ನಟ ಸೂರ್ಯ ಯಾಕೆ ಎರಡು ಸಲ ಮದುವೆಯಾದರು ಗೊತ್ತಾ.?

ತಮಿಳು ಹೀರೋ ಸೂರ್ಯ ದೊಡ್ಡ ನಟರಾದ ಶಿವಕುಮಾರ್ ಮಗ. ಇವರು ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ ಯಾವಾಗಲೂ ಕೈಯಲ್ಲಿ ಹಣ ಇರುತ್ತಿರಲಿಲ್ಲ, ಮಿಡ್ಲ್ ಕ್ಲಾಸ್ ಲೈಫ್, ಅದಕ್ಕೆ ಕಾರಣ ಶಿವಕುಮಾರ್ ಗೆ ಇರುವ ಅತಿಯಾದ ಒಳ್ಳೆಯತನ.


ಯಾರಲ್ಲಿಯೂ ಗಟ್ಟಿಯಾಗಿ ಸಂಭಾವನೆ ಕೇಳುತ್ತಿರಲಿಲ್ಲ ಶಿವಕುಮಾರ್. ನಿರ್ಮಾಪಕರು ಕಷ್ಟದಲ್ಲಿ ಇದ್ದರೆ ಫ್ರೀಯಾಗಿ ಸಿನಿಮಾ ಮಾಡುತ್ತಿದ್ದರು. ಈ ಕಡೆ ಸೂರ್ಯಗೆ ಆಕ್ಟಿಂಗ್ ಅಂದ್ರೆ ಇಷ್ಟ ಇಲ್ಲ. ತಂದೆಗೆ ಮಾತ್ರ ಮಗನನ್ನು ಹೀರೋ ಆಗಿ ಮಾಡಬೇಕು ಅನ್ನೋ ಆಸೆ.

ನಾನು ಬಿಸಿನೆಸ್ ಮಾಡುತ್ತೇನೆ ಎಂದು ಇಂಪೋರ್ಟ್ ಎಕ್ಸ್ಪೋರ್ಟ್ ಕಂಪನಿ ಶುರುಮಾಡಿದ್ರು ಸೂರ್ಯ. ದಿನಕ್ಕೆ 200km ತಿರುಗೋದು, 18 ಘಂಟೆ ಕೆಲಸ ಮಾಡೋದು. ಆದ್ರೆ ಕೈಗೆ ಹಣ ಬರುತ್ತಿರಲಿಲ್ಲ. ಆಗ ಮನೆಯವರ ಒತ್ತಾಯಕ್ಕೆ ಸಿನಿಮಾ ಮಾಡಲು ಒಪ್ಪಿಕೊಂಡ್ರು ಸೂರ್ಯ.

ಕುಟುಂಬ ಪೋಷಣೆಗಾಗಿ ಆಕ್ಟಿಂಗ್ ಸ್ಟಾರ್ಟ್ ಮಾಡಿದ ಸೂರ್ಯ ಮೊದಲ ಚಿತ್ರಕ್ಕೆ 50 ಸಾವಿರ ಸಂಭಾವನೆ ಪಡೆದು ನಟಿಸಿದರು. ನಂತರ ಜ್ಯೋತಿಕಾ ಜೊತೆ ಮೂರು ಚಿತ್ರಗಳನ್ನು ಮಾಡಿದ ಸೂರ್ಯಾಗೆ ಜ್ಯೋತಿಕಾ ಜೊತೆ ಅಫೇರ್ ಇದೆ ಎಂದು ನ್ಯೂಸ್ ಕ್ರಿಯೇಟ್ ಮಾಡಿದ್ರು ಮೀಡಿಯಾ.


ಅಲ್ಲಿಯವರೆಗೂ ಜ್ಯೋತಿಕಾರಲ್ಲಿ ಮಾತನಾಡದ ಸೂರ್ಯ, ಗಾಸಿಪ್ ಗಳ ಬಗ್ಗೆ ಮಾತಾಡಲು ಶುರು ಮಾಡಿದರು. ಇಬ್ಬರ ಮದ್ಯೆ ಲವ್ ಸ್ಟಾರ್ಟ್ ಆಯಿತು. ಈ ವಿಷಯ ಮನೆಯಲ್ಲಿ ಹೇಳಿದಾಗ ಸುತರಾಂ ಒಪ್ಪಲಿಲ್ಲ. ತಂದೆಗೆ ಈ ಮದುವೆ ಇಷ್ಟ ಇರಲಿಲ್ಲ.

ಆಗ ಜ್ಯೋತಿಕಾಗೆ ಕೊಟ್ಟ ಮಾತಿಗಾಗಿ ತಂದೆಯನ್ನು ಎದುರಿಸಿ ಸೀಕ್ರೆಟ್ ಆಗಿ ಮದುವೆಯಾದರು ಸೂರ್ಯ. ಆಗ ವಿಧಿಯಿಲ್ಲದೆ ಅಧಿಕೃತವಾಗಿ  ಮತ್ತೆ ಮದುವೆ ಮಾಡಿದ್ರು ಮನೆಯವರು. ಹೀಗೆ ಎರಡು ಬಾರಿ ಜ್ಯೋತಿಕಾರನ್ನು ಮದುವೆಯಾದರು ಸೂರ್ಯ.

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು

Leave a Reply