BPL Ration card : ರೇಶನ್ ಕಾರ್ಡ್ ಇದ್ದವರಿಗೆ ಅಕ್ಕಿ ಜೊತೆ ಏನೆಲ್ಲಾ ಸಿಗುತ್ತೆ ಗೊತ್ತಾ.? ತಪ್ಪದೇ ನೋಡಿ .!

BPL Ration card : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದಾದ್ಯಂತ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ. ಪ್ರತೀ ತಿಂಗಳು ರೇಷನ್ ಅಂಗಡಿಯಿಂದ ಆಹಾರಧಾನ್ಯ ಪಡೆಯುತ್ತಿರುವ ರಾಜ್ಯದ ಪ್ರತಿಯೊಂದು ಬಡ ಕುಟುಂಬಗಳಿಗೆ ನೂತನ ಸರ್ಕಾರದಿಂದ ಮತ್ತೊಂದು ಸಿಹಿಸುದ್ಧಿ. ನಿಮ್ಮ ಬಳಿ ಈಗಾಗಲೇ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಇದ್ದರೆ, ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ.

ರಾಜ್ಯದ ನೂತನ ಸರ್ಕಾರವು ಮತ್ತೆ ಬಡಕುಟುಂಬಗಳಿಗೆ ಭಾರೀ ದೊಡ್ಡ ಸಿಹಿಸುದ್ಧಿಯನ್ನ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು, ಪಡಿತರ ಚೀಟಿದಾರರಿಗೆ ರಾಜ್ಯ ಆಹಾರ ಇಲಾಖೆಯು ಭಾರೀ ದೊಡ್ಡ ಸಿಹಿಸುದ್ಧಿಯನ್ನ ನೀಡಿದೆ. ರಾಜ್ಯದ ಆಹಾರ ಇಲಾಖೆಯ ಸಚಿವರಾದ ಕೆ. ಎಚ್ ಮುನಿಯಪ್ಪ, ಇನ್ನು ಮುಂದೆ ಪ್ರತೀ ತಿಂಗಳು ರೇಷನ್ ಅಂಗಡಿಯಿಂದ ಆಹಾರಧಾನ್ಯ ಪಡೆಯುತ್ತಿರುವ ಪ್ರತೀ ಕುಟುಂಬಗಳಿಗೆ ನೂತನ ಸಚಿವರಿಂದ ಹಾಗು ಆಹಾರ ಇಲಾಖೆಯಿಂದ ಈ ಮಾಹಿತಿ ಹೊರಬಿದ್ದಿದೆ.

ಇದನ್ನೂ ಕೂಡ ಓದಿ : ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಬಂಪರ್ ಸುದ್ಧಿ.! 500/- ರೂಪಾಯಿಗೆ ಸಿಗುತ್ತಾ ಗ್ಯಾಸ್ ಸಂಪರ್ಕ

ರಾಷ್ಟ್ರೀಯ ಆಹಾರ ಭಧ್ರತಾ ಕಾಯ್ದೆ, ಅನ್ನಭಾಗ್ಯ ಯೋಜನೆಯ ಅಡಿ ಆಹಾರಧಾನ್ಯ ವಿತರಣೆಯನ್ನ ಮಾಡಲಾಗುತ್ತಿದೆ. ಪ್ರತೀ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿಯ ಪ್ರತೀ ಸದಸ್ಯನಿಗೆ 6 ಕೆಜಿ ಅಕ್ಕಿಯಂತೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರಧಾನ್ಯದ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳುವುದು. ಪಡಿತರ ಕಾರ್ಡ್ ದಾರರಿಗೆ ತಮಗೆ ಹಂಚಿಕೆಯಾದ ಪಡಿತರವನ್ನು ಪ್ರತೀ ತಿಂಗಳು 20 ರೊಳಗೆ ಸಂಬಂದಿಸಿದ ನ್ಯಾಯಬೆಲೆ ಅಂಗಡಿಗಳಿಂದ ಪಡೆಯಬಹುದಾಗಿದೆ.

ಆಹಾರಧಾನ್ಯ ಕಡಿಮೆ ಪ್ರಮಾಣದಲ್ಲಿ ನ್ಯಾಯಬೆಲೆ ಅಂಗಡಿದಾರರು ನೀಡಿದ್ದಲ್ಲಿ, ಅವರ ವಿರುದ್ಧ ನಿಯಮಾನುಸಾರ ಕ್ರಮವನ್ನ ಕೈಗೊಳ್ಳಲಾಗುವುದು ಎಂದು ಧಾರವಾಡ ತಾಲೂಕಿನ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 10 ಕೆಜಿ ಅಕ್ಕಿ ಅನ್ನಭಾಗ್ಯದಲ್ಲಿ, 8 ಕೆಜಿ ಅಕ್ಕಿಯ ಜೊತೆ 2 ಕೆಜಿ ರಾಗಿ ಅಥವಾ ಜೋಳ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಆಹಾರ ಸಚಿವ ಕೆ. ಎಚ್ ಮುನಿಯಪ್ಪ ಹೇಳಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿ 8 ಕೆಜಿ ಅಕ್ಕಿ ಜೊತೆಗೆ 2 ಕೆಜಿ ರಾಗಿ ಹಾಗು ಉತ್ತರ ಕರ್ನಾಟಕದಲ್ಲಿ 2 ಕೆಜಿ ಜೋಳ ನೀಡುವ ಚಿಂತನೆ ನಡೆದಿದೆ. ಯಾವುದೇ ಅಡಚಣೆ ಎದುರಾದರೂ ಕೂಡ ಅನ್ನಭಾಗ್ಯ ಯೋಜನೆ ಜಾರಿಗೆ ಬರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಅಂತ ತಿಳಿಸಿದ್ದಾರೆ.

ಇದನ್ನೂ ಕೂಡ ಓದಿ : Viral Fake News : 200 ಯೂನಿಟ್ ಉಚಿತ ಪಡೆಯುವವರಿಗೆ / ಗ್ರಾಹಕರಿಗೆ ವಿದ್ಯುತ್ ಇಲಾಖೆ ಎಚ್ಚರಿಕೆ ನೀಡಿದೆ!

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಬಿಪಿಎಲ್ ಕುಟುಂಬದ ಪ್ರತೀ ಸದಸ್ಯನಿಗೂ 10 ಕೆಜಿ ಆಹಾರಾಧಾನ್ಯ ನೀಡುವುದಾಗಿ ಸರ್ಕಾರ ತಿಳಿಸಿದೆ. ಈ ಯೋಜನೆಯು ಜುಲೈ 1 ರಿಂದಲೇ ಜಾರಿಗೆ ಬರಲಿದ್ದು, ಯೋಜನೆಯಡಿ 10 ಕೆಜಿ ಅಕ್ಕಿ ನೀಡುವ ಬದಲು 8 ಕೆಜಿ ಅಕ್ಕಿ ಜೊತೆ 2 ಕೆಜಿ ರಾಗಿ ಅಥವಾ ಜೋಳ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..