SBI Bank Customer : ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನೆಲ್ಲ ಗ್ರಾಹಕರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. ಇದೆ ಮಾರ್ಚ್ 31 ರ ಒಳಗಾಗಿ ಎಲ್ಲ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ. ಈ ಎರಡು ಹೊಸ ಯೋಜನೆಗಳ ಅಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ. ಇದೆ ಮಾರ್ಚ್ 31 ರ ಒಳಗಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳಲು ತಿಳಿಸಲಾಗಿದೆ.
ಹೊಸ ಹಣಕಾಸಿನ ವರ್ಷ ಆರಂಭವಾಗುವುದಕ್ಕೆ ಇನ್ನು ಒಂದು ತಿಂಗಳು ಬಾಕಿ ಇದೆ. ಮಾರ್ಚ್ ತಿಂಗಳು ಕೊನೆಗೊಳ್ಳುತ್ತಿದ್ದಂತೆ ಏಪ್ರಿಲ್‌ನಿಂದ 2024 ರ ಆರ್ಥಿಕ ವರ್ಷ ಆರಂಭವಾಗುತ್ತದೆ. ಬ್ಯಾಂಕಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಬದಲಾವಣೆಗಳನ್ನು ತರಲಾಗಿದೆ. ಅದರಲ್ಲೂ ನೀವು ಎಸ್ ಬಿಐ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಖಂಡಿತವಾಗಿಯೂ ಈ ವಿಚಾರಗಳು ನಿಮಗೆ ತಿಳಿದಿರಲಿ ಹಾಗೂ ಗ್ರಾಹಕರು ತಕ್ಷಣ ಈ ಯೋಜನೆಗಳಿಗೆ ಅಪ್ಲೈ ಮಾಡಿದ್ರೆ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತೀರಿ.
ಇದನ್ನೂ ಕೂಡ ಓದಿ : Akrama Sakrama Scheme : ಸರ್ಕಾರಿ ಜಮೀನನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ – ಅಕ್ರಮ ಸಕ್ರಮ ಹಕ್ಕುಪತ್ರ ವಿತರಣೆ
ಎಸ್‌ಬಿಐ ಅಮೃತ ಕಳಸ ಯೋಜನೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿತ್ತು. ಗ್ರಾಹಕರ ಬೇಡಿಕೆಯ ಮೇರೆಗೆ ಈ ಹಿಂದೆ ಸ್ಥಗಿತಗೊಳ್ಳಬೇಕಿದ್ದ ಅಮೃತ ಕಳಸ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನ ಮಾರ್ಚ್ 31 ರವರೆಗೆ ಮುಂದುವರೆಸಿದೆ. ಈ ಯೋಜನೆಯಲ್ಲಿ ನಾನೂರು ದಿನಗಳ ಹೂಡಿಕೆಗೆ 7.10 ರಷ್ಟು ಬಡ್ಡಿ ಪಡೆಯಬಹುದು. ಹೂಡಿಕೆ ಮಾಡಿ ನಾನೂರು ದಿನಕ್ಕಿಂತ ಮೊದಲೇ ನಿಮ್ಮ ಹಣವನ್ನು ಹಿಂಪಡೆಯಲು ಬಯಸಿದ್ರೆ 0.50% ನಿಂದ ಒಂದು ಪರ್ಸೆಂಟ್‌ಗಿಂತಲೂ ಕಡಿಮೆ ದಂಡ ಪಾವತಿ ಮಾಡಬೇಕು ಅಂದ್ರೆ ಇಷ್ಟು ಬಡ್ಡಿ ದರವನ್ನ ಕಡಿತಗೊಳಿಸಲಾಗುತ್ತದೆ.
ಎಸ್‌ಬಿಐ ವಿ ಕೇರ್ ಎಫ್‌ಡಿ ಯೋಜನೆ ಎಸ್‌ಬಿಐ ಹಿರಿಯ ನಾಗರಿಕರಿಗಾಗಿ ವಿ ಕೇರ್ ಎಫ್‌ಡಿ ಪರಿಚಯಿಸಿದೆ. ಇದರಲ್ಲಿ ಕನಿಷ್ಠ ಐದು ವರ್ಷದಿಂದ ಗರಿಷ್ಠ 10 ವರ್ಷಗಳವರೆಗೆ ಪೂರೈಕೆ ಮುಂದುವರೆಸಬಹುದು. ಅಷ್ಟೇ ಅಲ್ಲ, ಹಿರಿಯ ನಾಗರಿಕರು 7.50% ವರೆಗೆ ಬಡ್ಡಿ ಲಾಭವನ್ನು ಪಡೆದುಕೊಳ್ಳುತ್ತಾರೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಮಾರ್ಚ್ 31, 2024 ಕೊನೆಯ ದಿನಾಂಕ. ಉತ್ತಮ ಬಡ್ಡಿದರ ಪಡೆದುಕೊಳ್ಳಲು ಈ ಯೋಜನೆ ಅಡಿಯಲ್ಲಿ ಇಂದೇ ಹೂಡಿಕೆ ಆರಂಭಿಸಿ.
ಇದನ್ನೂ ಕೂಡ ಓದಿ : Pahani : ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ – ಎಲ್ಲಾ ರೈತರಿಗೆ ಇಲ್ಲ ಅಂದ್ರೆ ಸರ್ಕಾರಿ ಸೌಲಭ್ಯಗಳು ಸಿಗಲ್ಲ.!
ಹೌದು, ಗೃಹ ಸಾಲದ ಮೇಲಿನ ಬಡ್ಡಿದರ ಕೊಡುಗೆ :- ಎಸ್‌ಬಿಐ ಬ್ಯಾಂಕ್‌ನಲ್ಲಿ ಹೊಸ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಡಿಯಲ್ಲಿ ಗೃಹ ಸಾಲಕ್ಕೆ ಕಡಿಮೆ ಬಡ್ಡಿ ದರವನ್ನು ಎಸ್ ಬಿಐ ಬ್ಯಾಂಕ್ ವಿಧಿಸಿದೆ. ಇದು ಕೂಡ ಸೀಮಿತ ಅವಧಿಯ ಕೊಡುಗೆ ಆಗಿದ್ದು, ಮಾರ್ಚ್ 31 ರವರೆಗೆ ಮಾತ್ರ ಲಭ್ಯವಿದೆ. 750 ರಿಂದ 800 ಸಿಬಿಲ್ ಸ್ಕೋರ್ ಇರುವ ವ್ಯಕ್ತಿ ಎಸ್ ಬಿಐ ನಲ್ಲಿ ಗೃಹ ಸಾಲ ತೆಗೆದುಕೊಂಡರೆ 8.60% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಇಷ್ಟು ಉತ್ತಮ ಸಿಬಿಲ್ ಸ್ಕೋರ್ ಇಲ್ಲದೇ ಇರುವವರಿಗೆ 9.15% ಬಡ್ಡಿ ವಿಧಿಸಲಾಗುವುದು.
ಈ ಎಲ್ಲ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಎಸ್ ಬಿ. ಮಾರ್ಚ್ 31, 2024 ಕೊನೆ ದಿನಾಂಕವನ್ನು ನಿಗದಿಪಡಿಸಿದ್ದು, ಈ ದಿನಾಂಕದೊಳಗೆ ಎಸ್ ಬಿಐ ಘೋಷಿಸಿರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..