ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | ದಿನ ಭವಿಷ್ಯ

ಮೇಷ ರಾಶಿ :- ವ್ಯಾವಹಾರಿಕ ಕಾರ್ಯಗಳನ್ನು ಪೂರ್ಣಗೊಳಿಸಲು ಇಂದು ಶುಭ ದಿನ. ಮನಸ್ಸಿನಲ್ಲಿ ಗೊಂದಲದಿಂದಾಗಿ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯ ಕೊಂಚ ಏರುಪೇರಾಗಿರುತ್ತದೆ.

ವೃಷಭ ರಾಶಿ :- ಮನಸ್ಸಿನ ಏಕಾಗ್ರತೆ ಕಡಿಮೆಯಾಗಿರುತ್ತದೆ. ಹಣವನ್ನು ಹೂಡಿಕೆ ಮಾಡುವವರು ಜಾಗರೂಕರಾಗಿರಿ. ಅತ್ಯಂತ ಅವಶ್ಯಕ ದಾಖಲೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ಮಿಥುನ ರಾಶಿ :- ಇಂದು ಅನುಕೂಲಕರ ಹಾಗೂ ಲಾಭದಾಯಕ ದಿನ. ಹಿರಿಯ ಅಧಿಕಾರಿಗಳ ಕೃಪೆಯಿಂದ ಪ್ರಗತಿಯ ಮಾರ್ಗದಲ್ಲಿ ಸಾಗುತ್ತೀರಿ. ವ್ಯಾಪಾರದಲ್ಲೂ ಆದಾಯ ವೃದ್ಧಿಸಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ.

ಕರ್ಕ ರಾಶಿ :- ಪ್ರೇಮದ ಸುಖಮಯ ಅನುಭವ ಪ್ರಾಪ್ತವಾಗಲಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ಗೃಹಸ್ಥ ಜೀವನ ಸುಖಮಯವಾಗಿರುತ್ತದೆ.

ಸಿಂಹ ರಾಶಿ :- ವ್ಯಾಪಾರಿಗಳಿಗೆ ಇಂದು ಶುಭ ದಿನ. ವ್ಯಾಪಾರ ವೃದ್ಧಿ ಜೊತೆಗೆ ಯಶಸ್ಸು ಕೂಡ ಸಿಗಲಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಹಿರಿಯರು ಮತ್ತು ತಂದೆಯಿಂದ ಲಾಭವಿದೆ.

ಕನ್ಯಾ ರಾಶಿ :- ಇಂದು ಇಡೀ ದಿನ ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಆತ್ಮೀಯರೊಂದಿಗೆ ರುಚಿಕರ ಭೋಜನ ಸವಿಯಲಿದ್ದೀರಿ. ಸಂಗಾತಿಯೊಂದಿಗಿನ ಸಂಬಂಧ ಮಧುರವಾಗಿರುತ್ತದೆ.

ತುಲಾ ರಾಶಿ :- ಇಂದು ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ದೃಢ ಮನೋಬಲ ಹಾಗೂ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ.

ವೃಶ್ಚಿಕ ರಾಶಿ :- ಇವತ್ತಿನ ದಿನ ಪ್ರತಿಕೂಲತೆಯಿಂದ ಕೂಡಿರುತ್ತದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ಯಾವುದೇ ಶಸ್ತ್ರಚಿಕಿತ್ಸೆಯನ್ನು ಇಂದು ಮಾಡಿಸಿಕೊಳ್ಳಬೇಡಿ.

ಧನು ರಾಶಿ :- ಇಂದು ನಿಮಗೆ ಶುಭ ದಿನ. ಹೊಸ ಕಾರ್ಯದ ಆಯೋಜನೆ ಯಶಸ್ವಿಯಾಗಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಪದೋನ್ನತಿ ಸಿಗುವ ಸಾಧ್ಯತೆ ಇದೆ.

ಮಕರ ರಾಶಿ :- ಶಾರೀರಿಕ ಮತ್ತು ಮಾನಸಿಕ ಚಿಂತೆಯಿಂದ ಮನಸ್ಸು ವ್ಯಗ್ರವಾಗಿರುತ್ತದೆ. ಯಾರೊಂದಿಗೂ ಜಗಳ ಮಾಡಬೇಡಿ. ದಾಂಪತ್ಯ ಬದುಕಿನಲ್ಲಿ ಸಮಸ್ಯೆ ಉಂಟಾಗಬಹುದು.

ಕುಂಭ ರಾಶಿ :- ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮೀನ ರಾಶಿ :- ಆನಂದ ಮತ್ತು ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ, ಆದಾಯ ಹೆಚ್ಚುತ್ತದೆ. ಮಿತ್ರರ ಭೇಟಿಯಿಂದ ಸಂತಸಗೊಳ್ಳಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗವಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply