ಮೂತ್ರ ವಿಸರ್ಜನೆ ಮಾಡುವಾಗ ಈ ರೀತಿಯಾದರೆ ಎಚ್ಚರವಿರಲಿ.! – ಹೆಲ್ತ್ ಟಿಪ್ಸ್

ಮೂತ್ರ ವಿಸರ್ಜನೆ ಮಾಡುವಾಗ ನೊರೆಯಂತೆ ಬರುವುದನ್ನು ನೀವು ಹಲವಾರು ಬಾರಿ ಗಮನಿಸಿರಬಹುದು. ನಾವು ಇದನ್ನು ಸಾಮಾನ್ಯ ಎಂದು ಇಗ್ನೋರ್‌ ಮಾಡುತ್ತೇವೆ. ಆದರೆ ಈ ರೀತಿ ಗುಳ್ಳೆ ಗುಳ್ಳೆ ಏಳುವುದು ಸಾಮಾನ್ಯ ಅಲ್ಲ. ಇದರ ಹಿಂದೆ ಬಹು ದೊಡ್ಡ ಕಾರಣ ಇದೆ. ಅದನ್ನು ನೀವು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಂಡರೆ ನೀವು ಹೆಲ್ತಿಯಾಗಿರಲು ಸಾಧ್ಯ. ಇಲ್ಲವಾದರೆ ಗಂಭೀರ ಕಾಯಿಲೆ ಉಂಟಾಗೋದು ಖಂಡಿತಾ.

Whatsapp Group Join
Telegram channel Join

ಗರ್ಭಾವಸ್ಥೆಯ ದಿನಗಳಲ್ಲಿ : ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿಯಾಗುತ್ತಿದ್ದಂತೆ ಅವರ ಕಿಡ್ನಿಯ ಆಕಾರ ಹೆಚ್ಚಾಗುತ್ತದೆ. ವೈದ್ಯರು ತಿಳಿಸುವಂತೆ ಪ್ರೆಗ್ನೆನ್ಸಿಯ ದಿನಗಳಲ್ಲಿ ಮಹಿಳೆಯರ ಕಿಡ್ನಿಯಲ್ಲಿ ಬೇಗನೆ ಅಮಿನೊ ಆಸಿಡ್‌ ಫಿಲ್ಟರ್‌ ಆಗುತ್ತದೆ. ಈ ಕಾರಣದಿಂದಾಗಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನೊರೆಯಂತೆ ಕಂಡು ಬರುತ್ತದೆ. 

ಡೀಹೈಡ್ರೇಶನ್‌ : ಡೀಹೈಡ್ರೇಶನ್‌ನಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಮೂತ್ರ ಡಾರ್ಕ್‌ ಬಣ್ಣಕ್ಕೆ ತಿರುಗುತ್ತದೆ. ಈ ಸಮಯದಲ್ಲೂ ಮೂತ್ರ ಮಾಡುವಾಗ ಗುಳ್ಳೆಗಳು ಮೂಡುತ್ತವೆ. ನಿಮಗೂ ಈ ಸಮಸ್ಯೆ ಕಂಡುಬಂದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ. 

Whatsapp Group Join
Telegram channel Join

ಮತ್ತೆ ಮತ್ತೆ ಮೂತ್ರ ವಿಸರ್ಜನೆ : ಒಂದು ವೇಳೆ ಒಬ್ಬ ವ್ಯಕ್ತಿ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ನೊರೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕಾಗಿ ಹೆದರುವ ಅಗತ್ಯ ಇಲ್ಲ. 

ಪ್ರೊಟೀನ್‌ ಹೆಚ್ಚಾದರೆ : ಪ್ರೊಟೀನ್‌ ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡಿದರೆ ದೇಹದಲ್ಲಿ ಪ್ರೊಟೀನ್‌ ಪ್ರಮಾಣ ಹೆಚ್ಚುತ್ತದೆ. ನಾವು ಆರೋಗ್ಯವಾಗಿದ್ದು, ದೇಹದಲ್ಲಿ ಹೆಚ್ಚು ಪ್ರೊಟೀನ್‌ ಇದ್ದರೆ ಅದು ಮೂತ್ರದ ಮೂಲಕ ಹೊರ ಹೋಗುತ್ತದೆ. ಈ ಸಮಯದಲ್ಲೂ ನೊರೆ ಕಾಣಿಸಿಕೊಳ್ಳುತ್ತದೆ. 

ಅನಾವಶ್ಯಕ ವಸ್ತುಗಳು ಕಿಡ್ನಿಯ ಮೂಲಕ ಪಾಸ್‌ ಆಗುವುದು : ಯಾವಾಗ ಕಿಡ್ನಿಯ ಮೂಲಕ ದೇಹಕ್ಕೆ ಬೇಡವಾದ ವಸ್ತು ಸಾಗುತ್ತದೆ ಆ ಸಮಯದಲ್ಲಿ ಮೂತ್ರ ಮಾಡುವಾಗ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. 

ಯೂರಿನ್‌ ಇನ್‌ಫೆಕ್ಷನ್‌ : ಯೂರಿನ್‌ನಲ್ಲಿ ಇನ್‌ಫೆಕ್ಷನ್‌ ಆಗುವ ಸಂದರ್ಭದಲ್ಲಿ ರೋಗಾಣುಗಳು ಮೂತ್ರದ ಮೂಲಕ ದೇಹದಿಂದ ಹೊರಗೆ ಬರುತ್ತವೆ. ಈ ಸಂದರ್ಭದಲ್ಲಿ ಮೂತ್ರದಲ್ಲಿ ಗುಳ್ಳೆಗಳು ಏಳುತ್ತವೆ. ಈ ಸಂದರ್ಭದಲ್ಲಿ ಆ್ಯಂಟಿಬಯೋಟಿಕ್‌ ಔಷಧಿ ಸೇವನೆ ಮಾಡಬೇಕು. 

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ’Just Kannada’ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply