Spandana : ಹೃದಯಾಘಾತದಿಂದ ನಿಧನರಾಗಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಮೃತದೇಹವನ್ನು ನಿನ್ನೆ ತಡರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ. ಬಳಿಕ ನಿನ್ನೆ ತಡರಾತ್ರಿಯಿಂದ ಸ್ಪಂದನ ತವರು ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮನೆಯೊಳಗೇ ಕರೆದುಕೊಂಡು ಶಾಸ್ತ್ರ ಮುಗಿಸಿದ ಬಳಿಕ ಮನೆಯ ಹೊರಗೆ ಅಂತಿಮ ದರ್ಶನಕ್ಕಿಡಲಾಗಿದೆ. ಈ ವೇಳೆ ನಟ ವಿಜಯ ರಾಘವೇಂದ್ರ ಪತ್ನಿಯ ಪಾರ್ಥಿವ ಶರೀರಕ್ಕೆ ಮಾಡಬೇಕಾದ ಕೆಲವು ಶಾಸ್ತ್ರಗಳನ್ನು ಕಣ್ಣೀರು ಹಾಕುತ್ತಲೇ ಮಾಡಿದ್ದಾರೆ. ಸ್ಪಂದನಾಗೆ ಬಳೆ ತೊಡಿಸುವ ಶಾಸ್ತ್ರದ ವೇಳೆ ವಿಜಯ್ ತೀವ್ರ ದುಃಖಿತರಾಗಿದ್ದಾರೆ. ಬಳಿಕ ಪತ್ನಿಯ ಮೃತ ದೇಹದ ಸಮೀಪವೇ ಅತೀವ ದುಃಖದಿಂದ ಕುಳಿತಿದ್ದಾರೆ. ಇಂದು ಬೆಳಿಗ್ಗೆ ನಟ ಶಿವರಾಜ್ ಕುಮಾರ್, ಗಿರಿಜಾ ಲೋಕೇಶ್, ಶ್ರೀನಾಥ್, ಸುಧಾರಾಣಿ, ಅನು ಪ್ರಭಾಕರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.
ಇದನ್ನೂ ಕೂಡ ಓದಿ : Spandana : ಟ್ರಿಪ್ ಹೋಗಿದ್ದಾಗ ವಿಜಯ್ ರಾಘವೇಂದ್ರ ಪತ್ನಿಗೆ ನಿಜಕ್ಕೂ ಆಗಿದ್ದೇನು.? ಕಣ್ಣೀರಿಟ್ಟ ಕನ್ನಡ ಚಿತ್ರರಂಗ
ಅಲ್ಲದೇ, ದುಃಖತಪ್ತರಾಗಿರುವ ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯ ಕ್ರಿಯೆ ನೆರವೇರಲಿದೆ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ. ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ಅವರ ಮೃತದೇಹವನ್ನ ರಾತ್ರಿ ತಾನೇ ತರಲಾಗಿದ್ದು, ಪತ್ನಿಗೆ ಹಸಿರು ಬಳೆ ತೊಡಿಸಿ, ಮುಡಿಗೆ ಹೂವು ಮೂಡಿಸಿ, ತಾಳಿ, ಕಾಲುಂಗರ ಹಾಕಿ ಪತ್ನಿಯ ಮುಖವನ್ನ ನೋಡುತ್ತಾ ಕುಳಿತಿದ್ದಾರೆ ವಿಜಯ ರಾಘವೇಂದ್ರ. ಪತ್ನಿಯ ಪಾರ್ಥಿವ ಶರೀರದ ಮುಂದೆ ನಿಂತು ರಾಘಣ್ಣ, ಯಾಕೆ ನನ್ನ ಒಂಟಿಯಾಗಿ ಬಿಟ್ಟು ಹೋದೆ.? ನಾನು ಏನು ತಪ್ಪು ಮಾಡಿದೆ. ನಿನ್ನ ಬಿಟ್ಟು ನನಗೆ ಇರಕ್ಕಾಗಲ್ಲ ಕಣೋ.. ನಿನ್ನ ಬಿಟ್ಟು ನನಗೆ ಯಾರು ಇಲ್ಲ ಕಣೋ ಪ್ಲೀಸ್ ವಾಪಾಸ್ ಬಂದು ಬಿಡು ಚಿನ್ನ.. ಎಂದು ಕಣ್ಣೀರು ಹಾಕಿದ್ದು, ಕಲ್ಲು ಹೃದಯ ಕೂಡ ಕರಗುವಂತಿತ್ತು. ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..