Viral Fake News : 200 ಯೂನಿಟ್ ಉಚಿತ ಪಡೆಯುವವರಿಗೆ / ಗ್ರಾಹಕರಿಗೆ ವಿದ್ಯುತ್ ಇಲಾಖೆ ಎಚ್ಚರಿಕೆ ನೀಡಿದೆ!

Viral Fake News : ನಮಸ್ಕಾರ ಸ್ನೇಹಿತರೇ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ನಕಲಿ ವಿದ್ಯುತ್ ಬಿಲ್. ಗ್ರಾಹಕರಿಗೆ ಬೆಸ್ಕಾಮ್ ಎಚ್ಚರಿಕೆ ನೀಡಿದೆ. ಮಿತಿಮೀರಿದ ವಿದ್ಯುತ್ ಬಿಲ್ ಗೊಂದಲದ ನಡುವೆ ಶೇಕಡಾ 50 ರಷ್ಟು ಸುಂಕ ಹೆಚ್ಚಳ ಹೊಂದಿರುವ ಫ್ಯಾಬ್ರಿಕೇಟೆಡ್ ಬಿಲ್ಲನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮೇ ಹಾಗು ಜೂನ್ ತಿಂಗಳ ಬಳಕೆ ಮತ್ತು ಬಿಲ್ಲಿಂಗನ್ನು ನಕಲಿ ಬಿಲ್ ನಲ್ಲಿ ಹೋಲಿಸಲಾಗಿದೆ. ಇದರಲ್ಲಿ ಬೆಸ್ಕಾಮ್ ಶೇಕಡಾ ೫೦ ರಷ್ಟು ಹೆಚ್ಚುವರಿ ಶುಲ್ಕ ವಿಧಿಸಿದೆ ಎಂದು ಸುಳ್ಳು ಹೇಳಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL AAY Ration Card : ಬಿಪಿಎಲ್ ರೇಶನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ತಪ್ಪದೇ ನೋಡಿ.!

ಇಂತಹ ಬಿಲ್ ಗಳನ್ನೂ ನಂಬುವುದರಿಂದ ಗ್ರಾಹಕರು ದೂರವಿರಬೇಕು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ನಬೀಲ್ ನಲ್ಲಿ 131 ಯೂನಿಟ್ ಗಳ ಬಳಕೆಗೆ ಬಿಲ್ ಮೊತ್ತ 1162/- ರೂಪಾಯಿ ಆಗಿದೆ. 2023 ರ ಜೂನ್ ನಲ್ಲಿ 163 ಯೂನಿಟ್ ಬಳಕೆಗೆ 2166/- ರೂಪಾಯಿ ಬಿಲ್ ಮೊತ್ತವನ್ನು ನೀಡಲಾಗಿದೆ ಎಂದು ನಮೂದಿಸಲಾಗಿದೆ. ಬಿಲ್ ನಲ್ಲಿ ಯಾವುದೇ ಆರ್. ಆರ್ ಸಂಖ್ಯೆ, ಖಾತೆ ಸಂಖ್ಯೆ ಮತ್ತು ಗ್ರಾಹಕರ ವಿಳಾಸವಿಲ್ಲ. ಇದು ಅಸಲಿಯಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Breaking News : ಮಳೆಗಾಲದಲ್ಲಿ ಮಳೆ ಇಲ್ಲ! ರೈತರಿಗೆ ಬಿಗ್ ಶಾಕಿಂಗ್ ಸುದ್ಧಿ! ರಾಜ್ಯದ ಈ ಜಿಲ್ಲೆಗಳಲ್ಲಿ ಬರಗಾಲ!

ಹೆಚ್ಚುವರಿಯಾಗಿ ಬೆಸ್ಕಾಂ ಮೇ ತಿಂಗಳ ಬಿಲ್ ನಲ್ಲಿ ಪ್ರತೀ ಯೂನಿಟ್ ಗೆ 55 ಪೈಸೆ ಇಂಧನ ಹೊಂದಾಣಿಕೆ ವೆಚ್ಚವನ್ನು ವಿಧಿಸಿದೆ ಎಂದು ನಕಲಿ ಬಿಲ್ ನಲ್ಲಿ ತಿಳಿಸಲಾಗಿದೆ. ಆದರೆ ಬೆಸ್ಕಾಂ ಗ್ರಾಹಕರಿಂದ ಪ್ರತೀ ಯೂನಿಟ್ ಗೆ ಕೇವಲ 6 ಪೈಸೆ ಮಾತ್ರ ಸಂಗ್ರಹಿಸಿದೆ ಎಂದು ಬೆಸ್ಕಾಂ ತಿಳಿಸಿದೆ. ಗ್ರಾಹಕರು ಬಿಲ್ ನಲ್ಲಿ ಯಾವುದೇ ಅನುಮಾನಗಳು ಇದ್ದಲ್ಲಿ ಬೆಸ್ಕಾಂ ಉಪವಿಭಾಗದ ಕಚೇರಿಗೆ ತೆರಳಿ ಸ್ಪಷ್ಟನೆ ಪಡೆಯಬಹುದು. ನಾಗರಿಕರು ಇಂತಹ ನಕಲಿ ಬಿಲ್ ಗಳನ್ನೂ ನಂಬಬಾರದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ ನಂತರ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ. ಉಚಿತ ವಿದ್ಯುತ್ ನೀಡುವುದರಿಂದ ಜನರಿಗೆ ಬಹಳ ಅನುಕೂಲವಾಗುತ್ತದೆ ಎನ್ನುವುದು ಜನರ ಅಭಿಪ್ರಾಯ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply