ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 06-09-2022

ಮೇಷ ರಾಶಿ : ನಿಗದಿತ ಕಾರ್ಯಗಳೆಲ್ಲ ಸುಲಭವಾಗಿ ಪೂರ್ಣಗೊಳ್ಳಲಿವೆ. ಆದ್ರೆ ನಿಮ್ಮ ಪ್ರಯತ್ನ ತಪ್ಪು ದಿಸೆಯಲ್ಲಿ ಹೋದಂತೆ ಗೋಚರವಾಗುತ್ತದೆ. ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ತೀರ್ಥಯಾತ್ರೆ ಮಾಡುವ ಯೋಗವಿದೆ.

ವೃಷಭ : ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಇರುವುದರಿಂದ ಹತಾಶೆ ಆವರಿಸುತ್ತದೆ. ಯಶಸ್ಸು ಸಿಗಲು ಕೊಂಚ ವಿಳಂಬವಾಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಹೊಸ ಕಾರ್ಯವನ್ನು ಆರಂಭಿಸಬೇಡಿ.

ಮಿಥುನ : ಇವತ್ತು ದಿನದ ಆರಂಭ ಅತ್ಯಂತ ಆರಾಮದಾಯಕವಾಗಿಯೂ ಮತ್ತು ಸ್ಪೂರ್ತಿದಾಯಕವಾಗಿಯೂ ಇರುತ್ತದೆ. ಮಿತ್ರರ ಜೊತೆಗೆ ಪಾರ್ಟಿಗೆ ತೆರಳಲು ಪ್ಲಾನ್ ಹಾಕಿಕೊಳ್ಳಬಹುದು.

ಕರ್ಕ : ಇವತ್ತು ಇಡೀ ದಿನ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಕುಟುಂಬದವರೊಂದಿಗೆ ಸಂತೋಷವಾಗಿ ಕಾಲ ಕಳೆಯಲು ಅವಕಾಶ ಸಿಗುತ್ತದೆ. ನಿಗದಿತ ಕೆಲಸ ಪೂರ್ಣವಾಗಲಿದೆ, ಯಶಸ್ಸು ಸಿಗಲಿದೆ.

ಸಿಂಹ : ಸಾಹಿತ್ಯ ಮತ್ತು ಲೇಖನದಲ್ಲಿ ಹೊಸ ಪ್ರಯತ್ನ ಮಾಡಲಿದ್ದೀರಿ. ಪ್ರಿಯ ವ್ಯಕ್ತಿಯೊಂದಿಗಿನ ಭೇಟಿ ಸುಖಮಯವಾಗಿರುತ್ತದೆ. ಮಕ್ಕಳ ಬಗ್ಗೆ ಶುಭ ಸಮಾಚಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ.

ಕನ್ಯಾ : ಇಂದು ಆರೋಗ್ಯ ಕೊಂಚ ಏರುಪೇರಾಗಲಿದೆ. ಮನಸ್ಸು ಕೂಡ ಚಿಂತಾಗ್ರಸ್ಥವಾಗಿರುತ್ತದೆ. ತಾಯಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಆತ್ಮೀಯರ ಜೊತೆಗೆ ವಾದ ವಿವಾದ, ಮುನಿಸು ಉಂಟಾಗಲಿದೆ.

ತುಲಾ : ಹೊಸ ಕಾರ್ಯವನ್ನು ಆರಂಭಿಸಲು ಅನುಕೂಲಕರ ದಿನ. ಭಾಗ್ಯ ವೃದ್ಧಿ ಮತ್ತು ಧನ ಲಾಭದ ಸಾಧ್ಯತೆ ಇದೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ವಿದೇಶದಿಂದ ಶುಭ ಸಮಾಚಾರ ಬರಲಿದೆ.

ವೃಶ್ಚಿಕ : ಮನೆಯಲ್ಲಿ ಸುಖ-ಶಾಂತಿ ತುಂಬಿರುತ್ತದೆ. ಮಿತ್ರರು ಮತ್ತು ಸಂಬಂಧಿಕರ ಆಗಮನವಾಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಆಭರಣ ಮತ್ತು ಸುಗಂಧ ದ್ರವ್ಯಗಳನ್ನು ಖರೀದಿಸಲಿದ್ದೀರಿ.

ಧನು : ಆರೋಗ್ಯ ಸುಧಾರಿಸಲಿದೆ. ಓದಿನಲ್ಲಿ ಯಶಸ್ಸು ಸಿಗುತ್ತದೆ. ವಿದೇಶದಲ್ಲಿ ನಡೆಸಿರುವ ವ್ಯಾಪಾರದಿಂದ ಲಾಭವಿದೆ. ಧಾರ್ಮಿಕ ಮತ್ತು ಮಂಗಳ ಕಾರ್ಯ ನಡೆಸಿಕೊಡಲಿದ್ದೀರಿ. ಮಿತ್ರರ ಭೇಟಿಯಿಂದ ಆರ್ಥಿಕ ಲಾಭ ದೊರೆಯಲಿದೆ.

ಮಕರ : ವ್ಯವಹಾರದಲ್ಲಿ ಹೊರಗಿನವರ ಹಸ್ತಕ್ಷೇಪವಿರುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಶತ್ರುಗಳಿಂದ ತೊಂದರೆಯಾಗಬಹುದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸುತ್ತವೆ.

ಕುಂಭ : ಹೊಸ ಕಾರ್ಯ ಆರಂಭಿಸಲು ಶುಭ ದಿನ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂಗಾತಿ ಮತ್ತು ಮಕ್ಕಳಿಂದ ಶುಭ ಸಮಾಚಾರ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖದ ಅನುಭವವಾಗಲಿದೆ.

ಮೀನ : ಇಂದು ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಪದೋನ್ನತಿ ಯೋಗವಿದೆ. ವ್ಯಾಪಾರಿಗಳಿಗೆ ಬಾಕಿ ಹಣ ದೊರೆಯಲಿದೆ. ಹಿರಿಯರಿಂದ ಲಾಭವಾಗಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply