ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಏಕೆಂದರೆ.. ಹೆಲ್ತ್ ಟಿಪ್ಸ್

ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಎಚ್ಚರವಿರಲಿ ಈ ರೋಗ ಬರಬಹುದು

ನಿಮ್ಮಲ್ಲಿ ಯಾರಾದರೊಬ್ಬರು ಹಲವು ದಿನಗಳವರೆಗೆ ಒಂದು ಅಂಡರ್‌ವೇರ್ ಧರಿಸಿರಬಹುದು. ಕೆಲವರಿಗೆ ಇಂತಹ ಗಲೀಜಾದ ಅಂಡರ್‌ವೇರ್‌ ಧರಿಸಿ ಅಭ್ಯಾಸವಾಗಿದೆ. ಹುಡುಗಿಯರು ಬ್ರಾ ಹಾಗೂ ಹುಡುಗರು ಬನಿಯನ್‌ ಎರಡು ಮೂರು ದಿನ ಧರಿಸುತ್ತಾರೆ. ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಪಾಲಿಸುತ್ತಾರೆ. ನೀವು ಕೂಡ ಹಾಗೆ ಮಾಡುತ್ತಿದ್ದರೆ ಎಚ್ಚರವಿರಲಿ. ಯಾಕೆಂದರೆ ಗಲೀಜಾದ ಅಂಡರ್‌ವೇರ್ ಧರಿಸಿದರೆ ಅದರಿಂದ ಸಮಸ್ಯೆಗಳು ಸಹ ಹೆಚ್ಚುತ್ತದೆ.
ಗಲೀಜಾದ ಅಂಡರ್‌ಗಾರ್ಮೆಂಟ್ಸ್ :

ಗಲೀಜಾದ ಅಂಡರ್‌ಗಾರ್ಮೆಂಟ್ಸ್ ಹೆಚ್ಚು ಅನ್‌ಹೈಜಿನ್‌ ಹಾಗೂ ಅನ್‌ಹೆಲ್ತಿಯಾಗಿರುತ್ತದೆ. ನೀವು ಸ್ನಾನ ಮಾಡದೆ ಇದ್ದರೆ ಹೇಗೆ ಕೊಳೆ ದೇಹ ಪೂರ್ತಿಯಾಗಿ ಹರಡುತ್ತದೆಯೋ? ಅದೆ ರೀತಿ ಅಂಡರ್‌ಗಾರ್ಮೆಂಟ್‌ನಿಂದನೂ ಶರೀರ ಪೂರ್ತಿಯಾಗಿ ಕೊಳೆಯಾಗುತ್ತದೆ. ಬಿಸಿಲು ಮತ್ತು ಗಾಳಿಯಿಂದ ದೂರವಿದ್ದು ದಿನಪೂರ್ತಿಯಾಗಿ ಜನನಾಂಗದ ಸಂಪರ್ಕದಲ್ಲಿದ್ದರೆ ಅದರಿಂದ ಅಂಡರ್‌ಗಾರ್ಮೆಂಟ್ಸ್‌ನಲ್ಲಿ ಹೆಚ್ಚು ಕೀಟಾಣುಗಳು ಹುಟ್ಟಿಕೊಳ್ಳುತ್ತದೆ. ಇದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಪ್ರೈವೆಟ್‌ ಪಾರ್ಟ್‌ನಲ್ಲಿ ಇನ್‌ಫೆಕ್ಷನ್‌ ಹರಡುತ್ತದೆ.

ಈ ಸಮಸ್ಯೆ ಉಂಟಾಗುತ್ತದೆ :

ಕೆಲವೊಮ್ಮೆ ಸೋಮಾರಿತನ ಉಂಟಾದರೆ ಅಥವಾ ಚಳಿಗಾಲದಲ್ಲಿ ಸ್ನಾನ ಮಾಡೋದನ್ನು ಸ್ಕಿಪ್‌ ಮಾಡುತ್ತಾರೆ. ಈ ಸಂದರ್ಭದಲ್ಲಿ ಅಂಡರ್‌ಗಾರ್ಮೆಂಟ್ಸ್‌ನ್ನು ಸಹ ಬದಲಾಯಿಸೋದಿಲ್ಲ. ಆದರೆ ಇದನ್ನು ನಾವು ಪ್ರತಿದಿನ ಬದಲಾಯಿಸಬೇಕು. ನೀವು ಬದಲಾಯಿಸದೆ ಇದ್ದರೆ ನಿಮಗೆ ಕಿಡ್ನಿ ಸಮಸ್ಯೆ ಅಥವಾ ಯುಟಿಐ ಎಂಬ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ.

ಕೊಳಕಾದ ಅಂಡರ್‌ ಗಾರ್ಮೆಂಟ್ಸ್‌ ಧರಿಸೋದರಿಂದಲೂ ಕಿಡ್ನಿ ಸ್ಟೋನ್‌ ಉಂಟಾಗುತ್ತದೆ. ಹೇಗೆಂದರೆ ಅದನ್ನು ಬದಲಾಯಿಸದೆ ಧರಿಸುತ್ತಿದ್ದರೆ ಗುಪ್ತಾಂಗದಲ್ಲಿ ಇನ್‌ಫೆಕ್ಷನ್‌ ಉಂಟಾಗುತ್ತದೆ. ಇದರಿಂದ ಕಿಡ್ನಿ ಸ್ಟೋನ್‌ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಪ್ರತಿದಿನ ಅಂಡರ್‌ವೇರ್‌ ಬದಲಾಯಿಸಿ. ನಿಮ್ಮ ಆರೋಗ್ಯದ ರಕ್ಷಣೆ ಮಾಡಿ.
ಇಷ್ಟೇ ಅಲ್ಲದೆ ಕೊಳಕಾದ ಅಂಡರ್‌ಗಾರ್ಮೆಂಟ್ಸ್‌ ಧರಿಸೋದರಿಂದ ಯುಟಿಐ ಸಮಸ್ಯೆ ಉಂಟಾಗುತ್ತದೆ. ಈ ಇನ್‌ಫೆಕ್ಷನ್‌ ಹೆಚ್ಚಾದರೆ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಮಾತ್ರವಲ್ಲ ಸ್ಕಿನ್‌ ಸಮಸ್ಯೆಗಳು ಸಹ ಉಂಟಾಗುತ್ತದೆ. ಅಲ್ಲದೆ ಗುಪ್ತಾಂಗದಲ್ಲಿ ತುರಿಕೆ ಹಾಗೂ ರಾಶಸ್‌ ಕಂಡು ಬರುತ್ತದೆ.

Leave a Reply