Dhruva Sarja : ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಗಂಡು ಮಗುವಿನ ತಂದೆಯಾಗಿರುವ ಧ್ರುವ ಸರ್ಜಾ ಅವರು ತಮ್ಮ ಮೊದಲ ಮಗಳ ನಾಮಕರಣ ಮಾಡಿರಲಿಲ್ಲ. ಇದೀಗ ತಮ್ಮ ಮುದ್ದಿನ ಮಗಳಿಗೆ ಮನೆಯಲ್ಲಿಯೇ ತುಂಬಾನೇ ಸರಳವಾಗಿ ನಾಮಕರಣ ಶಾಸ್ತ್ರ ಮಾಡಿದ್ದಾರೆ.
ನಿನ್ನೆ ಕಾವೇರಿ ವಿಚಾರವಾಗಿ ಸ್ಯಾಂಡಲ್ ವುಡ್ ಕಲಾವಿದರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಹೊರತಾಗಿಯೂ ತಮ್ಮ ಮನೆಯಲ್ಲಿ ಶಾಸ್ತ್ರ ನೆರೆವೇರಿಸಲು ಧ್ರುವ ಸರ್ಜಾ ಮರೆತಿಲ್ಲ.ಮನೆಯಲ್ಲಿಯೇ ಸರಳವಾಗಿ ನಾಮಕರಣ ಶಾಸ್ತ್ರ ನೆರವೇರಿದೆ. ಇನ್ನು ಧ್ರುವ ತಮ್ಮ ಮಗಳ ಹೆಸರನ್ನು ಇನ್ನೂ ರಿವೀಲ್ ಮಾಡಿಲ್ಲ. ಸೆಪ್ಟೆಂಬರ್ ೧೮ ರಂದು ಗಣೇಶ ಹಬ್ಬದ ದಿನ ಧ್ರ್ವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಕ್ಕೆ ಮೊದಲು ದಂಪತಿಗೆ ಓರ್ವ ಹೆಣ್ಣುಮಗಳಿದ್ದಾಳೆ.
ಇದನ್ನೂ ಓದಿ : Meghana Raj : ಗಾಯದ ಮೇಲೆ ತುಪ್ಪ ಸುರಿಯಬೇಡಿ / ನನಗೆ ಯಾರ ಸಿಂಪತಿ ಬೇಕಿಲ್ಲ ಎಂದು ಕಣ್ಣೀರಿಟ್ಟ ಮೇಘನಾ ರಾಜ್.!
ಕಳೆದ ವರ್ಷ ಅಕ್ಟೋಬರ್ ೨ ರಂದು ಮಗಳು ಜನಿಸಿದ್ದರು. ಧ್ರುವ ಸರ್ಜಾ ಅವರು ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿಯಿದ್ದರೂ, ಅಪ್ಪನಾದ ನಂತರ ಮಗಳ ಜೊತೆ ಸಮಯ ಕಳೆಯಲು ಇಂತಿಷ್ಟು ಸಮಯ ಮೀಸಲಿಟ್ಟಿದ್ದಾರೆ. ಇತ್ತೀಚಿಗೆ ಧ್ರುವ ತಮ್ಮ ಮಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಧ್ರುವ ಸರ್ಜಾ ಮಗಳಿಗೆ ಅಕ್ಟೋಬರ್ ೨ ಕ್ಕೆ ಒಂದು ವರ್ಷ ಪೂರ್ಣವಾಗುತ್ತದೆ. ಇಷ್ಟು ದಿನ ಆದರೂ ಇನ್ನೂ ಕೂಡ ಮಗಳಿಗೆ ಹೆಸರನ್ನ ಇಟ್ಟಿರಲಿಲ್ಲ ಧ್ರುವ ಸರ್ಜಾ.
ಇದೀಗ ಧ್ರುವ ಸರ್ಜಾ ಅವರು ಮನೆಯಲ್ಲಿಯೇ ತುಂಬಾನೇ ಸರಳಾವಾಗಿ ನಾಮಕರಣ ಶಾಸ್ತ್ರ ನೆರವೇರಿಸಿದ್ದು, ಅದರ ಫೋಟೋ, ವಿಡಿಯೋವನ್ನು ತಮ್ಮ ಇನ್ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇನ್ನೂ ಮಗಳ ಹೆಸರನ್ನ ಮಾತ್ರ ರಿವೀಲ್ ಮಾಡಿಲ್ಲ. ಇತ್ತೀಚಿಗೆ ಧ್ರುವ ಹಾಗು ಪ್ರೇರಣಾ ಜೋಡಿ ಮಗಳ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು ಮೇಘನಾ ರಾಜ್ ಕೂಡ ಧ್ರುವ ಸರ್ಜಾ ಅವರ ಮಗಳನ್ನ ಎತ್ತಿಕೊಂಡಿರುವ ಫೋಟೋ ಹಂಚಿಕೊಂಡು ಕಣ್ಮಣಿ ಅಂತ ಬರೆದುಕೊಂಡಿದ್ದರು. ಆದರೆ ನಾಮಕರಣ ಆದ ಹೆಸರು ಏನಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇನ್ನೂ ಕಾಡುತ್ತಿದೆ.
ಇದನ್ನೂ ಓದಿ : Darshan Thoogudeepa : ವಿವಾದ ಸೃಷ್ಟಿಸಿದ ಡಿಬಾಸ್ ದರ್ಶನ್ ಹಾಗು ಧ್ರುವ ಸರ್ಜಾ ನಡೆ..! ಇದಕ್ಕೆ ಅಸಲಿ ಕಾರಣ ಏನು ಗೊತ್ತಾ.?
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ದರ್ಶನ್ ಥರಾ ನನಗೂ ಬೇಲ್ ಕೊಡಿ – ನೇಹಾ ಕೊಲೆ ಆರೋಪಿ ಫಯಾಜ್ ಮೊರೆ!
- ಕೆಆರ್ಎಸ್ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದೆ ಟಿಪ್ಪು ಸುಲ್ತಾನ್ ಎಂದ ಸಚಿವ ಮಹದೇವಪ್ಪ
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate Today : ಭಾರೀ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ.! ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.?
- ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಬೆನ್ನಲ್ಲೇ ಪೆನ್ಡ್ರೈವ್ ಹಂಚಿದವರಿಗೆ ಶುರುವಾಯ್ತು ನಡುಕ!