ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 05-09-2022 – ಕನ್ನಡ ರಾಶಿ ಭವಿಷ್ಯ

ಮೇಷ ರಾಶಿ :- ಆನಂದ, ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗ ಕೂಡಿ ಬರಲಿದೆ.

ವೃಷಭ ರಾಶಿ :- ವ್ಯಾಪಾರಿ ವರ್ಗಕ್ಕೆ ಇಂದು ಶುಭ ದಿನ. ಆದಾಯ ವೃದ್ಧಿ ಜೊತೆಗೆ ಯಶಸ್ಸು ಕೂಡ ಸಿಗಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ತಂದೆ ಮತ್ತು ಹಿರಿಯರಿಂದ ಲಾಭವಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

Whatsapp Group Join
Telegram channel Join

ಮಿಥುನ ರಾಶಿ :- ಕುಟುಂಬ ಸದಸ್ಯರೊಂದಿಗೆ ಮನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಮನೆಯ ರೂಪು ರೇಷೆ ಬದಲಾವಣೆ ಬಗ್ಗೆ ವಿಚಾರ-ವಿಮರ್ಷೆ ನಡೆಯಲಿದೆ.

ಕರ್ಕ ರಾಶಿ :- ಈ ದಿನ ಅನುಕೂಲಕರವಾಗಿದೆ ಮತ್ತು ಲಾಭದಾಯಕವೂ ಹೌದು. ಹಿರಿಯ ಅಧಿಕಾರಿಗಳ ಕೃಪೆ ನಿಮ್ಮ ಮೇಲಿರುತ್ತದೆ. ಇದರಿಂದ ನಿಮ್ಮ ಪ್ರಗತಿಯ ಮಾರ್ಗ ನಿರ್ವಿಘ್ನವಾಗಿರಲಿದೆ.

Whatsapp Group Join
Telegram channel Join

ಸಿಂಹ ರಾಶಿ :- ಇಂದು ಹೊಸ ಕಾರ್ಯವನ್ನು ಆರಂಭಿಸಲು ಶುಭ ದಿನ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊರಗಡೆ ಊಟ-ತಿಂಡಿ ಮಾಡಬೇಡಿ. ಇಂದು ನಿಮ್ಮಲ್ಲಿ ಕೋಪ ಮತ್ತು ವ್ಯಗ್ರತೆ ಹೆಚ್ಚಾಗಿರುತ್ತದೆ.

ಕನ್ಯಾ ರಾಶಿ :- ಇಂದು ನಿಮ್ಮ ದಿನ ಮೋಜು-ಮಸ್ತಿಯಲ್ಲಿ ಕಳೆಯಲಿದೆ. ಮನೆಯಲ್ಲಿ ಶಾಂತವಾದ ವಾತಾವರಣವಿರುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವುದಿಲ್ಲ.

ತುಲಾ ರಾಶಿ :- ವ್ಯಾವಹಾರಿಕ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಪ್ರತಿಸ್ಪರ್ಧಿಗಳಿಗೂ ಹೆಚ್ಚು ಲಾಭವಾಗುತ್ತದೆ. ಪಾಲುದಾರರಿಂದ ಲಾಭವಿದೆ. ವಿದೇಶದಿಂದ ಶುಭ ಸಮಾಚಾರ ಬರಲಿದೆ.

Whatsapp Group Join
Telegram channel Join

ವೃಶ್ಚಿಕ ರಾಶಿ :- ಇಂದು ಕೆಲಸದಲ್ಲಿ ಯಶಸ್ಸು ಸಿಗದೇ ಇರುವುದರಿಂದ ಹತಾಶೆ ನಿಮ್ಮನ್ನು ಆವರಿಸುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಸಂತಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ಚಿಂತಿತರಾಗಲಿದ್ದೀರಿ.

ಧನು ರಾಶಿ :- ಶಾರೀರಿಕ ಮತ್ತು ಮಾನಸಿಕವಾಗಿ ಪ್ರತಿಕೂಲತೆಯ ಅನುಭವವಾಗಲಿದೆ. ನಿದ್ದೆಯ ಕೊರತೆಯಿಂದ ಆಲಸ್ಯ ಉಂಟಾಗುತ್ತದೆ. ಸ್ವಾದಿಷ್ಟ ಭೋಜನ ಹಾಗೂ ವಸ್ತ್ರಾಭರಣ ಯೋಗವಿದೆ.

ಮಕರ ರಾಶಿ :- ಚಿಂತೆಯ ಕಾರ್ಮೋಡ ಸರಿಯಲಿದೆ, ಮನಸ್ಸು ಹಗುರವಾಗಲಿದೆ. ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಯಶಸ್ಸು, ಕೀರ್ತಿ ಮತ್ತು ಆನಂದ ದೊರೆಯುತ್ತದೆ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಕುಂಭ ರಾಶಿ :- ಮಾತಿನ ಮೇಲೆ ನಿಯಂತ್ರಣವಿರಲಿ. ಜಗಳ-ವಿವಾದದಲ್ಲಿ ತೊಡಗಬೇಡಿ. ಖರ್ಚನ್ನು ಕೂಡ ನಿಯಂತ್ರಿಸಿಕೊಳ್ಳಿ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಒಡಹುಟ್ಟಿದವರ ಸಹಕಾರ ಸಿಗುತ್ತದೆ.

ಮೀನ ರಾಶಿ :- ಇಂದು ಪ್ರತಿ ವಿಷಯದಲ್ಲೂ ಅನುಕೂಲತೆಯ ಅನುಭವವಾಗಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸುಖಮಯ ಘಟನೆಗಳು ಜರುಗುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply