು. ಆದರೆ ಇನ್ಮುಂದೆ ಈ ನಿಯಮ ಸಂಪೂರ್ಣ ಬದಲಾವಣೆಯಾಗಲಿದೆ. ನೀವು ಡ್ರೈವಿಂಗ್ ಲೈಸನ್ಸ್ ಪಡೆಯುವುದಕ್ಕೆ ಆರ್ ಟಿಒ ಕಚೇರಿಗೆ ತೆರಳಬೇಕಿಲ್ಲ. ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಟೆಸ್ಟ್ ಡ್ರೈವ್ ಮಾಡಿ ಸರ್ಟಿಫಿಕೇಟನ್ನು ನೀವು ಪಡೆಯಬಹುದು.

ಇದನ್ನೂ ಕೂಡ ಓದಿ : Ration Card : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ.! ಏನೆಲ್ಲಾ ದಾಖಲೆ ಬೇಕು.? ಹೇಗೆ ಅರ್ಜಿ ಸಲ್ಲಿಸುವುದು.?

ಖಾಸಗಿ ಸಂಸ್ಥೆಗಳಿಂದ ಚಾಲನ ಪರವಾನಗಿ ಪಡೆಯುವ ವ್ಯವಸ್ಥೆ ಜೂನ್ 1 2024 ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಗಿ ₹200, ಕಲಿಕಾ ಪರವಾನಿಗೆ ನವೀಕರಣ ₹200, ಅಂತರಾಷ್ಟ್ರೀಯ ಪರವಾನಿಗೆ ₹1000, ಹಾಗು ಶಾಶ್ವತ ಪರವಾನಿಗೆ ₹200 ಇರಲಿದೆ. ನೀವು ಚಾಲನಾ ಪರವಾನಗಿ ಅಂದ್ರೆ ಡ್ರೈವಿಂಗ್ ಲೈಸನ್ಸ್ ಪಡೆಯಬೇಕಾದರೆ ಆರ್ ಟಿಒ ಅಧೀಕೃತ ವೆಬ್ ಸೈಟ್ PARIVAHAN SEVA ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಅದರಲ್ಲಿ ಕೆಲವು ಅಗತ್ಯ ದಾಖಲೆ ಭರ್ತಿ ಮಾಡಿ, ಆರ್‌ಟಿಒ ಕಚೇರಿಗೆ ಸಲ್ಲಿಸಬಹುದು. ಇಲ್ಲವೇ ಖಾಸಗಿ ಏಜೆನ್ಸಿಗೆ ಹಣ ನೀಡಿದ್ರೆ ಎಲ್ಲ ಪ್ರಕ್ರಿಯೆಯನ್ನು ಅವರೇ ನೋಡಿಕೊಳ್ತಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply