2nd PUC : ನಮಸ್ಕಾರ ಸ್ನೇಹಿತರೇ, ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಆಗುತ್ತೆ ಅಂತ ಎಲ್ಲಾ ವಿದ್ಯಾರ್ಥಿಗಳು ಕಾಯುತ್ತಿದ್ದು, ಈ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಯ ಮುಹೂರ್ತದ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳು ಹಾಗು ಪೋಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದು, ವಿದ್ಯಾರ್ಥಿಗಳಿಗೆ ಮಾರ್ಚ್ 9 2023 ರಿಂದ ಸರಕಾರಿ/ಖಾಸಗಿ ಸೇರಿದಂತೆ ಎಲ್ಲಾ ವಿಧ್ಯಾರ್ಥಿಗಳನ್ನೊಳಗೊಂಡಂತೆ ಮಾರ್ಚ್ 29 ನೇ ತಾರೀಖಿನ ತನಕ ಕರ್ನಾಟಕ ರಾಜ್ಯದಲ್ಲಿ ಪರೀಕ್ಷೆಗಳು ನಡೆದಿದ್ದವು. ವಿದ್ಯಾರ್ಥಿಗಳಿಗೆ ಫಲಿತಾಂಶದ ಕುರಿತು ಹಲವಾರು ರೀತಿಯಾದಂತಹ ಮಾಹಿತಿಗಳು ಬರುತ್ತಿದ್ದು, ಇವಾಗ ಫಲಿತಾಂಶ ಬಿಡುಗಡೆಯ ಮುಹೂರ್ತ ಫಿಕ್ಸ್ ಆಗುವ ಮಾಹಿತಿ ಬಂದಿದ್ದು, ಫಲಿತಾಂಶ ಬೇಗನೆ ಬಿಡುಗಡೆ ಆಗುತ್ತೆ ಅಂತ ಹೇಳಲಾಗುತ್ತಿದೆ.
ಇದನ್ನೂ ಕೂಡ ಓದಿ : ₹50,000/- ಫ್ರೀ ಸ್ಕಾಲರ್ ಶಿಪ್ ಎಲ್ಲಾ ವಿದ್ಯಾರ್ಥಿಗಳಿಗೆ ಬಂಪರ್ ಸುದ್ಧಿ! । SBI Asha Scholarship Apply 2023
ವಿದ್ಯಾರ್ಥಿಗಳ ಮೌಲ್ಯ ಮಾಪನವು ಏಪ್ರಿಲ್ 5 ರಿಂದ ಶುರುವಾಗಿತ್ತು. ಇದೀಗ ಬಹುತೇಕವಾಗಿ ಮೌಲ್ಯಮಾಪನ ಕಾರ್ಯವು ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ಫಲಿತಾಂಶವನ್ನ ಪ್ರಕಟ ಮಾಡುವುದಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಡೆಯಿಂದ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದು, ತಾಂತ್ರಿಕ ಕೆಲಸಗಳನ್ನು ಕೂಡ ಶೀಘ್ರದಲ್ಲೇ ಶುರು ಮಾಡಲಾಗುತ್ತದೆ ಅನ್ನುವ ಮಾಹಿತಿಗಳಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಡೆಯಿಂದ ಬಂದಿರುವಂತಹ ಮೂಲಗಳ ಮಾಹಿತಿಯ ಪ್ರಕಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಶೀಘ್ರವೇ ದಿನಾಂಕ ಫಿಕ್ಸ್ ಮಾಡುತ್ತಾರೆ ಅನ್ನುವ ಮಾಹಿತಿ ಇದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮಾಹಿತಿಯನ್ನ ಕೊಟ್ಟಿದ್ದರು.
ಇದನ್ನೂ ಕೂಡ ಓದಿ : ರಾಜ್ಯದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ಧಿ // Free Bus Pass For Karnataka Women’s
ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನ ಮೇ ಮೊದಲ ವಾರದಲ್ಲಿ ಪ್ರಕಟ ಮಾಡುವಂತಹ ಗುರಿಯನ್ನ ಹೊಂದಿದ್ದೇವೆ ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದು, ಆದರೆ ವಿದ್ಯಾರ್ಥಿಗಳ ಫಲಿತಾಂಶ ಮೇ ತಿಂಗಳಿಗಿಂತ ಮುಂಚೆ ಅಂದರೆ ಏಪ್ರಿಲ್ ಕೊನೆಯ ವಾರದ ಒಳಗೆ, ಅಂದ್ರೆ ಏಪ್ರಿಲ್ ತಿಂಗಳಲ್ಲೇ ಫಲಿತಾಂಶ ಪ್ರಕಟವಾಗುತ್ತೆ ಅಂತ ಮಾಹಿತಿಗಳು ಬರುತ್ತಿದೆ. ಇದು ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಅಂತಾನೆ ಹೇಳಬಹುದು. ಫಲಿತಾಂಶ ಬಿಡುಗಡೆಯ ಕುರಿತು ಶಿಕ್ಷಣ ಇಲಾಖೆ ಕಡೆಯಿಂದ ಯಾವುದೇ ರೀತಿಯ ಅಧೀಕೃತವಾದ ದಿನಾಂಕವನ್ನ ಪ್ರಕಟ ಮಾಡಿಲ್ಲ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..